ಗೃಹಲಕ್ಷ್ಮಿ ಯೋಜನೆಯ 2000/- ಜಮಾ ಆಗಿಲ್ಲವೇ? ಚಿಂತೆ ಬೇಡ ಇದಕ್ಕೆ ಪರಿಹಾರ ಇಲ್ಲಿದೆ ನೋಡಿ..
ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಜಾರಿಗೆ ಬಂದು 1 ತಿಂಗಳು ಆಗಿದೆ, ಇದುವರೆಗೂ ಒಟ್ಟು 1.13 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ, ಇವರಲ್ಲಿ ಕೇವಲ 82 ಲಕ್ಷ ಮಹಿಳೆಯರಿಗೆ 2000/- ಹಣ ಜಮೆ ಆಗಿದೆ. ಇನ್ನು ಹಲವಾರು ಮಹಿಳೆಯರಿಗೆ ಯೋಜನೆಯ ಮೊದಲ ಕಂತಿನ ಹಣ ಜಮಾ ಆಗಿಲ್ಲ. ಹಾಗಿದ್ದರೆ ಇದಕ್ಕೆ ಪರಿಹಾರ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಯೋಜನೆಯ ಹಣ ಪಡೆಯಲು ಇಲ್ಲಿವೆ 3 ನಿಯಮಗಳು
ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿಯು ಸಲ್ಲಿಕೆಯಾಗಿದ್ದಲ್ಲಿ ಮಾತ್ರ ಗೃಹಲಕ್ಷ್ಮಿ ಯೋಜನೆಯ 2000/- ಹಣ ಪಡೆಯಬಹದು.
1} ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಗೊಂಡಿರಬೇಕು, ಸೀಡಿಂಗ್ ಆಗಿರಬೇಕು ಜೊತೆಗೆ NPCI ಕೂಡ ಕಡ್ಡಾಯವಾಗಿ ಆಗಿರಲೇಬೇಕು.
2} ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಿ ಆಗ ಅರ್ಜಿಯ ಸ್ಥಿತಿ ಪೆಂಡಿಂಗ್ ಅಂತ ಬಂದರೆ ಅಥವಾ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲ ಎಂದು ಬಂದರೆ ನಿಮಗೆ ಸಂಬಂಧಪಟ್ಟ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಥವಾ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಎಲ್ಲ ದಾಖಲಾತಿಯೊಂದಿಗೆ ಹೋಗಿ ಅಪ್ಡೇಟ್ ಮಾಡಿಕೊಳ್ಳಬೇಕು
3} ಮನೆಯ ಮಹಿಳೆಯೇ ರೇಷನ್ ಕಾರ್ಡ್ ನಲ್ಲಿ ಯಜಮಾನಿಯಾಗಿರಬೇಕು. ಅಂದರೆ ಮಾತ್ರ ಹಣ ಜಮಾ ಆಗುತ್ತದೆ.
ಒಟ್ಟಿನಲ್ಲಿ ಮೇಲಿನ ಎಲ್ಲಾ 3 ನಿಯಮಗಳು ನೀವು ಪಾಲಿಸಿದ್ದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣವು ಕಡ್ಡಾಯವಾಗಿ ಜಮಾ ಆಗುತ್ತದೆ. ಇದರಲ್ಲಿ ಯಾವುದೇ ಸಂದೇಹ ಬೇಡ..
Tags
Govt.scheme