ನಮಸ್ಕಾರ ಸ್ನೇಹಿತರೆ .....
ಇಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕೆಲವು ಯೋಜನಗಳ ಲಾಭವನ್ನು ಪಡೆಯಬೇಕಾದರೆ ಅತಿ ಅವಶ್ಯಕ ಎಂದು ರೇಷನ್ ಕಾರ್ಡ್ ಹೇಳಲಾಗುತ್ತಿದೆ. ಸಾಕಷ್ಟು ಜನರು ರೇಷನ್ ಕಾರ್ಡ್ ವಿಷಯವಾಗಿಯೇ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು. ಆದರೆ ಇದೀಗ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ವಿಷಯವಾಗಿ ಒಂದು ಮಹತ್ವದ ಆದೇಶವನ್ನು ಹೊರಡಿಸಿದ್ದು, ಅದೇನು ಎಂಬುದನ್ನು ಇವತ್ತಿನ ಈ ಲೇಖನದ ಮೂಲಕ ನಿಮಗೆ ತಿಳಿಸುತ್ತಿದ್ದೇವೆ.
ರೇಷನ್ ಕಾರ್ಡ್ ವಿಷಯವಾಗಿ ಆದೇಶ ;
ರಾಜ್ಯ ಸರ್ಕಾರವು ಘೋಷಿಸಿದಂತಹ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಲಾಭವನ್ನು ಜನತೆ ಪಡೆಯಲು ರೇಷನ್ ಕಾರ್ಡ್ ಅಗತ್ಯವಾಗಿ ಬೇಕೇ ಬೇಕು. ರಾಜ್ಯ ಸರ್ಕಾರವು ಸದ್ಯ ರೇಷನ್ ಕಾರ್ಡ್ ವಿಷಯವಾಗಿ ಮತ್ತೊಂದು ಹೊಸ ಆದೇಶವನ್ನು ಹೊರಡಿಸಿದ್ದು ಈ ಆದೇಶದಲ್ಲಿ ಕೊನೆಯ ದಿನಾಂಕವನ್ನು ಸಹ ರಾಜ್ಯದ ಜನತೆಗೆ ಘೋಷಣೆ ಮಾಡಿದೆ. ಸೈಬರ್ ಸೆಂಟರ್ ಹಾಗು ವೆಬ್ ಸೈಟ್ ನಲ್ಲಿ ತಿದ್ದುಪಡಿಗೆ ಅವಕಾಶ: ಪಡಿತರ ರಾಜ್ಯ ಸರ್ಕಾರವು ಅವಕಾಶವನ್ನು ನೀಡಿದ್ದು ಅದರಲ್ಲಿ ಹೆಸರನ್ನು ಸೇರ್ಪಡೆ ಮಾಡಲು ಸೈಬರ್ ಸೆಂಟರ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬಿಪಿಎಲ್ ಕಾರ್ಡ್ ಹಾಗೂ ಎಪಿಎಲ್ ಕಾರ್ಡ್ ಗೆ ಸ್ವತಃ ನಾವೇ ರೇಷನ್ ಕಾರ್ಡ್ ವೆಬ್ ಸೈಟ್ ನಲ್ಲಿ ಅರ್ಜಿ ಹಾಕಬಹುದಾಗಿದೆ. ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಲು ಈಗಾಗಲೇ ಪಡಿತರ ಚೀಟಿಯಲ್ಲಿ ಅವಕಾಶ ನೀಡಲಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಅಗತ್ಯವಿರುವ ದಾಖಲೆಗಳು :
ಆಹಾರ ಇಲಾಖೆಯು ಈ ಸಲ ಕಟ್ಟುನಿಟ್ಟಿನ ಕ್ರಮವನ್ನು ಪಡಿತರ ಚೀಟಿಗೆ ಸಂಬಂಧಿಸಿದಂತೆ ವಹಿಸಿದೆ. ಕೆಲವು ಯೋಜನೆಗಳ ಫಲಾನುಭವಿಗಳಾಗಲು ಜನರಿಗೆ ಪಡಿತರ ಚೀಟಿ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ರೇಷನ್ ಕಾರ್ಡ್ ಅನ್ನು ಬೇಗ ಬೇಗ ತಿದ್ದುಪಡಿ ಮಾಡುವುದರ ಮೂಲಕ ಸರಿಪಡಿಸಿಕೊಳ್ಳುವುದು ಮುಖ್ಯವಾಗಿದೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಮೊದಲು ಆಹಾರ ಇ ಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. https://ahara.kar.nic.in/ .
ಹೀಗೆ ರಾಜ್ಯ ಸರ್ಕಾರದ ಹಲವಾರು ಯೋಜನೆಗಳ ಪ್ರಯೋಜನವನ್ನು ಪಡೆಯಲು ಪಡಿತರ ಚೀಟಿಯು ಮುಖ್ಯವಾಗಿದ್ದು ಅದನ್ನು ಸರಿಪಡಿಸಿಕೊಳ್ಳಲು ಈಗ ಮನೆಯಲ್ಲಿಯೇ ಕುಳಿತು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Tags
Govt.scheme