ಬಿಬಿಎಂಪಿ ಇಂದ ಸ್ವಯಂ ಉದ್ಯೋಗಕ್ಕಾಗಿ ರೂ.1,00,000 ವರೆಗೆ ಪ್ರೋತ್ಸಾಹ ಧನ : ಅರ್ಜಿ ಆಹ್ವಾನ:
ಬಿಬಿಎಂಪಿ ಯು ತನ್ನ 9 ವಲಯ ವ್ಯಾಪ್ತಿಯಲ್ಲಿನ ಆರ್ಥಿಕವಾಗಿ ಹಿಂದುಳಿದ ಒಬಿಸಿ, ಎಸ್ ಸಿ, ಎಸ್ ಟಿ ವರ್ಗಗಳ ಅಭ್ಯಥಿಗಳು, ವಿಶೇಷ ಚೇತನರು ಹಾಗೂ ಇತರೆ ಅಭ್ಯರ್ಥಿಗಳಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಅರ್ಜಿ ಆಹ್ವಾನಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನಲ್ಲಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ಆರೋಗ್ಯ ಕಾರ್ಯಕ್ರಮಗಳು, ಆರ್ಥಿಕ ಸಹಾಯ/ ಪ್ರೋತ್ಸಾಹಧನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಇವುಗಳ ಪೈಕಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಧನ, ಕ್ರೀಡಾ ಪಟುಗಳಿಗೆ ಪ್ರೋತ್ಸಾಹಧನ, ಸ್ವಂತ ಸಣ್ಣ ಕೈಗಾರಿಕೋದ್ಯಮಕ್ಕೆ ಪ್ರೋತ್ಸಾಹಧನ, ಇತರೆ ಆರ್ಥಿಕ ಸಹಾಯಧನ ಕಾರ್ಯಕ್ರಮಗಳು ಇವೆ. ಅವುಗಳ ಲಿಸ್ಟ್ ಅನ್ನು ಕೆಳಗಿನಂತೆ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ ?
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ೯ ವಲಯ ಇದ್ದು ಆಯಾ ವಲಯದ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ವರ್ಗ, ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡದ ಅಭ್ಯರ್ಥಿಗಳು, ವಿಶೇಷ ಚೇತನರ, ತೃತೀಯ ಲಿಂಗಿಗಳ ಮತ್ತು ಮಹಿಳೆಯರ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬಿಬಿಎಂಪಿ ಕಲ್ಯಾಣ ಚಟುವಟಿಕೆಗಳ ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಿ. ಅರ್ಜಿ ಡೌನ್ ಲೋಡ್ ಮಾಡಿಕೊಳ್ಳಬೇಕು. ಅಥವಾ ತಮ್ಮ ವಲಯಕ್ಕೆ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ) ರವರ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಆಯಾ ವಲಯದ ಸಹಾಯಕ ಕಂದಾಯ ಅಧಿಕಾರಿ ರವರ ಕಚೇರಿಗೆ ತಲುಪಿಸಬೇಕು.
👉 ಐಟಿಐ ಉತ್ತೀರ್ಣರಾಗಿರುವ ವಿಶೇಷ ಚೇತನ ವಿದ್ಯಾರ್ಥಿಗಳು ಸ್ವಂತ ಸಣ್ಣ ಕೈಗಾರಿಕೋದ್ಯಮ ಪ್ರಾರಂಭಿಸಲು ಗರಿಷ್ಠ ರೂ. 1,00,000 ಲಕ್ಷಗಳ ಸಹಾಯಧನ.
👉 ಈಗಾಗಲೇ ಸಣ್ಣ ಉದ್ಯಮ ಅಥವಾ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಿ ಜೀವನ ನಡೆಸುತ್ತಿರುವ ವಿಶೇಷ ಚೇತನ ಮತ್ತು ತೃತೀಯ ಲಿಂಗಿಗಳಿಗೆ ರೂ.1,00,000 ವರೆಗೆ ಪ್ರೋತ್ಸಾಹಧನ.
👉 ಡಿ-ಫಾರ್ಮಾ ಪರವಾನಗಿ ಹೊಂದಿರುವ ವಿಶೇಷಚೇತನರು 'ಮೆಡಿಕಲ್ ಶಾಪ್' ಅನ್ನು ಪ್ರಾರಂಭಿಸಲು ಗರಿಷ್ಠ ರೂ. 1,00,000 ವರೆಗೆ ಸಹಾಯಧನ.
👉 ಅಂಧ / ದೃಷ್ಟಿಮಾಂದ್ಯರಿಗೆ ಸಂಗೀತ ಸಾಧನಗಳನ್ನು ಖರೀದಿಸಲು ಸಹಾಯಧನ.
👉 ರಾಷ್ಟೀಯ ಮತ್ತು ಅಂತರರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟುಗಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಕ್ರೀಡಾ ಕಿಟ್ ಕ್ರೀಡೆಗೆ ತಕ್ಕಂತೆ.
👉 ಪೌರಕಾರ್ಮಿಕರಿಗೆ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ವಿತರಣೆ (ಗಾರ್ಮೆಂಟ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು).
👉 ವಿಶೇಷ ಚೇತನರಿಗೆ ಹೆಚ್ಚುವರಿಯಾಗಿ ಅಳವಡಿಸಿರುವ ದ್ವಿಚಕ್ರ ವಾಹನ ಸೌಲಭ್ಯ.
👉 ಪಾಲಿಕೆಯ ಹೊಲಿಗೆ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡುವುದು.
👉 ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿರುವ, ನಡೆಸುವ ಸಂಘ ಸಂಸ್ಥೆಗಳಿಗೆ / ವಿಶೇಷ ಚೇತನ ವಿದ್ಯಾಸಂಸ್ಥೆಗಳಿಗೆ ಆರ್ಥಿಕ ಸಹಾಯ.
ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 16-12-2023
Tags
Loan