ಅರ್ಜಿ ಆಹ್ವಾನಿಸಲಾಗಿದೆ.
2023-24 ನೇ ಸಾಲಿನ ಯೋಜನೆಗಳು:
✔ ಸ್ವಯಂ ಉದ್ಯೋಗ ನೇರಸಾಲ ಯೋಜನೆ :
✔ ಮೈಕ್ರೋಕ್ರೆಡಿಟ್ ಯೋಜನೆ
✔ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ
✔ ಭೂಒಡೆತನ ಯೋಜನೆ
✔ ಗಂಗಾ ಕಲ್ಯಾಣ ಯೋಜನೆ
1. ಸ್ವಯಂ ಯೋದ್ಯೋಗ ನೇರಸಾಲ ಯೋಜನೆ "
ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗು ಸಾಲ ಮಂಜೂರು ಮಾಡಲಾಗುತ್ತದೆ.
👉 ಘಟಕ ವೆಚ್ಚ ರೂ ೧ ಲಕ್ಷ
👉 ಸಹಾಯಧನ ರೂ 50,000
👉 ಸಾಲ ರೂ 50,000 (4ರ ಬಡ್ಡಿದರ)
2. ಉದ್ಯಮಶೀಲತಾ ಅಭಿವೃದ್ಧಿ ಯೋಜನೆ "
ಇತರೆ ಉದ್ದೇಶ :
ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಈ ಕೆಳಕಂಡಂತೆ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
👉 ಘಟಕ ವೆಚ್ಚದ ಶೇ 70ರಷ್ಟು ಸಹಾಯಧನ ಅಥವಾ ಗರಿಷ್ಟ ರೂ 1 ಲಕ್ಷ
👉 ಘಕಟ ವೆಚ್ಚದ ಶೇ 70ರಷ್ಟು ಸಹಾಯಧನ ಅಥವಾ ಗರಿಷ್ಟ ರೂ 2 ಲಕ್ಷ
ಸ್ವಾವಲಂಬಿ ಸಾರಥಿ :
ಸರಕು ವಾಹನ/ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ.
ಘಟಕವೆಚ್ಚದ ಶೇ 75ರಷ್ಟು ಸಹಾಯಧನ ಅಥವಾ ಗರಿಷ್ಟ ರೂ 4 ಲಕ್ಷ
3. ಮೈಕ್ರೋ ಕ್ರೆಡಿಟ್ ಯೋಜನೆ
ಮಹಿಳಾ ಸ್ವಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುವುದು
👉 ಘಟಕ ವೆಚ್ಚ ರೂ 2.50 ಲಕ್ಷ
👉 ಸಹಾಯಧನ ರೂ 1.50 ಲಕ್ಷ
👉 ಸಾಲ ರೂ 1 ಲಕ್ಷ (ಶೇಕಡಾ 4ರ ಬಡ್ಡಿದರ)
4. ಭೂ ಒಡೆತನ "
ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಕೆಳಕಂಡ ಘಟಕ ವೆಚ್ಚದಲ್ಲಿ ಕೃಷಿ ಜಾಮೀನು ಖರೀದಿಸಿ ನೀಡಲಾಗುವುದು.
👉 ಘಟಕ ವೆಚ್ಚ ರೂ 25 ಲಕ್ಷ / ರೂ 20. ಲಕ್ಷ
👉 ಸಹಾಯಧನ 50% ರಷ್ಟು
👉 ಸಾಲ ಶೇ 50% ರಷ್ಟು (ಶೇಕಡಾ 6ರಷ್ಟು ಬಡ್ಡಿದರ)
5. ಗಂಗಾ ಕಲ್ಯಾಣ ಯೋಜನೆ "
1.20 ಎಕರೆ ಯಿಂದ 5 ಎಕರೆ ಜಾಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೊಳವೆಬಾವಿ ಕೊರೆದು ಪಂಪ್ ಸೆಟ್ ಅಳವಡಿಸಿ, ವಿದ್ಯುದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುವುದು.
ಘಟಕ ವೆಚ್ಚ ರೂ 4.75 ಲಕ್ಷ / ರೂ 3.75 ಲಕ್ಷ ಇದರಲ್ಲಿ ರೂ 50,000/- ಸಾಲವು ಸೇರಿರುತ್ತದೆ.
ವಿಶೇಷ ಸೂಚನೆ : ನಿಗಮದ ನಿರ್ದೇಶಕ ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29/11/2023
Tags
Govt.scheme