ಆತ್ಮೀಯರೇ,,, ತಮಗೆಲ್ಲ ತಿಳಿದಿರುವ ಹಾಗೆ ಹೆಸರು ಬೆಳೆವಿಮೆ ಮಾಡಿಸಿದಂತಹ ರೈತರ ಖಾತೆಗಳಿಗೆ ಈಗಾಗಲೇ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು ನವೆಂಬರ್ 10ರೊಳಗೆ ರೈತರ ಖಾತೆಗಳಿಗೆ ಪ್ರತಿ ಎಕರೆಗೆ 3,364 ರೂಪಾಯಿಗಳನ್ನು ಜಮೆ ಮಾಡಲಾಗುವುದು ಎಂದು ಮೂಲಗಳ ಮೂಲಕ ಮಾಹಿತಿ ತಿಳಿದು ಬಂದೆ.
ತಮಗೆಲ್ಲ ಗೊತ್ತಿರುವ ಹಾಗೆ ಕರ್ನಾಟಕದಲ್ಲಿ ಹೆಸರು ಬೆಳೆಗೆ ಮಾಡಿಸಿದಂತಹ ರೈತರಿಗೆ ಈಗಾಗಲೇ ಬೆಳೆ ವಿಮೆಯ ಅನಾ ಬಿಡುಗಡೆಯಾಗಿದ್ದು ಅದರಲ್ಲಿಯೂ ಪ್ರಮುಖವಾಗಿ ಗದಗ್ ಜಿಲ್ಲೆ, ಹೆಸರು ಬೆಳೆಯ ವಿಮೆಯಲ್ಲಿ ಸಿಂಹ ಪಾಲನ್ನು ಪಡೆದಿತ್ತು.
ಈಗಾಗಲೇ ಗದಗ್ ಜಿಲ್ಲೆಯ ಹಲವು ಗ್ರಾಮಗಳ ರೈತರಿಗೆ ಬೆಳೆ ವಿಮೆಯ ಹಣ ಜಮೆಯಾಗಿದೆ, ಗದಗ್ ಜಿಲ್ಲೆಯ ಹೊಂಬಾಳ ಗ್ರಾಮದ ರೈತರಿಗೆ ಈಗಾಗಲೇ ಹೆಸರು ಬೆಳೆ ವಿಮೆಯ ಹಣ ಜಮೆಯಾಗಿದೆ, ಆದರೆ ಇನ್ನೂ ಕೆಲವೊಂದಿಷ್ಟು ಗ್ರಾಮಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿಲ್ಲ.
ಗದಗ್ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ ಜಿಲ್ಲೆ ಬಾಚಿಕೊಂಡಿದ್ದು ಅದರಲ್ಲಿ ಈಗಾಗಲೇ ಗದಗ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಹಣ ಇನ್ನೇನು ಕೆಲವೇ ದಿನಗಳಲ್ಲಿ ಜಮೆಯಾಗಲಿವೆ.
ಆನ್ಲೈನ್ ಮೂಲಕ ನಿಮ್ಮ ಖಾತೆಗಳಿಗೆ ಎಷ್ಟು ಬೆಳೆ ವಿಮೆಯ ಹಣ ಜಮೆಯಾಗಿದೆ ಎಂದು ತಿಳಿಯುವ ವಿಧಾನ :
⇒ ಮೊದಲಿಗೆ ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ.
⇒ ವರ್ಷ ಹಾಗೂ ಋತು ಆಯ್ಕೆ ಮಾಡಿ.
⇒ ವರ್ಷ 2023-24
ಋತು : kharif / ಮುಂಗಾರಿ
⇒ ಅನಂತರ ನೀವು ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ
⇒ ಲಿಂಕ್ ಮೇಲೆ ಕ್ಲಿಕ್ ಮಾಡಿ
⇒ ಅಲ್ಲಿ ಮಧ್ಯದಲ್ಲಿ ಕಾಣುವಂತಹ ಫಾರ್ಮರ್ಸ್ ವಿಭಾಗದಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಕ್ಲಿಕ್ ಮಾಡಿ
⇒ ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರ್ ಅನ್ನು ಹಾಕಿ ಕ್ಯಾಪ್ಚ್ಯಾ ಕೋಡ್ ಅನ್ನು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ
⇒ ಆಗ ನಿಮಗೆ ನಿಮ್ಮ ಖಾತೆಗಳಿಗೆ ಎಷ್ಟು ಹಣ ಯಾವಾಗ ಯಾವ ಖಾತೆಗೆ ಜಮೆಯಾಗಿದೆ ಎಂದು ಅಲ್ಲಿ ನೀವು ವೀಕ್ಷಿಸಬಹುದು.
ಬೆಳೆ ವಿಮೆಯ ಹಣ ನಿನ್ನೆ ತಾನೇ ಬಿಡುಗಡೆಯಾಗಿದ್ದು, ಆನ್ಲೈನ್ ನಲ್ಲಿ ಅಪ್ಡೇಟ್ ಆಗಲು ಕೆಲವು ಸಮಯವನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ನೀವು ಒಂದೆರಡು ದಿನ ಬಿಟ್ಟು ನೋಡಿದರೆ ನೀವು ಆನ್ಲೈನ್ ನಲ್ಲಿ ಯಾವ ಖಾತೆಗೆ ಯಾವ ದಿನಾಂಕದಂದು ಎಷ್ಟು ಹಣ ಜಮೆಯಾಗಿದೆ ಎಂಬುದರ ಖಚಿತ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ.
Tags
Govt.scheme