' ಬಣ್ಣ ಬದಲಿಸುವ ಊಸರವಳ್ಳಿ ಸೀರೆ ' ಕೈಮಗ್ಗ ನೇಕಾರನ ಪ್ರತಿಭೆ ಮೆಚ್ಚಿದ ಸಚಿವ...!
ಬೆಂಕಿ ಪೊಟ್ಟಣದಲ್ಲಿ ಹಿಡಿಯುವ ರೇಷ್ಮೆ ಸೀರೆ, ಸುವಾಸನೆ ಸೂಸುವ ಸೀರೆ ಬಗ್ಗೆ ಕೇಳಿದ್ದೀರಾ. ಆದರೆ ಬಣ್ಣ ಬದಲಾಯಿಸುವ ಸೀರೆಯನ್ನು ನೀವು ಎಂದಾದರೂ ನೋಡಿದ್ದೀರಾ? ಇತ್ತೀಚಿಗೆ ರಾಜಣ್ಣ ಸಿರಿಸಿಲ್ಲದ ಕೈಮಗ್ಗ ನೇಕಾರ ವಿಜಯ್ ತಮ್ಮ ಅದ್ಭುತ ಪ್ರತಿಭೆಯನ್ನು ತೋರಿದ್ದಾರೆ.
ಸೀರೆಯ ವಿಶೇಷತೆ :
ಬಣ್ಣ ಬದಲಾಯಿಸುವ ಊಸರವಳ್ಳಿ ಸೀರೆ ವಿನ್ಯಾಸ ಮಾಡಿದ್ದಾರೆ. 30 ಗ್ರಾಂ ಚಿನ್ನ ಮತ್ತು 500 ಗ್ರಾಂ ಬೆಳ್ಳಿಯಿಂದ ಸೀರೆಯನ್ನು ತಯಾರಿಸಿದ್ದಾರೆ. ಆರೂವರೆ ಮೀಟರ್ ಉದ್ದ ಹಾಗೂ ೪೮ ಇಂಚು ಅಗಲದ ಈ ಸೀರೆ ಬಣ್ಣ ಬದಲಿಸಿ ನೋಡುಗರನ್ನು ಆಕರ್ಷಿಸಿದೆ. 2 ಲಕ್ಷ 80 ಸಾವಿರ ವೆಚ್ಚವಾಗಿದೆ ಎಂದು ಬಂದಿದೆ.
ಕೈಮಗ್ಗ ನೇಕಾರ ವಿಜಯ್ ಮಾತನಾಡಿ, 2 ಲಕ್ಷ 80 ಸಾವಿರ ಬೆಲೆ ಬಾಳುವ ಈ ಸೀರೆಗಾಗಿ ಚಿನ್ನ, ಬೆಳ್ಳಿ ಬಳಸಲಾಗಿದೆ. ತಿಳಿ ಗುಲಾಬಿ ಬಣ್ಣಗಳನ್ನು ಬದಲಾಯಿಸುವ ಈ ಸೀರೆ ಉಸರವಳ್ಳಿಯನ್ನು ಹೋಲುತ್ತದೆ. 600 ಗ್ರಾಂ ತೂಕದ ಈ ಸೀರೆ ತಯಾರಿಸಲು ಒಂದು ತಿಂಗಳು ಬೇಕಾಯಿತು. ಉದ್ಯಮಿಯೊಬ್ಬರು ಆರ್ಡರ್ ಮಾಡಿದ ನಂತರ ಬಣ್ಣ ಬದಲಾಯಿಸುವ ಸೀರೆಯನ್ನು ತಯಾರಿಸಿದ್ದೇನೆ ಎಂದು ಹೇಳಿದ್ದಾರೆ.
ವಿಜಯ್ ತಯಾರಿಸಿದ ವರ್ಣರಂಜಿತ ಊಸರವಳ್ಳಿ ಸೀರೆಯನ್ನು ಸೋಮವಾರ ಹೈದರಾಬಾದ್ ನ ಡಾ.ಬಿ.ಆರ್.ಅಂಬೇಡ್ಕರ್ ಸಚಿವಾಲಯದಲ್ಲಿ ಸಚಿವ ಕೆಟಿಆರ್ ವಿಜಯ್ ಕೈಮಗ್ಗ ಕಲಾವಿದನ ಕೌಶಲ್ಯವನ್ನು ಶ್ಲಾಘಿಸಿದ್ದಾರೆ.
ತೆಲಂಗಾಣ ರಾಜ್ಯ ಸರ್ಕಾರ ಸಿರಿಸಿಲ್ ನ ಕೈಮಗ್ಗ ಕಲಾವಿದ ವಿಜಯ್ ಅವರಿಗೆ ಕೈಮಗ್ಗ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು ಗೊತ್ತೇ ಇದೆ. ಇತ್ತೀಚಿಗಷ್ಟೇ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ವಿಜಯ್ ತಂದೆ ಬೆಂಕಿಕಡ್ಡಿಯೊಳಗೆ ಇಡುವ ಸೀರೆ ಮಾಡಿದ್ದರು. ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಮಗ ವಿಜಯ್ ಕೈಮಗ್ಗದಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಅವರು ಈಗಾಗಲೇ ಪರಿಮಳ ಸೂಸುವ ಸೀರೆಯನ್ನು ನೇಯ್ದಿದ್ದಾರೆ. ಹೊಸ ಬಣ್ಣದ ಸೀರೆಗಳಿಗೆ ಸೆಲೆಬ್ರೆಟಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.