ಸ್ವಯಂ ಉದ್ಯೋಗ ನೇರ ಸಾಲ ಯೋಜನೆ: 1 ಲಕ್ಷದವರೆಗೆ ಸಾಲ - ಸಹಾಯಧನ ಅರ್ಜಿ ಆಹ್ವಾನ:
ವೀರಶೈವ ಲಿಂಗಾಯತ ಹಿಂದುಳಿದವರನ್ನು ಗಮನದಲ್ಲಿಟ್ಟುಕೊಂಡು ವೀರಶೈವ ಲಿಂಗಾಯತ ಸಮುದಾಯದ ಜನರನ್ನು ಸಬಲೀಕರಣಗೊಳಿಸುವ ಮತ್ತು ಸಬಲೀಕರಣದ ಏಕೈಕ ಉದ್ದೇಶದಿಂದ ಈ ನಿಗಮವನ್ನು ರಚಿಸಲಾಗಿದೆ. ಕರ್ನಾಟಕದ ಅಂದಿನ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪರವರು 17.11.2020 ರಂದು ನಿಗಮ ಸ್ಥಾಪನೆನ್ನು ಮಾಡಲಾಗಿದೆ.
ಉದ್ದೇಶ ಮತ್ತು ದೃಷ್ಟಿಕೋನ :
ವೀರಶೈವ ಲಿಂಗಾಯತರು ಕರ್ನಾಟಕದಲ್ಲಿ ಬಹು ಸಂಖ್ಯಾತರು. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಇನ್ನೂ ಶೇಕಡ 50ಕ್ಕಿಂತ ಹೆಚ್ಚು ಹಿಂದುಳಿದಿದ್ದಾರೆ. ಅವರು ಇತರ ಮುಂದುವರೆದಿರುವ ಸಮಾಜದೊಡನೆ ಸರಿಸಮವಾಗಿ ಬೆಳೆಸಲು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ ಸ್ಥಾಪಿಸಿ, ಈ ಮೂಲಕ ಆರ್ಥಿಕ ಸೌಲಭ್ಯಗಳನ್ನು ಕೊಟ್ಟು ಅಭಿವೃದ್ಧಿ ಹೊಂದಲು ಸಹಕಾರಿಯಾಗಬೇಕಾಗಿದೆ. ಇದು ಸಮಾಜದ ಬಹಳ ವರ್ಷಗಳ ಒತ್ತಾಯ ಕೂಡ ಆಗಿತ್ತು.
ಅದ ಕಾರಣ ಸರ್ಕಾರ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ ಸ್ಥಾಪಿಸಿ ಸಮಾಜದ ಅಭಿವೃದ್ಧಿಗೆ ನೆರವು ನೀಡಲು ಸರ್ಕಾರದ ಬಜೆಟ್ ನಲ್ಲಿ ರೂ.500-00 ಕೋಟಿ ಮೀಸಲಿಟ್ಟಿದೆ. ಸಮಾಜದ ಏಳಿಗೆಗೆ ಈ ನಿಗಮವು ಹಿಂದುಳಿದವರನ್ನು ಗುರುತಿಸಿ ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಕಾರ್ಯನಿರ್ವಹಿಸುತ್ತಿದೆ.
ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, ಮತ್ತು 3ಬಿ ಗೆ ಸೇರಿರಬೇಕು.
ಘಟಕ ವೆಚ್ಚ ರೂ 1 ಲಕ್ಷಗಳಲ್ಲಿ
ರೂ 80,000 ಸಾಲ (ವಾರ್ಷಿಕ ಶೇ 4ರ ಬಡ್ಡಿ ದರದಲ್ಲಿ)
ರೂ 20,000 ಸಹಾಯಧನ
ಘಟಕ ವೆಚ್ಚ ರೂ 2 ಲಕ್ಷಗಳಲ್ಲಿ
ರೂ 1,70,000 ಸಾಲ (ವಾರ್ಷಿಕ ಶೇ 4ರ ಬಡ್ಡಿ ದರದಲ್ಲಿ)
ರೂ 30,000 ಸಹಾಯಧನ
ಪ್ರವರ್ಗ-1 ರಡಿಯಲ್ಲಿ ಬರುವ ಜಾತಿಗಳ ಅರ್ಜಿದಾರರು ಕನಿಷ್ಠ 7ನೇ ತರಗತಿ ಹಾಗೂ ಇತರೆ ಪ್ರವರ್ಗಗಳಲ್ಲಿನ ಅರ್ಜಿದಾರರು 10ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ನಿರುದ್ಯೋಗಿಯಾಗಿರಬೇಕು.
ಸಲ್ಲಿಸಬೇಕಾದ ದಾಖಲಾತಿಗಳು:
ಜಾತಿ ಮತ್ತು ಆದಾಯ ಪ್ರಮಾಣಪತ್ರ
ಆಧಾರ್ / ಚುನಾವಣಾ ಗುರುತಿನ ಚೀಟಿ/ ಪಡಿತರ ಚೀಟಿ
ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಯ ಪ್ರತಿ
ಜಮೀನಿನ ಪಹಣಿ ಪ್ರತಿ
ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಸಣ್ಣ / ಅತಿ ಸಣ್ಣ ರೈತರ ಪ್ರಮಾಣಪತ್ರ