ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ನೋಂದಾಯಿತ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಪ್ರೇರಣಾ ಯೋಜನೆಯಡಿ ಸಹಾಯಧನದಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರೇರಣಾ ಯೋಜನೆಯಡಿ ಪರಿಶಿಷ್ಟ ಜಾತಿ/ ಪಂಗಡದ ಮಹಿಳಾ ಸ್ವಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲು ಸಮಾಜ ಕಲ್ಯಾಣ ಇಲಾಖೆಯಡಿಯ ವಿವಿಧ ನಿಗಮಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿಗಳ ಸಮೇತ ಆನ್ಲೈನ್ ಮೂಲಕ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ.
ಈ ಯೋಜನೆಯ ಮೂಲಕ ನೋಂದಾಯಿತ ಮಹಿಳಾ-ಸ್ವ ಸಹಾಯ ಸಂಘಗಳಿಗೆ (ಕನಿಷ್ಠ 10 ಸದಸ್ಯರನ್ನು ಹೊಂದಿರಬೇಕು.) ಕಿರು ಆರ್ಥಿಕ ಚಟುವಟಿಕೆಗಳಿಗೆ / ಸ್ವ-ಉದ್ಯೋಗ ಆರಂಭಿಸಲು ಸಾಲ ನೀಡುವುದರ ಜೊತೆಗೆ ಸಹಾಯಧನ ಸೌಲಭ್ಯ ನೀಡಲಾಗುತ್ತದೆ.
ಒಟ್ಟು ರೂ 2.5 ಲಕ್ಷಕ್ಕೆ ರೂ 1.5 ಲಕ್ಷ ಸಹಾಯಧನ ನೀಡುವುದರ ಜೊತೆಗೆ ಬಾಕಿ ಉಳಿದ 1 ಲಕ್ಷಕ್ಕೆ ಶೇಕಡಾ ೪ರ ಬಡ್ಡಿದರದಲ್ಲಿ ಸಾಲ ಒದಗಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ ರೂ 1.5 ಲಕ್ಷ, ನಗರ ಪ್ರದೇಶದಲ್ಲಿ ರೂ 2 ಲಕ್ಷ ಸಂಘವು ನೋಂದಣಿಯಾಗಿದ್ದು, ಕನಿಷ್ಠ 10 ಜನ ಸದಸ್ಯರನ್ನು ಒಳಗೊಂಡಿರಬೇಕು.
ಕುಟುಂಬದ ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್
ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ಸ್ವ-ಸಹಾಯ ಗುಂಪಿನ ಸದಸ್ಯರು ಕೊನೆಯ ದಿನಾಂಕದ ಒಳಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್ ಬೆಂಗಳೂರು ಒನ್, ಸೇವಾ ಸಿಂಧು ಪೋರ್ಟಲ್ ಮೂಲಕ ಅಗತ್ಯ ದಾಖಲೆಗಳನ್ನು ಒದಗಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29 ನವೆಂಬರ್ 2023
Tags
Govt.scheme