ಮಹಿಳೆಯರಿಗೆ ಗುಡ್ ನ್ಯೂಸ್ : ಉಚಿತ ಗ್ಯಾಸ್ ಸಂಪರ್ಕಕ್ಕೆ ಮತ್ತೆ ಅವಕಾಶ !! ಉಜ್ವಲ್ ಯೋಜನೆಗೆ ಆನ್ಲೈನ್ ಅರ್ಜಿ ಅಹ್ವಾನ....

ಮಹಿಳೆಯರಿಗೆ ಗುಡ್ ನ್ಯೂಸ್ :
ಉಚಿತ ಗ್ಯಾಸ್ ಸಂಪರ್ಕಕ್ಕೆ ಮತ್ತೆ ಅವಕಾಶ !! 
ಉಜ್ವಲ್ ಯೋಜನೆಗೆ ಆನ್ಲೈನ್ ಅರ್ಜಿ ಅಹ್ವಾನ....



 

              ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಇಗಾಗಯೇ ದೇಶದೆಲ್ಲೆಡೆ 10.35 ಕೋಟಿ ಮಂದಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರವೇ ದೇಶದಲ್ಲಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳ ಮಾಹಿತಿ ಇರುವ ಎಸ್ ಇ ಸಿ ಸಿ ದಂತಾಂಶವನ್ನು ಐಒಸಿ, ಎಚ್ ಪಿ ಸಿ ಎಲ್, ಬಿಪಿಸಿಎಲ್ ತೈಲ ಕಂಪನಿಗಳಿಗೆ ನೀಡಿದ್ದು, ತೈಲ ಕಂಪನಿಗಳು ಉಜ್ವಲ್ ಯೋಜನೆಯಡಿ ತಮ್ಮ ವ್ಯಾಪ್ತಿಯಲ್ಲಿರುವ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಕಡ್ಡಾಯವಾಗಿ ಅನಿಲ ಸಂಪರ್ಕ ಕಲ್ಪಿಸುವಂತೆ ಗ್ಯಾಸ್ ಏಜೆನ್ಸಿ ಗಳಿಗೆ ಟಾರ್ಗೆಟ್ ನೀಡಲಾಗಿತ್ತು. ಪರಿಣಾಮ ಗ್ಯಾಸ್ ಏಜೆನ್ಸಿ ಗಳ ಮಾಲೀಕರು, ತಮಗೆ ನೀಡಿದ್ದ ಗುರಿ ತಲುಪಲು ನಗರ ಸೇರಿದಂತೆ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿರುವ ಕಾಡು ಬಡ ಕುಟುಂಬಗಳನನು ಪತ್ತೆ ಹಚ್ಚಿ ಅವರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡುವ ಮೂಲಕ ಯೋಜನೆಯ ಯಶಸ್ವಿಗೆ ಶ್ರಮಿಸಿದ್ದರು. ಮೈಸೂರಿನಲ್ಲಿಯೇ ೫೦ ಸಾವಿರಕ್ಕೂ ಹೆಚ್ಚು ಮಂದಿ ಉಜ್ವಲ್ ಯೋಜನೆಯ ಫಲಾನುಭವಿಗಳಿದ್ದರೆ.

           ಪ್ರಧಾನಿ ಮಂತ್ರಿ ಉಜ್ವಲ್ ಯೋಜನೆಯಡಿ ಉಚಿತವಾಗಿ ಅನಿಲ ಸಂಪರ್ಕ ಪಡೆಯದೇ ಅವಕಾಶ ವಂಚಿತರಾಗಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಸಿಹಿ ಸುದ್ಧಿ. ಮತ್ತೆ ಗ್ಯಾಸ್ ಸಂಪರ್ಕ ಪಡೆಯುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಿದ್ದು, ಗ್ರಾಹಕರು ನೇರವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಗ್ಯಾಸ್ ಸಂಪರ್ಕ ನೀಡುವ ನಾನಾ ತೈಲ ಕಂಪನಿಯ ಗ್ಯಾಸ್ ಏಜೆನ್ಸಿಗಳನ್ನು ಗ್ರಾಹಕರೇ ನೇರವಾಗಿ ಆಯ್ಕೆ ಮಾಡಿಕೊಂಡು ಉಜ್ವಲ್ ಯೋಜನೆಯಡಿ ಸಂಪರ್ಕ ನೀಡುವಂತೆ ಆನ್ಲೈನ್ ಮೂಲಕ ಅರ್ಜಿಯೊಂದಿಗೆ ಅಗತ್ಯ ದಾಖಲಾತಿ ಸಲ್ಲಿಸಬೇಕಿದೆ.

ಬೇಗ ಅರ್ಜಿ ಸಲ್ಲಿಸಿದವರಿಗೆ ಅವಕಾಶ :

ಯಾವುದೇ ಜಿಲ್ಲೆ ರಾಜ್ಯಕ್ಕೆ ಇಂತಿಷ್ಟು ಎಂದು ನಿಗದಿ ಮಾಡದೇ ಇರುವುದರಿಂದ ಬೇಗ ಅರ್ಜಿ ಸಲ್ಲಿಸಿದವರು, ಯೋಜನೆಯ ಫಲಾನುಭವಿಗಳಾಗಬಹುದು" ಎಂದು ಹೇಳಲಾಗಿದೆ.....

whatss


ಏನೆಲ್ಲಾ ನೀಡುತ್ತಾರೆ?

      ಮೈಸೂರು ಸೇರಿದಂತೆ ರಾಜ್ಯದಲ್ಲೆಡೆ ನಿಗದಿತ ಗುರಿಗಿಂತ ಹೆಚ್ಚು ಮಂದಿಗೆ ಉಜ್ವಲ್ ಯೋಜನೆಯಡಿ ಅನಿಲ ಸಂಪರ್ಕ ಕಲ್ಪಿಸಿ  ಗ್ಯಾಸ್,  ಅಂಪಾರಿಕದೊಂದಿಗೆ ಸ್ಟವ್, ರೇಗುಲೇಟರ್, ರಬ್ಬರ್ ಟ್ಯೂಬ್ ಗಳನ್ನೂ ನೀಡಲಾಗಿತ್ತು. ಈ ಹೆಚ್ಚುವರಿ ಹಣವನ್ನು ಕಂತಿನ ರೂಪದಲ್ಲಿ ಪಡೆಯಲು ಗ್ರಾಹಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಹಣವನ್ನು ಕಡಿತಗೊಳಿಸಲಾಗುತ್ತಿತ್ತು.

75 ಲಕ್ಷ ಮಂದಿಗೆ ಅನಿಲ ಸಂಪರ್ಕಕ್ಕೆ ನಿರ್ಧಾರ :

 ಈ ಮದ್ಯೆ ಉಜ್ವಲ್ ಯೋಜನೆಯಡಿ ಅನಿಲ ಸಂಪರ್ಕ ಪಡೆದ ಗ್ರಾಹಕರಿಗೆ ಸಬ್ಸಿಡಿ ಹಣ ಕೂಡ ಖೋತಾ ಆಗಿದೆ. ಈಗ ಮತ್ತೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುವುದನ್ನು ಪುನಾರಂಭಿಸುವುದರೊಂದಿಗೆ ಹೊಸದಾಗಿ ಉಜ್ವಲ್ ಯೋಜನೆಯಡಿ 75 ಲಕ್ಷ ಮಂದಿಗೆ ಅನಿಲ ಸಂಪರ್ಕ ನೀಡಲು ನಿರ್ಧರಿಸಿದೆ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?

ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ನೇರವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವೆಬ್ ಸೈಟ ನಲ್ಲಿ ಹೆಸರು, ವಿಳಾಸ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಸಂಖ್ಯೆಯನ್ನು ಅಪ್ಲೋಡ್ ಮಾಡಬೇಕು. ಗ್ರಾಹಕರು ತಮಗೆ ಬೇಕಾದ ಗ್ಯಾಸ್ ಏಜೆನ್ಸಿಗಳಿಂದ ಸಂಪರ್ಕ ಪಡೆಯಲು ತಾವೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಯೋಜನೆಯಡಿ 14.2 ಕೆಜಿಯ ಒಂದು ಸಿಲಿಂಡರ್ ಪಡೆಯಲು ಮಾತ್ರ ಅವಕಾಶವಿದೆ. ಆದರೆ 5 ಕೆಜಿಯ ಎರಡು ಸಿಲಿಂಡರ್ ಪಡೆಯಬಹುದು.


 

ಆನ್ಲೈನ್ ಅರ್ಜಿ ಲಿಂಕ್ :

👇👇👇👇👇


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು