ಗೃಹಲಕ್ಷ್ಮಿ ಯೋಜನೆಯ ಮೆಸೇಜ್ ಬಂದ್ರು ಹಣ ಬಂದಿಲ್ವಾ? ಎಲ್ಲಾ ದಾಖಲೆ ನೀಡಿದ್ರೂ ದುಡ್ಡು ಬರದಿರಲು ಇದೆ ಕಾರಣ ನೋಡಿ...

 

ಗೃಹಲಕ್ಷ್ಮಿ ಯೋಜನೆಯ ಮೆಸೇಜ್ ಬಂದ್ರು ಹಣ ಬಂದಿಲ್ವಾ? ಎಲ್ಲಾ ದಾಖಲೆ ನೀಡಿದ್ರೂ ದುಡ್ಡು ಬರದಿರಲು ಇದೆ ಕಾರಣ ನೋಡಿ...


 

ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿದ ಬಗ್ಗೆ ಯಶಸ್ವಿ ಮೆಸೇಜ್ ಬಂದ್ರೂ ಸುಮಾರು 10 ಲಕ್ಷ ಮಹಿಳೆಯರ ಖಾತೆಗೆ ಇನ್ನೂ ಎರಡು ಸಾವಿರ ರೂಪಾಯಿ ಹಣ ಜಮೆಯಾಗಿಲ್ಲ.

ಇನ್ನು ಹಣ ಬಂದಿಲ್ವಾ?

ಎಲ್ಲಾ ದಾಖಲೆಗಳನ್ನು ನೀಡಿದ್ದೇವೆ. ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ದೋಷವಿಲ್ಲ ಎಂದ ಮೆಸೇಜ್ ಬಂದಿದೆ. ಆದ್ರೂ ನಮ್ಮ ಖಾತೆಗೆ ಎರಡು ಸಾವಿರ ರೂಪಾಯಿ ಹಣ ಬಂದಿಲ್ಲ ಎಂದು ಮಹಿಳೆಯರು ಹೇಳುತ್ತಿದ್ದಾರೆ.
ಎಲ್ಲಾ ದಾಖಲೆಗಳು ಸರಿಯಾಗಿಲ್ಲದಿದ್ರೆ ಧೃಡೀಕರಣದ ಸಂಖ್ಯೆ ಮತ್ತು ಮೆಸೇಜ್ ಏಕೆ ಬರುತ್ತೆ ಎಂದು ಗೃಹಲಕ್ಷ್ಮಿ ಯೋಜನೆಯ ವಂಚಿತ ಮಹಿಳೆಯರು ಪ್ರಶ್ನೆ ಮಾಡುತ್ತಿದ್ದಾರೆ.

ಸುಮಾರು 10 ಲಕ್ಷಕ್ಕೂ ಅಧಿಕ ಮಹಿಳೆಯರ ಖಾತೆಗೆ ಹಣ ಜಮೆ ಆಗಿಲ್ಲ ಎಂದು ವರದಿಯಾಗಿದೆ. ಹಣ ಹಾಕದೆ ಸರ್ಕಾರ ದಾಖಲೆಗಳು ಸರಿಯಾಗಿಲ್ಲ ಎಂದು ಹೇಳುತ್ತಿದೆ ಎನ್ನಲಾಗಿದೆ.

whatss


ನಿಮ್ಮಲ್ಲಿ ಮೂರ್ನಾಲ್ಕು ಬ್ಯಾಂಕ್ ಖಾತೆಗಳಿವೆಯಾ?

ಒಬ್ಬರ ಹೆಸರಿನಲ್ಲಿ ಮೂರ್ನಾಲ್ಕು ಬ್ಯಾಂಕ್ ಖಾತೆ ಹೊಂದಿದ್ದರೂ ಹಣ ಬಂದಿಲ್ಲ. ಇದರ ಜೊತೆಗೆ ಎರಡು ವರ್ಷಗಳಿಂದ ಬ್ಯಾಂಕ್ ಖಾತೆ ನಿರ್ವಹಣೆ ಮಾಡದೇ ಇರೋರಿಗೂ ಹಣ ಜಮೆ ಆಗಿಲ್ಲ. ಈ ರೀತಿಯ ಸಮಸ್ಯೆಗಳಿಂದ ಗೃಹಲಕ್ಷ್ಮಿಯರಿಗೆ ಹಣ ಜಮೆ ಆಗುತ್ತಿಲ್ಲ.

ಆಧಾರ್  ನಂಬರ್ ಲಿಂಕ್?

ಗ್ರಾಮೀಣ ಭಾಗದಲ್ಲಿ ಬಹುತೇಕರು ಬ್ಯಾಂಕ್ ಖಾತೆ ಹೊಂದಿದ್ದರೂ ನಿರ್ವಹಣೆ ಮಾಡಿರಲ್ಲ. ಇದರ ಜೊತೆಗೆ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಮಾಡಿರಲ್ಲ. ಇಂತಹ ಖಾತೆಗಳ ಸಂಖ್ಯೆ ನೀಡಿದವರಿಗೆ ಹಣ ಜಮೆ ಆಗಿಲ್ಲ ಎಂದು ತಿಳಿದಿ ಬಂದಿಲ್ಲ.

ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯ ಆಧಾರದ ಮೇಲೆಯೇ ಗೃಹಲಕ್ಷ್ಮಿಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದ್ರೆ ಸರ್ಕಾರ ಪಡಿತರ ಚೀಟಿಯಲ್ಲಿನ ಸಮಸ್ಯೆ ಪರಿಹಾರಕ್ಕೆ ಕ್ಷಿಪ್ರವಾಗಿ ಸರ್ಕಾರ ಮುಂದಾಗುತ್ತಿಲ್ಲ.

ಉತ್ಸಾಹ ಕಳೆದುಕೊಂಡ ಸರ್ಕಾರ 

ಗ್ಯಾರಂಟಿ ಯೋಜನೆಗಳನ್ನು ಆರಂಭಿಸುವಾಗ ಸರ್ಕಾರಕ್ಕೆ ಇದ್ದ ಉತ್ಸಾಹ ಈಗ ಕಡಿಮೆಯಾದಂತೆ ಕಾಣಿಸುತ್ತಿದೆ. ಇಂತಹ ತಾಂತ್ರಿಕ ಕಾರಣಗಳಿಂದ 10 ಲಕ್ಷಕ್ಕೂ ಅಧಿಕ ಜನ ಹಣಕ್ಕಾಗಿ ಕಾಯುತ್ತಿದ್ದಾರೆ.



 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು