ಖಾಸಗಿ ಸಾರಿಗೆ ಸಂಘಟನೆಗಳ ಬಂದ್ ಬೆನ್ನಲ್ಲೇ, ಸರ್ಕಾರಕ್ಕೆ ಮತ್ತೊಂದು ತಲೆನೋವು ಎದುರಾಗಿದೆ. ಸರ್ಕಾರದ ವಿರುದ್ಧ ರಸ್ತೆಗಿಳಿಯಲು KSRTC ನೌಕರರು ಸಜ್ಜಾಗಿದ್ದಾರೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ತಯಾರಿ ನಡೆಸಿದ್ದಾರೆ. ಪ್ರತಿಭಟನೆಗೆ ಸಿದ್ಧರಾಗುವಂತೆ KSRTC ಸಾಫ್ಟ್ ಅಂಡ್ ವರ್ಕರ್ಸ್ ಫೆಡರೇಷನ್ ಪತ್ರ ಬರೆದಿದೆ. ಬಿಎಂಟಿಸಿ ನೌಕರರಿಗೆ ಶೇಕಡಾ ೮.೩೩ ಬೋನಸ್ ಕೊಡಬೇಕು. ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲು ಹಾಕಿರುವ ನಿರ್ಬಂಧ ತೆಗೆಯಬೇಕು. ನೌಕರರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯುವುದು ಸೇರಿದಂತೆ, ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇನ್ನು ಬಿಎಂಟಿಸಿ MD ಸತ್ಯವತಿಗೆ ಯೂನಿಯನ್ ಕಂಡರೆ ಆಗೋದಿಲ್ಲ. BMTC ಯಲ್ಲಿ ಸಾಕಷ್ಟು ಸಮಸ್ಯೆ ಇದೆ, ಬಿಎಂಟಿಸಿ ಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದೆ. ಮಾಧ್ಯಮಗಳೊಂದಿಗೆ ಸಮಸ್ಯೆ ಹಂಚಿಕೊಂಡ್ರೆ ಸಸ್ಪೆಂಡ್ ಮಾಡ್ತಾರೆ. ಬಿಎಂಟಿಸಿಯ ಅವಾಂತರಗಳು ರಾಜ್ಯಕ್ಕೆ ಗೊತ್ತಾಗಬೇಕು ಎಂದು ಅನಂತ ಸುಬ್ಬರಾವ್ ಹೇಳಿದ್ದಾರೆ.
ಬಿಎಂಟಿಸಿ ಯಲ್ಲಿ ಕೆಟ್ಟ ಸಮಸ್ಯೆಗಳಿವೆ, ಹೀಗಾಗಿ ಬಿಎಂಟಿಸಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ, ಚಳುವಳಿ ಮಾಡ್ತೇವೆ ಎಂದಿರುವ ಅನಂತ ಸುಬ್ಬುರಾವ್ ಅವರು ಸಾರಿಗೆ ಸಚಿವರಿಗೆ ಸಭೆ ಆಯೋಜಿಸುವಂತೆ ತಾಕೀತು ಮಾಡಿದ್ದಾರೆ.
ಇಲಾಖೆಯಲ್ಲಿ 1 ಲಕ್ಷ 15 ಸಾವಿರ ಜನ ಸಾರಿಗೆ ನೌಕರರಿದ್ದಾರೆ, ಕಳೆದ ಸರ್ಕಾರ ಒಂದೇ ಪ್ರತಿಭಟನೆಗೆ 15% ವೇತನ ಹೆಚ್ಚಳ ಮಾಡಿತ್ತು. ಅದೇ ಸರ್ಕಾರ ಇದ್ದಾರೆ ನಮಗೆ ಈಗಾಗಲೇ ಅರಿಯರ್ಸ್ ಹಣ ಬರುತ್ತಿತ್ತು. ಈ ಸರ್ಕಾರದ ಮೇಲೆಯೂ ನಂಬಿಕೆ ಇದೆ.
ಶಕ್ತಿಯೋಜನೆ ಜಾರಿ ಆದ ಮೇಲೆ ಸಾಕಷ್ಟು ಸಮಸ್ಯೆ ಎದುರಾಗಿದೆ. ವರ್ಕರ್ ಗಳಿಗೆ ಹೆಚ್ಚಿನವರ್ಕ್ ಲೋಡ್ ಬಿದ್ದಿದೆ. ಶಕ್ತಿಯೋಜನೆ ಹಣವನ್ನು ಸರಿಯಾಗಿ ಸರ್ಕಾರ ಕೊಡುತ್ತಿಲ್ಲ. ನೌಕರರಿಗೆ ಕಳೆದ 10 ವರ್ಷದಿಂದ ಬೋನಸ್ ಬಂದಿಲ್ಲ. ಸದ್ಯದಲ್ಲಿಯೇ ಸಾರಿಗೆ ಸಚಿವರನ್ನ ಭೇಟಿ ಮಾಡ್ತೇವೆ ಎಂದು ಸುಬ್ಬುರಾವ್ ತಿಳಿಸಿದ್ದಾರೆ.
Tags
News