ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಸಾಧ್ಯತೆ ; ಯಾವಾಗ ಗೊತ್ತೇ ? ಇಲ್ಲಿದೆ ಮಾಹಿತಿ :

ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಸಾಧ್ಯತೆ ; ಯಾವಾಗ ಗೊತ್ತೇ ? ಇಲ್ಲಿದೆ ಮಾಹಿತಿ :



 
               ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯದಲ್ಲಿ ಕಳೆದ ವಾರ ಅವಕಾಶ ನೀಡಲಾಗಿತ್ತು. ಆದರೆ, ಮತ್ತೆ ಸರ್ವರ್ ಕಾಟ ಉಂಟಾಗಿತ್ತು. ಸಾಕಷ್ಟು ಮಂದಿ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ, ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಪಡಿತರ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ !!

             ರೇಷನ್ ಕಾರ್ಡ್ ಕೇವಲ ಪಡಿತರ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಪಾನ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯುವಾಗ ವಿಳಾಸ ಧೃಢೀಕರಣಕ್ಕೆ,  ವಿವಿಧ ಪಿಂಚಣಿ ಯೋಜನೆಗಳಿಗೆ, ಆಶ್ರಯ, ಬಸವ ವಸತಿ ಮೊದಲಾದ ವಸತಿ ಯೋಜನೆಗಳ ಪ್ರಯೋಜನ ಪಡೆಯುವ ಸಂದರ್ಭದಲ್ಲಿ, ನೆರೆ ಹಾವಳಿ, ಪ್ರಕೃತಿ ವಿಕೋಪ ಪರಿಹಾರ ಪಡೆಯುವ ಸಂದರ್ಭದಲ್ಲಿ ವಾಸ್ತವ್ಯ ಧೃಢೀಕರಣಕ್ಕೆ, ಅನ್ನಭಾಗ್ಯ ಯೋಜನೆಯ ಪಡೆಯಲು, ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸೇರಿದಂತೆ ಸರ್ಕಾರ ನಾನಾ ಯೋಜನೆಗಳ ಪ್ರಯೋಜನ ಪಡೆಯುವ ಸಂದರ್ಭದಲ್ಲಿ ಒದಗಿಸಬೇಕಾದ ದಾಖಲೆಗಳ ಪೈಕಿ ಪಡಿತರ ಚೀಟಿಯು ಪ್ರಮುಖವಾಗಿದೆ.
ಪಡಿತರ ಚೀಟಿ ತಿದ್ದುಪಡಿಗೆ ಆಹಾರ ಇಲಾಖೆ ನೀಡಿದ್ದ ಅವಧಿಯಲ್ಲೇ ಸರ್ವರ್ ಸಮಸ್ಯೆ ಎದುರಾದ ಕಾರಣ ಪಡಿತರ ಚೀಟಿದಾರರಿಗೆ ದಾಖಲೆ ಸರಿಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಪಡಿತರ ಚೀಟಿ ತಿದ್ದುಆದಿಗೆ ಸರ್ಕಾ ನವೆಂಬರ್ ಮೊದಲ ವಾರ ಮತ್ತೊಮ್ಮೆ ಅವಕಾಶ ನೀಡುವ ಸಾಧ್ಯತೆ ಇದೆ.

ಈ ಹಿನ್ನಲೆಯಲ್ಲಿ ಆಹಾರ ಇಲಾಖೆ ಅಕ್ಟೊಬರ್ 19,  20,  21 ರಂದು ಅವಕಾಶ ನೀಡಿತ್ತು. ಸರ್ವರ್ ಸಮಸ್ಯೆಯಿಂದ ಆ ಸಮಯದಲ್ಲಿ ತಿದ್ದುಪಡಿ ನೆರವೇರಲಿಲ್ಲ. 

ನವೆಂಬರ್ 1 ರಿಂದ ಮತ್ತೊಮ್ಮೆ ಅವಕಾಶ!! 

    "ಮೊದಲ  ದಿನ ಜಿಲ್ಲೆಯಲ್ಲಿ ಸುಮಾರು 1 ಸಾವಿರ ರೇಷನ್ ಕಾರ್ಡ್ ಗಳ ತಿದ್ದುಪಡಿ ಆಗಿದೆ. ಉಳಿದ ಎರಡು ದಿನ ಸರ್ವರ್ ಸಮಸ್ಯೆಯಿಂದ ಯಾವುದೇ ಕಾರ್ಡ್ ತಿದ್ದುಪಡಿಯಾಗಿಲ್ಲ. ಈ ಹಿನ್ನಲೆಯಲ್ಲಿ ನವೆಂಬರ್ 1 ರಿಂದ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ ನೀಡಲಾಗುತ್ತಿದೆ. " ಎಂದು ಬೆಳಗಾವಿಯ ಆಹಾರ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.

whatss

ಸರ್ವರ್ ಸಾಮರ್ಥ್ಯ ಹೆಚ್ಚಿಸಿ 

ಖಾಸಗಿ ಸಂಸ್ಥೆಗಳಲ್ಲಿನ ಶವರ್ ಅಡೆತಡೆ ಇಲ್ಲದೆ ಏಕ ಕಾಲಕ್ಕೆ ಲಕ್ಷಾಂತರ ಜನರಿಗೆ ಸೇವೆ ಒದಗಿಸುತ್ತದೆ. ಆದರೆ ಸರ್ಕಾರೀ ಇಲಾಖೆಗಳ ಕೆಲಸ ಕಾರ್ಯದಲ್ಲಿ ಪದೇ ಪದೇ ಸರ್ವರ್ ಡೌನ್ ಆರೋಪ ಕೇಳಿಬರುತ್ತದೆ. ಗೃಹ ಲಕ್ಷ್ಮೀತ್ರ ನೋಂದಣಿ, ಗೃಹ ಜ್ಯೋತಿ ನೋಂದಣಿ,  ಪಡಿತರ ಕಾರ್ಡ್ ತಿದ್ದುಪಡಿ ಮೊದಲಾದ ಸಂದರ್ಭದಲ್ಲಿ ಒಂದೇ ಬಾರಿಗೆ ಲಕ್ಷಾಂತರ ಜನ ವೆಬ್ ಸೈಟ್ ಬಳಸುವ ಮಾಹಿತಿ ಇದ್ದರು ಸರಕಾರ ಸೇವಾ ಸಿಂಧಿ ಮತ್ತಿತರ ಸರ್ಕಾರೀ ವೆಬ್ ಸೈಟ್ ಪೋರ್ಟಲ್ ಸರ್ವರ್ ಗಳ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಬೆಳಗಾವಿ ಜಿಲ್ಲೆಯ ಪಡಿತರ ಸಂಖ್ಯೆ 

APL - 3,22,712

BPL - 10,78,753

ಅಂತ್ಯೋದಯ - 68,553

 




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು