ಗೃಹಲಕ್ಷ್ಮಿ ಹೊಸ ನೋಂದಣಿ ಸ್ಥಗಿತ! ಬ್ಯಾಂಕ್ ನಿಷ್ಕ್ರೀಯ ಫಲಾನುಭವಿಗಳ ವಿವರ ಸಂಗ್ರಹ..

ಗೃಹಲಕ್ಷ್ಮಿ ಹೊಸ ನೋಂದಣಿ ಸ್ಥಗಿತ! ಬ್ಯಾಂಕ್ ನಿಷ್ಕ್ರೀಯ ಫಲಾನುಭವಿಗಳ ವಿವರ ಸಂಗ್ರಹ..



   
           
              ಗೃಹಲಕ್ಷ್ಮಿ ಯೋಜನೆಗೆನೋ ಚಾಲನೆ ಸಿಕ್ಕಿತು. ಖಾತೆಗೆ ಹಣ ವರ್ಗಾವಣೆ ಮಾಡುವ ಕಾರ್ಯಕ್ರಮವನ್ನೂ ಭರ್ಜರಿಯಾಗಿ ಉದ್ಘಾಟಿಸಲಾಯಿತು. ಆದರೆ ಹಣವೇ ಬಹುತೇಕರಿಗೆ ವರ್ಗಾವಣೆಯಾಗಿಲ್ಲ. ಈ ಕುರಿತಾಗಿ ಸಚಿವರು ಏನು ಹೇಳಿದ್ದಾರೆ ನೋಡೋಣ ಬನ್ನಿ.....
ಇದರಿಂದ ಈಗಾಗಲೇ ನೋಂದಣಿ ಮಾಡಿಸಿಕೊಂಡವರಿಗೆ ಹಣ ಜಮೆಯಾಗುವರೆಗೂ ಹೊಸದಾಗಿ ನೋಂದಣಿ ಮಾಡಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿ.
ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಹಣ ಜಮೆ, ಹೊಸ ನೋಂದಣಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಇನ್ನಷ್ಟೇ ಆದೇಶ ಜಾರಿಯಾಗಬೇಕಿದೆ.

ಸಚಿವರು ಹೇಳಿದ್ದೇನು?

ನೋಂದಾಯಿತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂ ಜಮೆ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಗೃಹಲಕ್ಷ್ಮಿ ಯೋಜನೆಯ ಹೊಸ ನೋಂದಣಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಎಲ್ಲಾ ಫಲಾನುಭವಿಗಳಿಗೆ ಹಣ ತಲುಪಿದ್ದು ಖಚಿತವಾದ ಬಳಿಕ ಮತ್ತೆ ಪ್ರಕ್ರಿಯೆ ಆರಂಭಿಸುತ್ತೇವೆ ಎನ್ನುವುದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿವರಣೆ.
ಫಲಾನುಭವಿಗಳ ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿದ್ದರಿಂದ ಏಳರಿಂದ ಎಂಟು ಲಕ್ಷ ಫಲಾನುಭವಿಗಳಿಗೆ ಹಣ ಜಮೆಗೊಳಿಸಲು ತೊಡಕಾಗಿದೆ. ಶೀಘ್ರ ಅದನ್ನು ಸರಿಪಡಿಸುತ್ತೇವೆ ಎಂದು ಸಚಿವರು ಹೇಳುತ್ತಾರೆ.


whatss


ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಹಾಕಲು ಸರ್ಕಾರದ ಖಜಾನೆಗೆ ಈಗಾಗಲೇ ಹಣ ಬಿಡುಗಡೆಯಾಗಿದೆ. ಒಂದು ಕೋತಿ ಫಲಾನುಭವಿಗಳಿಗೆ ಎರಡರಿಂದ ಮೂರು ದಿನದಿಂದ ಹಣ ಜಮೆಯಾಗಲಿದೆ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಖಾತೆಗೆ ಹಣ ಜಮೆಯಾಗುತ್ತಿದೆ. ಕೆಲ ತಾಂತ್ರಿಕ ಕಾರಣದಿಂದ ಇನ್ನೂ ಕೆಲವರ ಖಾತೆಗೆ ಹಣ ಜಮೆಯಾಗಿಲ್ಲ. ಅಲ್ಲಿವರೆಗೂ ಹೊಸ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ. 



   

ನೋಂದಣಿ ಸ್ಥಗಿತ ಏಕೆ?

ಕರ್ನಾಟಕದಲ್ಲಿ 1.28 ಕೋಟಿ ಮಹಿಳಾ ಅರ್ಹ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಈಗಾಗಲೇ ನಡೆಸಿರುವ ಸಮೀಕ್ಷೆ ಹಾಗೂ ಕಲೆ ಹಾಕಿರುವ ಮಾಹಿತಿ ಪ್ರಕಾರ ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.ಆದರೆ ಎರಡು ತಿಂಗಳ ಹಿಂದೆ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಈವರೆಗೂ 1.12 ಕೋಟಿ ಗೃಹಿಣಿಯರು ನೋಂದಣಿ ಮಾಡಿಸಿಕೊಂಡಿದ್ದಾರೆ.  ಇನ್ನೂ 16 ಲಕ್ಷಕ್ಕೂ ಅಧಿಕ ಮಹಿಳೆಯರು ನೋಂದಣಿ ಮಾಡಿಸಿಕೊಳ್ಳುವುದು ಬಾಕಿಯಿದೆ. ಈ ನೋಂದಣಿ ಸದ್ಯಕ್ಕೆ ಸ್ಥಗಿತವಾಗಲಿದೆ. ನೋಂದಣಿ ಬಾಕಿ ಇರುವವರಲ್ಲಿ ಕೆಲವರ ಬಳಿ ಪಡಿತರ ಚೀಟಿ ಇಲ್ಲ. ಹೊಸದಾಗಿ ಪಡಿತರ ಚೀಟಿ ಮಾಡಿಸಿಕೊಳ್ಳಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅವಕಾಶ ನೀಡಿಲ್ಲ. ಇದರಿಂದ ಬಹುತೇಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಎಡತಾಕುತ್ತಿದ್ದಾರೆ. ಇದು ಆಹಾರ ಇಇಲಾಖೆ ಸಮಸ್ಯೆ. ಅಲ್ಲಿ ಭೇಟಿ ಮಾಡಿ ಎಂದು ಕಳುಹಿಸಲಾಗುತ್ತಿದೆ. ಸರ್ಕಾರದಿಂದ ಅನುಮತಿ ಬರದೇ ಹೊಸ ಪಡಿತರ ಕಾರ್ಡ್ ಮಾಡುವ ಪ್ರಶ್ನೆಯೇ ಇಲ್ಲ ಎನ್ನುವುದು ಆಹಾರ ಇಲಾಖೆಯವರ ಸ್ಪಷ್ಟನೆಯಾಗಿದೆ. ಪಡಿತರ ಕಾರ್ಡ್ ಇಲ್ಲದೆ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಅವಕಾಶವೇ ಇಲ್ಲದಿರುವುದರಿಂದ ಹಲವರ ನೊಂದ್ನೈ ಪ್ರಕ್ರಿಯೆ ಬಾಕಿ ಉಳಿದಿದೆ.

ಇನ್ನು ಕೆಲವರ ಕಾರ್ಡ್ ನಲ್ಲಿ ಯಜಮಾನಿ ಎನ್ನುವ ಮಾಹಿತಿ ಇಲ್ಲದೆ ಇರುವುದರಿಂದ ಅವರಿಗೂ ನೋಂದಣಿ ಪ್ರಕ್ರಿಯೆ ಆಗುತ್ತಿಲ್ಲ. ಅಂತವರು ಕಚೇರಿಗಳಿಗೆ ಸುತ್ತುವ ಸ್ಥಿತಿ ನಿರ್ಮಾಣವಾಗಿದೆ.
ಹೊಸ ನೋಂದಣಿ ಮಾಡಿಸುವವರಲ್ಲಿ ಪಡಿತರ ಕಾರ್ಡ್ ಇಲ್ಲದೆ ಇರುವವರ ಸಮಸ್ಯೆ ಇರುವುದು ನೋಂದಣಿಗೆ ತೊಡಕಾಗಿದೆ. ಪಡಿತರ ಕಾರ್ಡ್ ವಿಚಾರ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಇಲ್ಲಿಗೆ ಬರುವವರನ್ನು ಆಹಾರ ಇಲಾಖೆಗೆ ಕಳುಹಿಸುತ್ತಿದ್ದೇವೆ ಎನ್ನುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರ ವಿವರಣೆ.

ತಾಂತ್ರಿಕ ತೊಡಕು :

ಇನ್ನು 1.12 ಕೋಟಿ ಗೃಹಿಣಿಯರಲ್ಲಿ ಈವರೆಗೂ 59 ಲಕ್ಷ ಮಂದಿ ಖಾತೆಗೆ ಈವರೆಗೂ ತಲಾ ಎರಡು ಸಾವಿರ ರೂ. ಜಮೆಯಾಗಿದೆ. ಇನ್ನುಳಿದವರ ಖಾತೆಗೆ ಜಮೆ ಮಾಡಲು ಬ್ಯಾಂಕ್ ಖಾತೆಯು ಸೇರಿದಂತೆ ಹಲವು ತಾಂತ್ರಿಕ ತೊಡಕುಗಳು ಎದುರಾಗಿವೆ. ಅವುಗಳನ್ನು ಬಗೆಹರಿಸಿ ಬೇಗನೆ ಹಣವನ್ನು ವರ್ಗ ಮಾಡುವಂತೆ ಸೂಚನೆಯನ್ನೂ ನೀಡಲಾಗಿದೆ. ಆದರೂ ಈ ಗೊಂದಲ ಇನ್ನೂ ಬಗೆಹರಿದಿಲ್ಲ.


whatss



                
            ಕೆಲವರ ಬ್ಯಾಂಕ್ ಗಳು ನಿಷ್ಕ್ರಿಯವಾಗಿರುವುದರಿಂದ ಹಣವೇ ಜಮೆಯಾಗುತ್ತಿಲ್ಲ. ಈ ಕಾರಣದಿಂದ ಈ  ರೀತಿ ಆರೇಳು ಲಕ್ಷ ಗೃಹಿಣಿಯರ ಬ್ಯಾಂಕ್ ಖಾತೆಯ ಗೊಂದಲವಿದ್ದು, ಅದನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಫಲಾನುಭವಿಗಳನ್ನು ಭೇಟಿ ಮಾಡಿ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗಳ ವಿವರ ಪಡೆಯಲು ಸೂಚಿಸಲಾಗುತ್ತಿದೆ. ಈ ಪ್ರಕ್ರಿಯೆಯು ಒಂದೆರಡು ದಿನದಲ್ಲಿ ಆರಂಭವಾಗಲಿದೆ.


ಹಾಸನ ಜಿಲ್ಲೆಯಲ್ಲಿಯೇ ಈ ರೀತಿ ಬ್ಯಾಂಕ್ ಖಾತೆಯ ಗೊಂದಲ ಆಗಿ ಇನ್ನೂ 25 ಸಾವಿರದಷ್ಟು ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗಿಲ್ಲ. ಅವರು ಮಾಹಿತಿ ನೀಡಬೇಕಿದೆ. ಅಂತವರ ಮಾಹಿತಿ ಸಂಗ್ರಹದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಕ್ರಮ ವಹಿಸಲಿದ್ದಾರೆ. ಸಣ್ಣ ಪುಟ್ಟ ಗೊಂದಲಗಳೆಲ್ಲ ವಾರದೊಳಗೆ ಬಗೆಹರಿದು ಮುಂದಿನ ತಿಂಗಳಿನಿಂದ ಇದೆಲ್ಲವೂ ಸುಸೂತ್ರವಾಗಲಿದೆ ಎಂದು ಹಾಸನ ಜಿಲ್ಲಾಪಂಚಾಯಿತಿ ಸಿಇಒ ಬಿ.ಆರ್ ಪೂರ್ಣಿಮಾ ಹೇಳುತ್ತಾರೆ.

1 ಕಾಮೆಂಟ್‌ಗಳು

ನವೀನ ಹಳೆಯದು