ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣದ ಸಿಹಿ ಸುದ್ದಿಯೊಂದನ್ನು ರಾಜ್ಯ ಸರ್ಕಾರ ಕೊಟ್ಟಿದೆ, ಸರ್ಕಾರ ಜಾರಿಗೆ ತಂದಿರುವ ಈ ಗೃಹಲಕ್ಷ್ಮಿ ಯೋಜನೆಯು ಅದೆಷ್ಟೋ ಮಹಿಳೆಯರಿಗೆ (for women's) ದಾರಿ ದೀಪವಾಗಿದೆ.ಅವರು ಆರ್ಥಿಕ ಪರಸ್ಥಿತಿಯನ್ನು ದೂರ ಮಾಡಿ ಸ್ವಲ್ಪ ಮಟ್ಟಿಗೆ ಆರ್ಥಿಕ ನಿಲುವನ್ನು ಸರ್ಕಾರ ನೀಡಿದೆ. ಇದರಿಂದ ಅವರ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಈ ಒಂದು ಯೋಜನೆಯಿಂದ ಬರುವ ದುಡ್ಡು ಬಹಳ ಉಪಯೋಗವಾಗಿದೆ. ಹೌದು ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಮತ್ತು ಅನ್ನಭಾಗ್ಯದ ಯೋಜನೆಯ ಮಾರ್ಚ್ ತಿಂಗಳ ಹಣದ ಕುರಿತು ಈ ಕೆಳಗೆ ಕೊಡಲಾಗಿದೆ
.
ಪೆಂಡಿಂಗ್ ಇರುವ ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳುವುದು ಹೇಗೆ :
ಅದೆಷ್ಟೋ ಮಹಿಳೆಯರ ಖಾತೆಗೆ ಇನ್ನು ಒಂದು ಕಂತಿನ ಹಣವೂ ಬಂದಿಲ್ಲ. ಈ ರೀತಿಯ ಸಮಸ್ಯೆ ಇದ್ದರೆ ನಿ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಎಲ್ಲವನ್ನು ಕೊಟ್ಟು ನಿಮ್ಮ ಖಾತೆಗೆ ಯಾಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ ರೇಷನ್ ಕಾರ್ಡಕೆ ಹಣ (Money Deposit) ಬಂದಿಲ್ಲ ಎನ್ನುವ ಮಾಹಿತಿಯನ್ನು ಪಡೆಯಿರಿ. ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಎನ್ನುವುದನ್ನು ತಿಳಿಸುತ್ತಾರೆ. ಅದರ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವ ಹಾಗೆ ಮಾಡಬಹುದು.
ಸಿ ಡಿ ಪಿ ಓ ಕಚೇರಿಯಲ್ಲಿ (CDPO Office) ನಿಮ್ಮ ಅರ್ಜಿ ಅನುಮೋದನೆ ಬಾಕಿ ಇದ್ದರೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ. ಇದಾದ ಬಳಿಕ ನಿಮ್ಮ ಖಾತೆಗೆ ಕೆವೈಸಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದರೆ ಪೆಂಡಿಂಗ್ ಇರುವ ಹಣ ಕೂಡ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಯಾಕಂದ್ರೆ ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿರುತ್ತದೆ.
ಇ ಕೆ ವೈ ಸಿ ಕಡ್ಡಾಯ ಏಕೆ :
ಮೊದಲು ನೀವು ಸಲ್ಲಿಸಿದ ಗೃಹಲಕ್ಷ್ಮಿ ಯೋಜನೆಯ ಬ್ಯಾಂಕ್ ಖಾತೆಗೆ ಇ ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಂಡಿದ್ಯಾ ಚೆಕ್ ಮಾಡಿಕೊಳಬೇಕು. ಯಾಕೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಇ ಕೆ ವೈ ಸಿ ಕೂಡ ಕಡ್ಡಾಯ. ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ (E-KYC ) ಆಗದೆ ಇದ್ರೆ ಹಣ ಜಮಾ ಆಗಲು ಸಾಧ್ಯವೇ ಇಲ್ಲ. ಹಾಗಾಗಿ ನೀವು ಬ್ಯಾಂಕ್ ನಲ್ಲಿ ನಿಮ್ಮ ಖಾತೆಗೆ ಇ ಕೆ ವೈ ಸಿ ಆಗಿದೆಯಾ ಎನ್ನುವುದನ್ನು ಚೆಕ್ ಮಾಡಬೇಕಾಗುತ್ತದೆ.
ಆಧಾರ್ ಲಿಂಕಿಂಗ್ ಕಡ್ಡಾಯ :
ಇನ್ನೊಂದು ಮುಖ್ಯ ವಿಷಯ ಎಂದರೆ, ಆಧಾರ್ ಲಿಂಕ್,ಹೌದು,ನಿಮ್ಮ ಬ್ಯಾಂಕ್ ಖಾತೆಗೆ ಮುಖ್ಯವಾಗಿ ಆಧಾರ್ ಲಿಂಕ್ ಆಗಿರಲೇಬೇಕು. ಆಧಾರ್ ಲಿಂಕ್ ಆಗಿರಲಿಲ್ಲ ಎಂದರೆ, ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಿಲ್ಲ . NPCI mapping ಕೂಡ ಕಡಾಯವಾಗಿರುವುದರಿಂದ ಆದಷ್ಟು ಬೇಗ ಬ್ಯಾಂಕ್ ಗೆ ಹೋಗಿ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.
ಒಟ್ಟಿಗೆ ಬಂತು ರೂ.10 ಸಾವಿರ :
ಇದುವರೆಗೂ ಒಂದು ಕಂತಿನ ಹಣ ಬಂದಿಲ್ಲ ಎನ್ನುವ ಮಹಿಳೆಯರಿಗೆ ಸರ್ಕಾರದಿಂದ ಈಗಾಗಲೇ ತಿಳಿಸಿರುವಂತೆ ನೀವು ನಿಮ್ಮ ಬ್ಯಾಂಕ್ ಗೆ ಹೋಗಿ ಈ ಕೆವೈಸಿ (EKYC ) ಪರಿಶೀಲನೆ ಮಾಡಿಕೊಳ್ಳಬೇಕು ಜೊತೆಗೆ , ಏನ್ ಪಿ ಸಿ ಐ ಮ್ಯಾಪಿಂಗ್ (NPCI Mapping ) ಕೂಡ ಮಾಡಿಸಬೇಕು.
ಡಿಸೆಂಬರ್ ತಿಂಗಳಲ್ಲಿ ಆಧಾರ್ ಮತ್ತು ಬ್ಯಾಂಕ್ ಅಕೌಂಟ್ NPCI ಮ್ಯಾಪಿಂಗ್ ಮಾಡಿಸಿಕೊಂಡು ನಂತರ ಹಲವಾರು ಮಹಿಳೆಯರಿಗೆ ಇದೇ ತಿಂಗಳು 23 24 ಮತ್ತು 25 ನೇ ತಾರೀಕಿನಂದು ಸತತವಾಗಿ 2 ಸಾವಿರ ರೂಪಾಯಿಗಳಂತೆ ಒಟ್ಟು ಹತ್ತು ಸಾವಿರ ರೂಪಾಯಿಗಳನ್ನು ರಾಜ್ಯ ಸರ್ಕಾರದಿಂದ ಜಮಾ ಮಾಡಲಾಗಿದೆ.ಹಾವೇರಿ ಜಿಲ್ಲೆಯ ಮಹಿಳೆಯೊಬ್ಬರಿಗೆ ಹಣ ಜಮಾ ಆಗಿರುವ ಡಿಬಿಟಿ ಸ್ಟೇಟಸ್ ಕೆಳಗೆ ನೀವು ನೋಡಬಹುದು .
ಮಾರ್ಚ್ ತಿಂಗಳ ಅಕ್ಕಿ ಹಣ ಜಮಾ :
ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ಕೆಜೆಗೆ 34ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ನೀಡುತ್ತಿದೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಹಣದ ಬದಲಾಗಿ ಅಕ್ಕಿಯನ್ನೇ ಕೊಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಅಕ್ಕಿಯನ್ನು ಹೊಂದಿಸೋದು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಹಣವನ್ನು ಸರ್ಕಾರ ಯಜಮಾನಿಯ ಖಾತೆಗೆ ನೇರವಾಗಿ DBT ಮೂಲಕ ವರ್ಗಾವಣೆ ಮಾಡಲಾಗಿದೆ .
ಈ ಅನ್ನಭಾಗ್ಯ ಹಣ (Anna Bhagya Money ) ಈ ತಿಂಗಳಲ್ಲೂ ಕೂಡ ಸರಕಾರ ಬಿಡುಗಡೆ ಮಾಡಿದ್ದು ಎಲ್ಲಾ ಜಿಲ್ಲೆಯ ಫಲಾನುಭವಿಗಳಿಗೂ ಈ ಹಣ ಬಿಡುಗಡೆ ಗೊಳ್ಳಲಿದೆ ಎಂದು ಆಹಾರ ಇಲಾಖೆಯು ಸ್ಪಷ್ಟನೆ ಯನ್ನು ನೀಡಿದ
ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಹಂತ ಹಂತವಾಗಿ ಈ ಹಣ ವರ್ಗಾವಣೆ ಆಗುತ್ತದೆ. ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದ್ದೇವೆಯೇ ? ಎಷ್ಟು ಹಣ ಬಂದಿದೆ ?, ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ತಿಳಿಯಲು ಸರ್ಕಾರವು ಒಂದು ಅಧಿಕೃತ ಜಾಲತಾಣ (ವೆಬ್ಸೈಟ್ ) ವನ್ನು ಬಿಡುಗಡೆ ಮಾಡಿದೆ. ಹಾಗಾಗಿ ನೀವು ಸ್ಟೇಟಸ್ ಅನ್ನು ನೋಡಿ ತಿಳಿದುಕೊಳ್ಳಬಹುದು.
ಎಲ್ಲ ಸರಿ ಇದ್ದು ಹಣ ಬಂದಿಲ್ಲ ಅನ್ನೋರಿಗೆ ಇದೊಂದು ಕೊನೆಯ ಪ್ರಯತ್ನ :
ಎಲ್ಲಾ ದಾಖಲಾತಿ ಸರಿಯಿದೆ ಆದರೂ ಹಣ ಬರುತ್ತಿಲ್ಲ ಎಂದು ಹಾವೇರಿ ಯಜಮಾನಿ ಒಬ್ಬರು ಹೇಳುತ್ತಿದ್ದರು, ನಂತರ ಬ್ಯಾಂಕ್ ಖಾತೆ ಸಮಸ್ಯೆ ಇದೆಯಾ ಎಂದು ಬ್ಯಾಂಕ್ ಆಫ್ ಬರೋಡ ದಲ್ಲಿ ಹೊಸ ಖಾತೆ ತೆರೆದ ಕೇವಲ ಮೂರು ದಿನದಲ್ಲಿ ಖಾತೆಗೆ ಹಣ ಬಂದು ಜಮಾ ಆಗಿದೆ
ಎಲ್ಲ ದಾಖಲಾತಿ ಸರಿ ಇದ್ದವರು ಮತ್ತೊಮ್ಮೆ ಪೊಸ್ಟ್ ಆಫೀಸ್ನಲ್ಲಿ ಒಂದು ಹೊಸ ಖಾತೆಯನ್ನು ತೆರೆಯುವುದು ಉತ್ತಮ, ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆಯನ್ನು ತೆರೆಯಿರಿ ಉದಾ :ಬ್ಯಾಂಕ್ ಆಫ್ ಬರೋಡ ,ಕೆನರಾ, SBI, ಎಲ್ಲ ಸರಿ ಇದ್ರೂ ಹಣ ಬರ್ತಿಲ್ಲ ಅಂದ್ರೆ ಅದು ಬ್ಯಾಂಕ್ ಆಧಾರ್ ಸೀಡಿಂಗ್ ಸಮಸ್ಯೆಯೂ ಆಗಿರಬಹುದು ಹಾಗಾಗಿ ಹೊಸ ಖಾತೆಯನ್ನು ನೀವು ಆಧಾರ್ ದೃಡೀಕರಣ ಮೂಲಕ ತೆರೆದಾಗ DBT ವರ್ಗಾವಣೆ ಸುಲಭವಾಗಿ ಆಗುತ್ತದೆ. ಇದೊಂದು ಪ್ರಯತ್ನ ಮಾಡಿ ನೋಡಿ .
Tags
Govt.scheme