ಸ್ವಾವಲಂಬಿ ಸಾರಥಿ ಯೋಜನೆ : 4 ಚಕ್ರದ ವಾಹನ ಖರೀದಿಸಲು ಸಹಾಯಧನ:

ಸ್ವಾವಲಂಬಿ ಸಾರಥಿ ಯೋಜನೆ : 4 ಚಕ್ರದ ವಾಹನ ಖರೀದಿಸಲು ಸಹಾಯಧನ:




ವೀರಶೈವ ಲಿಂಗಾಯತ ಹಿಂದುಳಿದವರನ್ನು ಗಮನದಲ್ಲಿಟ್ಟುಕೊಂಡು ವೀರಶೈವ ಲಿಂಗಾಯತ ಸಮುದಾಯದ ಜನರನ್ನು ಸಬಲೀಕರಣಗೊಳಿಸುವ ಮತ್ತು ಸಬಲೀಕರಣದ ಏಕೈಕ ಉದ್ದೇಶದಿಂದ ಈ ನಿಗಮವನ್ನು ರಚಿಸಲಾಗಿದೆ. ಕರ್ನಾಟಕದ ಅಂದಿನ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪರವರು 17.11.2020 ರಂದು ನಿಗಮ ಸ್ಥಾಪನೆನ್ನು ಮಾಡಲಾಗಿದೆ.

ಉದ್ದೇಶ ಮತ್ತು ದೃಷ್ಟಿಕೋನ :

ವೀರಶೈವ ಲಿಂಗಾಯತರು ಕರ್ನಾಟಕದಲ್ಲಿ ಬಹು ಸಂಖ್ಯಾತರು. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಇನ್ನೂ ಶೇಕಡ 50ಕ್ಕಿಂತ ಹೆಚ್ಚು ಹಿಂದುಳಿದಿದ್ದಾರೆ. ಅವರು ಇತರ ಮುಂದುವರೆದಿರುವ ಸಮಾಜದೊಡನೆ ಸರಿಸಮವಾಗಿ ಬೆಳೆಸಲು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ ಸ್ಥಾಪಿಸಿ, ಈ ಮೂಲಕ ಆರ್ಥಿಕ ಸೌಲಭ್ಯಗಳನ್ನು ಕೊಟ್ಟು ಅಭಿವೃದ್ಧಿ ಹೊಂದಲು ಸಹಕಾರಿಯಾಗಬೇಕಾಗಿದೆ. ಇದು ಸಮಾಜದ ಬಹಳ ವರ್ಷಗಳ ಒತ್ತಾಯ ಕೂಡ ಆಗಿತ್ತು.
ಅದ ಕಾರಣ ಸರ್ಕಾರ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ ಸ್ಥಾಪಿಸಿ ಸಮಾಜದ ಅಭಿವೃದ್ಧಿಗೆ ನೆರವು ನೀಡಲು ಸರ್ಕಾರದ ಬಜೆಟ್‌ ನಲ್ಲಿ ರೂ.500-00 ಕೋಟಿ ಮೀಸಲಿಟ್ಟಿದೆ. ಸಮಾಜದ ಏಳಿಗೆಗೆ ಈ ನಿಗಮವು ಹಿಂದುಳಿದವರನ್ನು ಗುರುತಿಸಿ ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಕಾರ್ಯನಿರ್ವಹಿಸುತ್ತಿದೆ.

whatss

ಯೋಜನೆ ಬಗ್ಗೆ ಮಾಹಿತಿ :

✔  ಹಿಂದುಳಿದ ವರ್ಗಗಳ ಪ್ರವರ್ಗ-1,  2ಎ,  ಮತ್ತು 3ಬಿ ಗೆ ಸೇರಿರಬೇಕು.
 
✔  ಲಘುವಾಹನ ಚಾಲನ ಪರವಾನಾಗಿ ಹೊಂದಿರಬೇಕು.

✔  ಸ್ವಯಂ ಉದ್ಯೋಗ ಉದ್ದೇಶಕ್ಕೆ 4ಚಕ್ರದ ವಾಹನ ಖರೀದಿಸಲು 

✔  ಸಾಲದ ಮೊತ್ತದಲ್ಲಿ ಶೇ 50% ರಷ್ಟು ಅಥವಾ ಗರಿಷ್ಟ ರೂಪಾಯಿ 3 ಲಕ್ಷಗಳ ಸಹಾಯಧನ 
ಉಳಿದ ಮೊತ್ತ ರಾಷ್ಟ್ರೀಕೃತ ಬ್ಯಾಂಕ್ ನಿಂದ ಸಾಲ

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

❋  ಜಾತಿ ಮತ್ತು ಆದಾಯ ಪ್ರಮಾಣಪತ್ರ 

❋  ಆಧಾರ್ / ಚುನಾವಣಾ ಗುರುತಿನ ಚೀಟಿ/ ಪಡಿತರ ಚೀಟಿ 

❋  ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಯ ಪ್ರತಿ 

❋  ನಾಲ್ಕು ಚಕ್ರವಾಹನ ಚಾಲನ ಪರವಾನಗಿ ಪ್ರತಿ 

❋  ಪಾಸ್ ಪೋರ್ಟ್ ಅಳತೆಯ ಭಾವಚಿತ್ರ 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು