ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯ ಸರ್ಕಾರದಿಂದ ಈ ಬದಲಾವಣೆ.. ಅನ್ನಭಾಗ್ಯ ಯೋಜನೆಯ ಹಣ ಇನ್ನು ಮುಂದೆ ಬರುವುದಿಲ್ಲ!!

ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯ ಸರ್ಕಾರದಿಂದ ಈ ಬದಲಾವಣೆ..
ಅನ್ನಭಾಗ್ಯ ಯೋಜನೆಯ ಹಣ ಇನ್ನು ಮುಂದೆ ಬರುವುದಿಲ್ಲ!! 



 
ನಮಸ್ಕಾರ ಸ್ನೇಹಿತರೆ ...

ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ತಿಳಿಸುವುದೇನೆಂದರೆ ಅನ್ನಭಾಗ್ಯ ಯೋಜನೆಯಲ್ಲಿ ಸರ್ಕಾರದ ಮಹತ್ತರ ಬದಲಾವಣೆ ಬಗ್ಗೆ ಆಗಿದ್ದು, ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯು ಇದುವರೆಗೂ ಅಂದರೆ 3 ತಿಂಗಳಿನಿಂದ 5 ಕೆಜಿ ಅಕ್ಕಿ ಬದಲು ಹಣವನ್ನು ಕೊಡಲಾಗುತ್ತಿತ್ತು. ಅದರೆ ಈಗ ಅದರಲ್ಲಿ ಒಂದು ಬದಲಾವಣೆ ಅದು ಏನು ಎಂಬುದು ಇಲ್ಲಿದೆ ನೋಡಿ.

       ಗ್ಯಾರಂಟಿ ಯೋಜನೆಯ ಹಣ ಇನ್ನು ಮುಂದೆ ಬರುವುದಿಲ್ಲ. ಅನ್ನಭಾಗ್ಯ ಯೋಜನೆಯು ಈಗಾಗಲೇ ಜಾರಿಗೆ ಬಂದಿದ್ದು ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ನೀಡಲು, ಅಕ್ಕಿಯ ಅಭಾವದಿಂದಾಗಿ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯ ಬದಲಾಗಿ 170 ರೂಗಳನ್ನು ಖಾತೆಗೆ ಪ್ರತಿ ತಿಂಗಳು ಹಾಕುತ್ತಿದ್ದರು. ಆದರೆ ಇನ್ನು ಮುಂದೆ ಹೇಗೆ ಮಾಡುವುದಿಲ್ಲ. ಈಗ ಅಕ್ಕಿಯ ಕೊರತೆ ಇಲ್ಲದಿರುವುದರ ಕಾರಣ ಅಕ್ಟೋಬರ್ ತಿಂಗಳಿನಿಂದ ಎಲ್ಲರಿಗೂ ತಲಾ 10 ಕೆ ಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವೆ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.

whatss

ಹಣದ ಬದಲು ಮತ್ತೆ 10 ಕೆಜಿ ಅಕ್ಕಿ ವಿತರಿಸಲು ಮುಂದಾದ ಸರ್ಕಾರ !

       ಅಕ್ಕಿಯ ಸರಬರಾಜು ಮಾಡುವುದಕ್ಕೆ ಟೆಂಡರ್ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ಅಕ್ಕಿಯ ಕೊರತೆ ಆಗುವುದಿಲ್ಲ. ಆದ್ದರಿಂದ ಅಕ್ಟೋಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಪಡಿತರ ಚೀಟಿಯ ಫಲಾನುಭವಿಗಳಿಗೆ 10 ಕೆಜಿ ಅಕ್ಕಿಯನ್ನು ನೀಡಲಾಗುವುದು ಎಂದು ಸುದ್ಧಿಗೋಷ್ಠಿಯಲ್ಲಿ ಮುನಿಯಪ್ಪ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಆರಂಭದಲ್ಲಿ ಬರಪೀಡಿತ ಎಂದು ಘೋಷಣೆ ಮಾಡಿರುವ ತಾಲೂಕುಗಳಿಗೆ ಹಣದ ಬದಲಾಗಿ 10 ಕೆಜಿ ಅಕ್ಕಿಯನ್ನು ಕೊಡಲು ಪ್ರಾರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ಹಾಗಾಗಿ ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ದೊರೆಯಲಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು