ಪಿಎಂ ಕಿಸಾನ್ ಯೋಜನೆ:
ಕೃಷಿಯಲ್ಲಿ ತೊಡಗುವ ರೈತರ ವ್ಯವಸಾಯ ಕಾರ್ಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒಂದಿಷ್ಟು ಸಹಾಯಧನ ಒದಗಿಸಲು 2019 ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿತು. ಅದರಂತೆ ವರ್ಷಕ್ಕೆ 3 ಕಂತುಗಳಲ್ಲಿ 2000 ರೂ ನಟ ಒಟ್ಟು 6000 ರೂ ಹಣವನ್ನು ರೈತರಿಗೆ ಒದಗಿಸಲಾಗುತ್ತದೆ. ಜಮೀನು ಮಾಲೀಕತ್ವ ಹೊಂದಿರುವ ರೈತರು ಈ ಯೋಜನೆಯ ಫಲಾನುಭವಿಗೆ ಅರ್ಹರಾಗಿರುತ್ತಾರೆ. ಸುಮಾರು 10 ಕೋಟಿ ಆಸುಪಾಸಿನ ಸಂಖ್ಯೆಯಷ್ಟು ಫಲಾನುಭವಿಗಳು ಈ ಯೋಜನೆಯಲ್ಲಿದ್ದಾರೆ.
ಒಂದು ಹಣಕಾಸು ವರ್ಷದಲ್ಲಿ 3 ಕಂತುಗಳಲ್ಲಿ ಅಂದರೆ ಏಪ್ರಿಲ್ ನಿಂದ ಜುಲೈ ವರೆಗೆ, ಆಗಸ್ಟ್ ನಿಂದ್ ನವೆಂಬರ್ ವರೆಗೆ, ಡಿಸೇಂಬೆರ್ ನಿಂದ ಮಾರ್ಚ್ ವರೆಗೆ ಅವಧಿಗೆ 2000 ಹಣವನ್ನು ಸರ್ಕಾರ ರೈತರಿಗೆ ನೀಡುತ್ತದೆ. ಸರ್ಕಾರ ಇಲ್ಲಿಯವರೆಗೆ 15 ಕಂತುಗಳಲ್ಲಿ ಒಟ್ಟು 2.5 ಲಕ್ಷ ಕೋಟಿ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದೆ.
ಜುಲೈ ತಿಂಗಳಲ್ಲಿ 14ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಪ್ರತಿ ನಾಲ್ಕು ತಿಂಗಳಿಗೆ ಕೇಂದ್ರ ಸರ್ಕಾರ 2,000 ರೂ ಹಣವನ್ನು ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತದೆ. ಅದರಂತೆ ನವೆಂಬರ್ ತಿಂಗಳಲ್ಲಿ 15 ಕಂತಿನ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ನವೆಂಬರ್ ಕೊನೆಯ ವಾರದಲ್ಲಿ 2,000 ರೂ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.
Tags
Govt.scheme