ವಾಟ್ಸಪ್ ಹೊಸ ಫಿಚರ್ ಚಾನಲ್ ಆರಂಭ! ಏನಿದು? ಬಳಕೆ ಹೇಗೆ?
ಭಾರತ ಸೇರಿದಂತೆ ವಿಶ್ವದ ವಿವಿಧೆಡೆ ಚಾನಲ್ ಎಂಬ ಹೊಸ ಫಿಚರ್ ಅನ್ನು ವಾಟ್ಸಾಪ್ ಪ್ರಾರಂಭಿಸಿದೆ.
ಮೆಟಾ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್ ಬರ್ಗ್ ಅವರು ಬುಧವಾರ ಭಾರತ ಸೇರಿದಂತೆ ವಿಶ್ವದ 150 ಕ್ಕೂ ಹೆಚ್ಚು ದೇಶಗಳಲ್ಲಿ ಹೊಸ ಫಿಚರ್ ವಾಟ್ಸಾಪ್ ಚಾನಲ್ ಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ವಾಟ್ಸಾಪ್ ಚಾನಲ್ ಗಳು ಒನ್-ವೇ ಬ್ರಾಡ್ ಕಾಸ್ಟ್ ಸಾಧನಗಳಾಗಿವೆ.ಇದು ಜನರು ಮತ್ತು ಸಂಸ್ಥೆಗಳಿಂದ ಲೇಟೆಸ್ಟ್ ಅಪ್ ಡೇಟ್ ಗಳನ್ನು ಸ್ವೀಕರಿಸಲು ಖಾಸಗಿ ಮಾರ್ಗವನ್ನು ಒದಗಿಸುತ್ತವೆ. ವಾಟ್ಸಾಪ್ ಬಳಕೆದಾರರಿಗೆ ಇದರಿಂದ ಅನುಕೂಲವಾಗಬಹುದು.
ಮಾರ್ಕ್ ಜುಕರ್ ಬರ್ಗ್ ಹೇಳಿಕೆಯಲ್ಲಿ " ನೀವು ಅನುಸರಿಸುವ ಜನರು ಮತ್ತು ಸಂಸ್ಥೆಗಳಿಂದ ಅಪ್ ಡೇಟ್ ಗಳನ್ನು ಸ್ವೀಕರಿಸಲು ಹೊಸ ಖಾಸಗಿ ಮಾರ್ಗವಾದ ವಾಟ್ಸಾಪ್ ಚಾನಲ್ ಗಳಿಗೆ ನಿಮ್ಮೆಲ್ಲರನ್ನು ಪರಿಚಯಿಸಲು ಉತ್ಸುಕನಾಗಿದ್ದೇನೆ. ಮೆಟಾ ಸುದ್ದಿ ಮತ್ತು ಅಪಡೇಟ್ ಗಳನ್ನು ಹಂಚಿಕೊಳ್ಳಲು ನಾನು ಈ ಚಾನಲ್ ಪ್ರಾರಂಭಿಸುತ್ತಿದ್ದೇನೆ. ಜಗತ್ತಿನಾದ್ಯಂತ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ನ್ಯೂ ಟ್ಯಾಬ್ ನಲ್ಲಿ ಬರುತ್ತೆ ಈ ಚಾನಲ್ :
ಹೊಸ ಟ್ಯಾಬ್ ನಲ್ಲಿ ಕಂಪನಿಯು ಚಾನಲ್ ಅನ್ನು ಪರಿಚಯಿಸುತ್ತದೆ. ಅಲ್ಲಿ ಬಳಕೆದಾರರು ಅವರು ಅನುಸರಿಸಿದ ಸ್ಥಿತಿ ಮತ್ತು ಚಾನಲ್ ಗಳನ್ನು ಸುಲಭವಾಗಿ ಹುಡುಕಬಹುದು. ಈ ವಿಶೇಷ ಟ್ಯಾಬ್ ಕುಟುಂಬ, ಸ್ನೇಹಿತರು ಮತ್ತು ಸಮುದಾಯದೊಂದಿಗೆ ಚಾಟ್ ಮಾಡುವ ವೈಶಿಷ್ಠ್ಯಕ್ಕಿಂತ ಭಿನ್ನವಾಗಿದೆ.
ಜುಕರ್ ಬರ್ಗ್ ತಮ್ಮದೇ ವಾಟ್ಸಾಪ್ ಚಾನಲ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡ, ಕತ್ರಿನಾ ಕೈಫ್, ದಿಲ್ಜಿತ್ ದೊಸಂಜ, ಅಕ್ಷಯ್ ಕುಮಾರ್, ವಿಜಯ್ ದೇವರಕೊಂಡ್, ನೇಹಾ ಕಕ್ಕರ್ ತಮ್ಮ ವಾಟ್ಸಾಪ್ ಚಾನಲ್ ಗಳನ್ನೂ ಪ್ರಾರಂಭಿಸಲಾಗಿದೆ. ಇದಲ್ಲದೆ, ಕಂಪನಿಯು ತನ್ನದೇ ಆದ ವಾಟ್ಸಾಪ್ ಚಾನಲ್ ಅನ್ನು ಸಹ ಶುರುಮಾಡಿದೆ. ಅಲ್ಲಿ ವಾಟ್ಸಾಪ್ ತಯಾರಿಸುವ ಉತ್ಪನ್ನಗಳ ಅಪ್ ಡೇಟ್ ಗಳನ್ನು ನೀಡುತ್ತಿದೆ.
ಜನರಿಗೆ ಚಾನಲ್ ಕ್ರಿಯೇಟ್ ಮಾಡಲು ಅವಕಾಶ :
"ವಾಟ್ಸಾಪ್ ಅಪಡೇಟ್ ಮಾಡುವ ಮೂಲಕ ಚಾನಲ್ ಗಳನ್ನು ಕಾಣಬಹುದು. ಅಲ್ಲಿ ನೀವು ಸ್ಥಿತಿ ಹಾಗೂ ನೀವು ಅನುಸರಿಸುವ ಚಾನಲ್ ಗಳನ್ನು ಗಮನಿಸುವಿರಿ.ಕೆಲವೇ ದಿನಗಲ್ಲಿ ಜಾಗತಿಕವಾಗಿ ವಾಟ್ಸಾಪ್ ಚಾನಲ್ ಗಳು ಪ್ರಾರಂಭವಾಗಲಿವೆ. ಮುಂದಿನ ಕೆಲವು ವಾರಗಳಲ್ಲಿ ಕಂಪನಿಯು ಮತ್ತಷ್ಟು ಹೊಸ ಫಿಚರ್ ಗಳನ್ನು ಸೇರಲಿದೆ. ಬಳಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ಚಾನಲ್ ಗಳನ್ನು ವಿಸ್ತರಿಸಲಾಗುತ್ತದೆ. ಮುಂದಿನ ತಿಂಗಳುಗಳಲ್ಲಿ ಯಾರು ಬೇಕಾದರೂ ಚಾನಲ್ ಗಳನ್ನು ಕ್ರಿಯೇಟ್ ಮಾಡಲು ಅವಕಾಶ ಮಾಡಿಕೊಡುತ್ತೇವೆ." ಎಂದು ಜುಕರ್ ಬರ್ಗ್ ತಿಳಿಸಿದ್ದಾರೆ.
ಐಸಿಸಿ ವಾಟ್ಸಾಪ್ ಚಾನಲ್ ಆರಂಭ:
" ಅಕ್ಟೊಬರ್ ನಲ್ಲಿ ಪ್ರಾರಂಭವಾಗಲಿರುವ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ನೊಂದಿಗೆ ನಾವು ವಾಟ್ಸಾಪ್ ಅಪಡೇಟ್ ಗಳ ಜೊತೆಗೆ ನಮ್ಮ ಪಾಲುದಾರಿಕೆಯನ್ನು ಪ್ರಾರಂಭಿಸಿದ್ದೇವೆ. ಒಂದು ದಶಕದ ದೀರ್ಘಾವಧಿಯ ಕಾಯುವಿಕೆಯ ನಂತರ ಭಾರತ ಈ ಪ್ರಮುಖ ಇವೆಂಟ್ ಆಯೋಜಿಸುತ್ತಿದೆ. ಹೀಗಾಗಿ ನಾವು ಕೂಟವನ್ನು ಉತ್ಸಾಹದಿಂದ ಎದುರು ನೋಡುತ್ತಿದ್ದೇವೆ. ಚಾನಲ್ ಗಳನ್ನು ರಚಿಸಿ ಬೆಂಬಲಿಸುತ್ತೇವೆ" ಎಂದು ತಿಳಿಸಿದೆ.
"ವಾಟ್ಸಾಪ್ ಚಾನಲ್ ಗಳ ಬಗ್ಗೆ ನಾನು ವ್ಯಯಕ್ತಿಕವಾಗಿ ಉತ್ಸುಕನಾಗಿದ್ದೇನೆ. ಏಕೆಂದರೆ ಈಗ ನಾನು ನನ್ನ ಜೀವನದ ಪ್ರಮುಖ ಅಪಡೇಟ್ ಗಳನ್ನು ಹಂಚಿಕೊಳ್ಳುವ ಸ್ಥಲವನ್ನೀಗ ಹೊಂದಿದ್ದೇನೆ. ವಾಟ್ಸಾಪ್ ನಲ್ಲಿ ನಾನು ಮಾಡುವ ಎಲ್ಲಾ ವಿಷಯಗಳ ಬಗ್ಗೆ ಅಪಡೇಟ್ ಮಾಡುತ್ತಲೇ ಇರುತ್ತೇನೆ " ಎಂದು ಸಂಗೀತ ನಿರ್ದೇಶಕ ದಿಲ್ಜಿತ್ ದೊಸಾಂಜ ಹೇಳಿದ್ದಾರೆ.
ವಾಟ್ಸಾಪ್ ಚಾನಲ್ ಭದ್ರತೆ :
ಪ್ರೊಫೈಲ್ ಫೋಟೋ ಕಾಣಿಸುತ್ತದೆ. ಆದ್ರೆ, ಚಾನಲ್ ನಿರ್ವಾಹಕರ ಫೋನ್ ಸಂಖ್ಯೆಯು ಅನುಸರಿಸುವವರಿಗೆ (ಫಾಲೋವರ್ಸ್) ಕಾಣುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಫಾಲೋ ಮಾಡುತ್ತಿರುವ ಮೊಬೈಲ್ ಸಂಖ್ಯೆಯು ಚಾನಲ್ ನಿರ್ವಾಕರಿಗೆ ಹಾಗೂ ಇತರ ಅನುಯಾಯಿಗಳೊಂದಿಗೆ ಹಂಚಿಕೆಯಾಗುವುದಿಲ್ಲ. ವಾಟ್ಸಾಪ್ ಮುಂಬರುವ ವಾರಗಳಲ್ಲಿ ಜಾಗತಿಕವಾಗಿ ಚಾನಲ್ ಗಳ ನೂತನ ವೈಶಿಷ್ಟ್ಯವನ್ನು ಪ್ರಾರಂಭಿಸುತ್ತದೆ. ಮುಂಬರುವ ತಿಂಗಳುಗಳಲ್ಲಿ ಯಾರು ಬೇಕಾದರೂ ಚಾನಲ್ ರಚಿಸಲು ಸಾಧ್ಯವಾಗಲಿದೆ. ಚಾನಲ್ ಗಳೊಂದಿಗೆ ಕಂಪನಿಯು ನಾಲ್ಕು ಅಪಡೇಟ್ ಗಳನ್ನು ಸಹ ಪರಿಚಯಿಸಿದೆ ಎಂದು ಕಂಪನಿ ಹೇಳಿದೆ.
Tags
Social