ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರೈಜ್ ಮನಿ ಸ್ಕಾಲರ್ಷಿಪ್ 2023 ಪ್ರೋತ್ಸಾಹಧನದ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಅರ್ಹ ವಿದ್ಯಾರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗೆ ಆನ್ಲೈನ್ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಪೋಸ್ಟ್ ಮ್ಯಾಟ್ರಿಕ್ ಪ್ರೈಜ್ ಮನಿ 2023: SC / ST ವಿದ್ಯಾರ್ಥಿಗಳಿಗೆ:
ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ, ಮೂರೂ ವರ್ಷದ ಡಿಪ್ಲೋಮ, ಪದವಿ ಯಾವುದೇ ಸ್ನಾತಕೋತ್ತರ ಪದವಿಯನ್ನು 2023ನೇ ಸಾಲಿನಲ್ಲಿ ಪಾಸಾಗಿರಬೇಕು.
ಪ್ರೈಜ್ ಮನಿ ಎಷ್ಟು?
⇏ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ಕೆಳಗೆ ನೀಡಿರುವ ಮೊತ್ತವನ್ನು ಕೋರ್ಸ್ ಗಳಿಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಕರ್ನಾಟಕ ಸರ್ಕಾರ ನೀಡುತ್ತದೆ.
⇏ PUC Prize Money :
ದ್ವಿತೀಯ ಪಿಯುಸಿ ಮೂರು, ವರ್ಷದ ಡಿಪ್ಲೋಮ- 20,000
⇏ Degree Prize Money :
ಪದವಿ - 25,000
ಪದವಿ - 25,000
⇏ PG Prize Money :
ಯಾವುದೇ ಸ್ನಾತಕೋತ್ತರ (ಉದಾ:MA , MSC ಮುಂತಾದ) - 30,000
⇏ Agriculture, Engineering, Veterninary , Medicine - 35,000
ಪ್ರೈಜ್ ಮನಿ ಅರ್ಜಿಗೆ ಅರ್ಹತೆಗಳೇನು ಬೇಕು?
✔ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಯಾಗಿರಬೇಕು.
✔ ಪ್ರಥಮ ಬಾರಿಗೆ ಪಾಸಾಗಿರಬೇಕು.
✔ ವಿದ್ಯಾರ್ಥಿಯು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ಅಗತ್ಯ ದಾಖಲೆಗಳು:
⭐ ಆಧಾರ್ ಸಂಖ್ಯೆ
⭐ ಪಾಸ್ಪೋರ್ಟ್ ಅಳತೆ ಭಾವಚಿತ್ರ
⭐ SSLC ಮಾರ್ಕ್ಸ್ ಕಾರ್ಡ್
⭐ ಜಾತಿ ಆದಾಯ ಪ್ರಮಾಣ ಪತ್ರ
⭐ ಬ್ಯಾಂಕ್ ಖಾತೆ ವಿವರ
⭐ ಮೊಬೈಲ್ ನಂಬರ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-12-2023
ವಿಶೇಷ ಸೂಚನೆ : ಆನ್ಲೈನ್ ಅರ್ಜಿ ಸಲ್ಲಿಸುವಾಗ ನಿಮ್ಮ ಕಾಲೇಜಿನ ಹೆಸರು ಇಲ್ಲದೆ ಇರುವ ಸಂದರ್ಭದಲ್ಲಿ ಕಾಲೇಜಿನ ಹೆಸರನ್ನು ಇಲಾಖಾ ವೆಬ್ ಸೈಟ್ ನಲ್ಲಿ ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ.
Tags
Scholarship