ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಾಯಿಸಬೇಕಾದರೆ ತಗಲುವ ವೆಚ್ಚವೆಷ್ಟು? ಕೇಳಿದ್ರೆ ಶಾಕ್ ಆಗ್ತೀರಾ!!!!!!

ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಾಯಿಸಬೇಕಾದರೆ ತಗಲುವ ವೆಚ್ಚವೆಷ್ಟು? ಕೇಳಿದ್ರೆ ಶಾಕ್ ಆಗ್ತೀರಾ!!!!!!



   
ನಮ್ಮ ದೇಶವನ್ನು ಇಂಡಿಯಾ ಮತ್ತು ಭಾರತ ಎಂದು ಎರಡೂ ಹೆಸರುಗಳಿಂದ ಕರೆಯಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಇಂಡಿಯಾ ಕೈಬಿಟ್ಟು, ಭಾರತ ಎಂದು ಅಧಿಕೃತವಾಗಿಸಲು ಯೋಜಿಸುತ್ತಿದೆ ಎಂಬ ದೊಡ್ಡ ಉಹಾಪೋಹವಿದೆ. ಅಲ್ಲದೆ ಈ ತಿಂಗಳ 18 ಮತ್ತು 22 ರ ನಡುವೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದ್ದು, ಈ ವೇಳೆ ಈ ವಿಷಯವನ್ನು ಪ್ರಸ್ತಾಪಿಸಬಹುದು ಎನ್ನಲಾಗುತ್ತಿದೆ. ಜಿ-20 ಶೃಂಗಸಭೆ ಸಂದರ್ಭದಲ್ಲಿ ಆಯಾ ರಾಷ್ಟ್ರಗಳ ನಾಯಕರಿಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳುಹಿಸಿದ್ದ ಅಹ್ವಾನ ಪತ್ರಿಕೆಗಳನ್ನು ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ, ಪ್ರೆಸಿಡೆಂಟ್ ಆಫ್ ಭಾರತ ಎಂದು ಉಲ್ಲೇಖಿಸಿರುವುದರಿಂದ ಈ ವಿಷಯ ದೊಡ್ಡದಾಗುತ್ತ ಬಂದೆಡೆ. ಒಂದು ವೇಳೆ ದೇಶದ ಹೆಸರನ್ನು ಭಾರತ ಎಂದು ಬದಲಾಯಿಸಿದ್ದೆ ಆದರೆ ತಗಲುವ ಖರ್ಚನ್ನು ಅಂದಾಜಿಸಲಾಗಿದ್ದು, ಎಷ್ಟು ಮತ್ತು ಹೇಗೆ ಅಂದಾಜಿಸಲಾಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ತಪ್ಪದೆ ಸಂಪೂರ್ಣ ಲೇಖನ ಓದಿ ಮಾಹಿತಿ ಪಡೆಯಿರಿ.

ದೇಶದ ಹೆಸರು ಬದಲಾಯಿಸುವುದು ದುಬಾರಿ ಕೆಲಸ !!

                 ಯಾವುದೇ ದೇಶದ ಹೆಸರನ್ನು ಬದಲಾಯಿಸುವುದು ತುಂಬಾ ದುಬಾರಿಯಾಗಿದೆ. ಹೆಸರು ಬದಲಿಸಿಕೊಂಡ ಹಿಂದಿನ ಇತಿಹಾಸ ಮತ್ತು ಹಲವು ಉದಾಹರಣೆಗಳನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ದಕ್ಷಿಣ ಆಫ್ರಿಕಾದ ಬೌದ್ಧಿಕ ಆಸ್ತಿ ವಕೀಲ ಮತ್ತು ಬ್ಲಾಗರ್ ಡಾರೆನ್ ಒಲಿಯರ್ ಮಾದರಿಯ ಪ್ರಕಾರ, ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸುವ ಸುಮಾರು 14 ಸಾವಿರ ಕೋಟಿ ಹೆಚ್ಚು ವೆಚ್ಚವಾಗುತ್ತದೆ ಎಂದು ಔಟ್ ಲುಕ್ ಸುದ್ಧಿವಾಹಿನಿ ವರದಿ ಮಾಡಿದೆ. ಇಂಡಿಯಾ ಹೆಸರನ್ನು ಬದಲಾಯಿಸಿದರೆ, ಭಾರತವನ್ನು ಈಗ ಇಂಡಿಯಾ ಎಂದು ಕರೆಯುವ ಪ್ರತಿಯೊಂದು ಸ್ಥಳವನ್ನು ಬದಲಾಯಿಸಬೇಕಾಗುತ್ತದೆ. ಕರೆನ್ಸಿ ನೋಟುಗಳಿರಲಿ, ಆಧಾರ್ ಕಾರ್ಡ್ ಇರಲಿ, ಪ್ಯಾನ್ ಕಾರ್ಡ್ ಇರಲಿ, ಬ್ಯಾಂಕ್ ಖಾತೆಗಳಿರಲಿ ಹಲವು ಕಡೆ ದೇಶದ ಹೆಸರನ್ನು ಬದಲಾಯಿಸಬೇಕಾಗುತ್ತದೆ.
2018ರಲ್ಲಿ ಆಫ್ರಿಕನ್ ದೇಶವಾದ ಸ್ವಾಜಿಲ್ಯಾಂಡ್ ತನ್ನ ಹೆಸರನ್ನು ಇಸ್ವಾಟಿನಿ ಎಂದು ಬದಲಾಯಿಸಲು ಒಟ್ಟು ಆದಾಯದ ಶೇ 6ರಷ್ಟು ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

whatss


14 ಸಾವಿರ ಕೋಟಿಗಿಂತಲೂ ಹೆಚ್ಚು ವೆಚ್ಚ !!

2023ರ ಮಾರ್ಚ್ 31 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆದಾಯ 23.84 ಲಕ್ಷ ಕೋಟಿ ರೂ ಆಗಿದೆ. ಇಲ್ಲಿ ಒಲಿವರ್ ಮಾದರಿಯನ್ನು ನೋಡುವುದಾದರೆ ಇಂಡಿಯಾ ಸುಮಾರು 14 ಸಾವಿರ ಕೋಟಿ ರೂ ಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಇದು ಭಾರತವು ಪ್ರತಿ ತಿಂಗಳು ಆಹಾರ ಭದ್ರತೆಗಾಗಿ ಖರ್ಚು ಮಾಡುವುದಕ್ಕಿಂತ ಹೆಚ್ಚು ಎಂದು ವರದಿ ಮಾಡಲಾಗಿದೆ. ಅನೇಕ ರಾಜಕೀಯ ನಾಯಕರು ಇಂಡಿಯಾ ಒಂದು ಬ್ರಾಂಡ್ ಎಂದು ಹೇಳುತ್ತಾರೆ. ಒಂದು ವೇಳೆ ನಾವು ಹೆಸರನ್ನು ಬದಲಾಯಿಸಿದರೆ ನಾವು ಬ್ರ್ಯಾಂಡ್ ಕಳೆದುಕೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.


   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು