AIICLAS 2023:
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಡಿಯಲ್ಲಿ ಬರುವ ಕಾರ್ಗೋ ಲಾಜಿಸ್ಟಿಕ್ ಆಂಡ್ ಅಲೈಡ್ ಸರ್ವಿಸಸ್ ಭದ್ರತಾ ವಿಭಾಗದಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಅಧಿಕೃತ ಜಾಲತಾಣ, ಅಧಿಕೃತ ಅಧಿಸೂಚನೆ, ವೇತನ ಮತ್ತು ವಯೋಮಿತಿಗಳ ವಿವರ ಹಾಗೂ ಪ್ರಮುಖ ದಿನಾಂಕಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಸಂಪರ್ಣ ಲೇಖನ ಓದಿ ಅರ್ಜಿ ಸಲ್ಲಿಸಿ.
ಶೈಕ್ಷಣಿಕ ಅರ್ಹತೆ ಏನು?
AAICLAS ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಪಿಯುಸಿಯಲ್ಲಿ ಶೇ 60 ಅಂಕಗಳೊಂದಿಗೆ ಪಾಸಾಗಿರಬೇಕು. ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ತಿಳಿದಿರಬೇಕು.
ವಯೋಮಿತಿ : ಅಭ್ಯರ್ಥಿಗಳ ವಯಸ್ಸು ನಿಗದಿತ ದಿನಾಂಕಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಟ ವಯೋಮಿತಿ ನಿಗದಿತ ದಿನಾಂಕವಾದ 01-10-2023 ರಂದು ಗರಿಷ್ಟ 27 ವರ್ಷ ಮೀರಿರಬಾರದು. ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿಯಲ್ಲಿ ಈ ಕೆಳಗಿನಂತೆ ವಯೋಮಿತಿ ಸಡಿಲಿಕೆ ನೀಡಲಾಗುವುದು.
OBC ವರ್ಗ 03 ವರ್ಷ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗ 05 ವರ್ಷ
ಶುಲ್ಕ ವಿವರ :
OBC ಹಾಗೂ ಸಾಮಾನ್ಯ ವಿದ್ಯಾರ್ತಿಗಳಿಗೆ 500 ರೂ
ಹಾಗೂ SC / ST ವಿದ್ಯಾರ್ಥಿಗಳಿಗೆ 100 ರೂ
ಮಾಸಿಕ ಸಂಬಳ ಎಷ್ಟಿರುತ್ತದೆ?
ಭದ್ರತಾ ಸಹಾಯಕರಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಮೊದಲ ವರ್ಷ 21,500 ರೂಪಾಯಿ, ಎರಡನೇ ವರ್ಷ 22,000 ರೂಪಾಯಿ ಹಾಗೂ 3ನೇ ವರ್ಷ 22,500 ರೂಪಾಯಿ ವೇತನ ನೀಡಲಾಗುವುದು.
ಭದ್ರತಾ ಸಹಾಯಕರ ಕರ್ತವ್ಯಗಳೇನು?
ಭದ್ರತಾ ವಿಭಾಗದ, ಭದ್ರತಾ ಸಹಾಯಕರಾಗಿ ಆಯ್ಕೆಯಾದ ಅಭ್ಯರ್ಥಿಗಳು ಪ್ರಯಾಣಿಕರಿಗೆ ಸಂಬಂಧಿಸಿದ ಲಗೇಜ್ ಗಳ ತಪಾಸಣೆ, ವಿಮಾನಕ್ಕೆ ಲೋಡಿಂಗ್ ಮತ್ತು ಅನ್ ಲೋಡಿಂಗ್ ಸೇರಿದಂತೆ ಹಲವು ಕರ್ತವ್ಯಗಳನ್ನು ಹೊಂದಿರುತ್ತದೆ.
Tags
Jobs