ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್ !!
10-20 ರೂ ಬರುತ್ತಿದ್ದ ವಿದ್ಯುತ್ ಬೆಲೆ ಈಗ 100-200 ಕ್ಕೆ!!!!
ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ 10 ಅಥವಾ 20 ರೂ ಬರುತ್ತಿದ್ದ ಬಿಲ್ ನ ಮೊತ್ತ ಅಕ್ಟೋಬರ್ ನಿಂದ ಹೆಚ್ಚು ಬರುತ್ತದೆ. ಇದಕ್ಕೆ ಕಾರಣ ಬೇಸಿಗೆಯಂತಿರುವ ವಾತಾವರಣದಿಂದ ಸರಾಸರಿ ಮೀರಿ ಹೆಚ್ಚು ವಿದ್ಯುತ್ ಬಳಕೆ ಮಾಡಿರುವುದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ.
ಮಳೆ ಕೊರತೆಯಿಂದ ಸೃಷ್ಠಿಯಾದ ಬರ ಒಂದೆಡೆಯಾದರೆ, ಅವಧಿಗೂ ಮುನ್ನವೇ ಬಿಸಿಲಿನ ಬೇಗೆ ಆವರಿಸಿದ್ದರಿಂದ ವಿದ್ಯುತ್ ಬಳಕೆ ಹೆಚ್ಚಾಗಿ ಗೃಹ ಜ್ಯೋತಿ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ವಿದ್ಯುತ್ ಬಿಲ್ ತುಸು ಹೊರೆಯಾಗಿದೆ.
ನೀರಿದ್ದರೂ ಹೊಲಕ್ಕೆ ಹರಿಸಲು ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ ಕೆಲವೆಡೆ ಲೋಡ್ ಶೆಡ್ಡಿಂಗ್ ಕಿರಿಕಿರಿ ಇಷ್ಟೆಲ್ಲಾ ಗೋಳಿನ ಮಧ್ಯೆ ಸೆಕೆ ತಡೆಯಲು ಅರಿವಿಲ್ಲದೆ ಅತಿಯಾಗಿ ವಿದ್ಯುತ್ ಬಳಸಿಕೊಂಡವರಿಗೆ ಹೆಚ್ಚುವರಿ ಹಣ ಪಾವತಿಸುವ ಬಿಲ್ ರವಾನೆಯಾಗುತ್ತಿದೆ. ಹಿಂದಿನ ತಿಂಗಳು ಗೃಹ ಜ್ಯೋತಿ ಗ್ಯಾರಂಟಿಯಿಂದ ಶೂನ್ಯ 10, 20, 30 ರೂ ವಿದ್ಯುತ್ ಬಿಲ್ ಪಾವತಿಸಿದವರಿಗೆ ಈ ತಿಂಗಳು 300, 400 600 ರೂ ವರೆಗೆ ಹೆಚ್ಚುವರಿ ಮೊತ್ತದ ಬಿಲ್ ಬಂದಿದೆ.
ಹೆಚ್ಚಿದ ಫ್ಯಾನ್ ಹಾಗೂ ಎಸಿ ಬಳಕೆ:
ಗೃಹ ಜ್ಯೋತಿ ಫಲಾನುಭವಿಗಳಿಗೆ ವರ್ಷದ ಒಟ್ಟು ವಿದ್ಯುತ್ ಬಳಕೆ ಆಧಾರದ ಮೇಲೆ ತಿಂಗಳ ಸರಾಸರಿ ಲೆಕ್ಕ ಹಾಕಿ, ಅದರ ಮೇಲೆ ಶೇ 10 ರಷ್ಟು ಹೆಚ್ಚುವರಿ ಯೂನಿಟ್ ವಿದ್ಯುತ್ ಉಚಿತ ನೀಡಲಾಗುತ್ತದೆ. ಮಳೆಗಾಲದಲ್ಲಿ ಸಹಜವಾಗಿ ವಿದ್ಯುತ್ ಬಳಕೆ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ಹೆಚ್ಚಿರುತ್ತದೆ. ಕಳೆದ ವರ್ಷ ಮಳೆಗಾಲ 4-5 ತಿಂಗಳವರೆಗೆ ಇತ್ತು. ಈ ವರ್ಷ ಜುಲೈ ನಂತರ ಸರಿಯಾಗಿ ಮಳೆಯೇ ಆಗಿಲ್ಲ. ಎಲ್ಲೆಡೆ ಬೇಸಿಗೆ ಧಗೆ ಆವರಿಸಿಕೊಂಡಿದೆ. ಫ್ಯಾನ್, ಎಸಿ ಬಳಕೆ ಹೆಚ್ಚಾಗಿದೆ.
ಸರಾಸರಿ ಮಿತಿ ಮೀರಿ ವಿದ್ಯುತ್ ಬಳಕೆ:
ಜತೆಗೆ ಗೃಹ ಜ್ಯೋತಿ ಯೋಜನೆಯ ಮೂರನೇ ತಿಂಗಳು ಇದಾಗಿದ್ದರಿಂದ ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯುತ್ ಬಳಕೆ ನಿಯಂತ್ರಣ ತಪ್ಪಿದಂತಿದೆ. ಅಕ್ಟೊಬರ್ 12 ರಿಂದ ಎಲ್ಲೆಡೆ ವಿದ್ಯುತ್ ಬಿಲ್ ವಿತರಣೆ ಶುರುವಾಗಿದೆ. ಕರಾವಳಿ ಭಾಗದಲ್ಲಿ ಬಹುತೇಕ ಗ್ರಾಹಕರ ವಿದ್ಯುತ್ ಬಳಕೆ ಗೃಹ ಜ್ಯೋತಿಯ ಸರಾಸರಿ ಮಿತಿಯಿಂದ ಮೀರಿದೆ. ಅದರ ಜತೆಗೆ ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 1.56 ರೂ ವಿದ್ಯುತ್ ವೆಚ್ಚ ಮತ್ತು ಯೂನಿಟ್ ಮೇಲೆ ಶೇ 9 ರಷ್ಟು GST ಸೇರುವುದರಿಂದ ಹೆಚ್ಚುವರಿ ಯೂನಿಟ್ ವೆಚ್ಚ ತಲಾ 9 ರೂ ವರೆಗೆ ಆಗಿದೆ.
ಉದಾಹರಣೆಗೆ ಗೃಹ ಜ್ಯೋತಿ ಯೋಜನೆಯಡಿ ಸರಾಸರಿ 90 ಯೂನಿಟ್ ವರೆಗೆ ಉಚಿತ ವಿದ್ಯುತ್ ಗೆ ಅರ್ಹವಾಗಿದ್ದ ಮನೆಯೊಂದರಲ್ಲಿ ಸೆಪ್ಟೆಂಬರ್ ನಲಿ ವಿದ್ಯುತ್ ಬಳಕೆ 130 ಯೂನಿಟ್ ಆಗಿದೆ. ಆ ಬಿಲ್ ಈಗ ವಿತರಣೆ ಆಗುತ್ತಿದೆ. 90 ಯೂನಿಟ್ ಉಚಿತ ನಂತರದ ಹೆಚ್ಚುವರಿ ಪ್ರತಿ ಯೂನಿಟ್ ಗೆ ತಲಾ ವಿದ್ಯುತ್ 1.56 ವಿದ್ಯುತ್ ವೆಚ್ಚ ಸೇರಿಸಿ 40 ಯೂನಿಟ್ ಗೆ ಸುಮಾರು 360 ರೂ ಶುಲ್ಕ ವಿತರಣೆಯಾಗಿದೆ ಎನ್ನುತ್ತಾರೆ ಹೆಸ್ಕಾಂ ಸಿಬ್ಬಂದಿ.