ಬೆಂಗಳೂರು ಮೆಟ್ರೋ ರೈಲು ನಿಗಮ ನೇಮಕಾತಿ : 2023
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ವಿವಿಧ ಹುದ್ದೆಗಳ ಭರ್ತಿಗೆ 26-09-2023 ರಂದು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. BMRCL Notification 2023ಈ ಹುದ್ದೆಗಳಿಗೆ ಆಸಕ್ತಿ ಹೊಂದಿರುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲ ಅರ್ಜಿ ಸಲ್ಲಿಸಿ.
ಈ ಲೇಖನದಲ್ಲಿ ನಾವು BMRCL ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಅಧಿಕೃತ ವೆಬ್ ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. BMRCL ಇತ್ತಿಚ್ಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ.
ಅಧಿಕೃತ ಅಧಿಸೂಚನೆ ಪ್ರಕಟಿಸಿದ ದಿನಾಂಕ : 26-09-2023
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 26-09-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 25-10-2023
ಅರ್ಜಿಗಳ ಸ್ವೀಕೃತಿ ಸಲ್ಲಿಸಲು ಕೊನೆಯ ದಿನಾಂಕ : 30-10-2023
ವಯಸ್ಸಿನ ಮಿತಿ :
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಗರಿಷ್ಠ ವಯಸ್ಸಿನ ಮಿತಿ ಈ ಕೆಳಗಿನಂತಿದೆ.
⭐ ಮುಖ್ಯ ಎಂಜಿನಿಯರ್ - 58ವರ್ಷಗಳು
⭐ Addl. ಮುಖ್ಯ ಎಂಜಿನಿಯರ್ - 55ವರ್ಷಗಳು
⭐ Dy. ಮುಖ್ಯ ಎಂಜಿನಿಯರ್ - 50ವರ್ಷಗಳು
⭐ ಕಾರ್ಯನಿರ್ವಾಹಕರ ಎಂಜಿನಿಯರ್ - 45 ವರ್ಷಗಳು
ಶೈಕ್ಷಣಿಕ ಅರ್ಹತೆ :
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾವಿದ್ಯಾಲಯ ಅಥವಾ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವಿ ( Degree in Civil Engineering )/ BE/ B.Tech / ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ :
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ.
⭐ ಶಾರ್ಟ್ ಲಿಸ್ಟ್
⭐ ಸಂದರ್ಶನ
ಸಂಬಳ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಸಂಬಳ ನೀಡಲಾಗುತ್ತದೆ.
⭐ ಮುಖ್ಯ ಎಂಜಿನಿಯರ್ - 1,65,000/-
⭐ Addl. ಮುಖ್ಯ ಎಂಜಿನಿಯರ್ - 1,50,000/-
⭐ Dy. ಮುಖ್ಯ ಎಂಜಿನಿಯರ್ - 1,40,000/-
⭐ ಕಾರ್ಯನಿರ್ವಾಹಕರ ಎಂಜಿನಿಯರ್ - 85,000/-
ಅರ್ಜಿ ಶುಲ್ಕ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ :
👉 ಅಧಿಕೃತ ವೆಬ್ ಸೈಟ್ bmrc.co.in ಗೆ ಭೇಟಿ ನೀಡಿ.
👉ನೇಮಕಾತಿ ೨೦೨೩ ಮೇಲೆ ಕ್ಲಿಕ್ ಮಾಡಿ.
👉ಅಧಿಸೂಚನೆಯು ತೆರೆಯುತ್ತದೆ. ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
👉ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭಾರ್ತಿ ಮಾಡಿ.
👉ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ.
👉ಅರ್ಜಿ ಶುಲ್ಕವನ್ನು ಪಾವತಿಸಿ.
👉ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
ಅರ್ಜಿ ಸಲ್ಲಿಸಿದ ಪ್ರತಿಯ ಜೊತೆಗೆ ನಿಗದಿತ ದಾಖಲಾತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡಬೇಕು.
ಜನರಲ್ ಮ್ಯಾನೇಜರ್ (HR)
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ,
೩ ನೇ ಮಹಡಿ, BMTC ಕಾಂಪ್ಲೆಕ್ಸ್, KH. ರಸ್ತೆ,
ಶಾಂತಿನಗರ, ಬೆಂಗಳೂರು 560027