Atal Pension Scheme :
ನಿಮ್ಮ ಮಗುವಿಗೆ ಸುರಕ್ಷಿತ ಭವಿಷ್ಯವನ್ನು ನೀವು ಬಯಸಿದರೆ, ಸರಿಯಾದ ಸಮಯದಲ್ಲಿ ಹೂಡಿಕೆಯನ್ನು ಪ್ರಾರಂಭಿಸುವುದು ಮುಖ್ಯವಾಗಿದೆ. ಇಂತಹ ಹಲವು ಸರ್ಕಾರೀ ಯೋಜನೆಗಳಿದ್ದು,ಹೂಡಿಕೆಯ ಮೂಲಕ ಮಗುವಿನ ಭವಿಷ್ಯವನ್ನು ಭದ್ರಪಡಿಸಬಹುದು.
ಅಟಲ್ ಪಿಂಚಣಿ ಕೂಡ ಇದೆ ಯೋಜನೆಯಾಗಿದೆ. ನರೇಂದ್ರ ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯಲ್ಲಿ ನೀವು ಕೇವಲ ರೂ 42 ನಾಮಮಾತ್ರ ಹೂಡಿಕೆಯೊಂದಿಗೆ ಮಗುವಿನ ಪಿಂಚಣಿಗಾಗಿ ವ್ಯವಸ್ಥೆ ಮಾಡಬಹುದು. ಆದಾಗ್ಯೂ, ಇದಕ್ಕಾಗಿ ಮಗುವಿನ ವಯಸ್ಸು 18 ವರ್ಷಗಳು ತುಂಬಬೇಕು. ಈ ಯೋಜನೆಯ ಬಗ್ಗೆ ವಿವರ ಇಲ್ಲಿದೆ ನೋಡಿ.
ಅಟಲ್ ಪಿಂಚಣಿ ಯೋಜನೆಯಡಿ, 60 ವರ್ಷ ವಯಸ್ಸಿನಿಂದ ತಿಂಗಳಿಗೆ ರೂ 1000 ದಿಂದ ರೂ 5000 ವರೆಗಿನ ಜೀವಮಾನದ ಕನಿಷ್ಠ ಖಾತರಿ ಪಿಂಚಣಿಯನ್ನು ಪಡೆಯುತ್ತಾರೆ.
ಅಟಲ್ ಪಿಂಚಣಿ ಯೋಜನೆಗೆ ಸೇರುವ ವಯಸ್ಸಿನ ಆಧಾರದ ಮೇಲೆ ಈ ಮೊತ್ತವು ಬದಲಾಗುತ್ತದೆ. ಯೋಜನೆಯಲ್ಲಿ ಕನಿಷ್ಠ 42 ರೂ ಹೂಡಿಕೆ ಮಾಡಿದರೆ ಸಾಕು, ಹೂಡಿಕೆದಾರನ ಮರಣದ ನಂತರ, ಸಂಗಾತಿಗೆ ಸಮಾನ ಪಿಂಚಣಿ ನೀಡಲಾಗುತ್ತದೆ. ಸಂಗಾತಿಯ ಮರಣದ ನಂತರ ಒಟ್ಟು ಪಿಂಚಣಿ ಮೊತ್ತವನ್ನು 60 ವರ್ಷ ವಯಸ್ಸಿನವರೆಗೆ ನಾಮಿನಿಗೆ ನೀಡಲಾಗುತ್ತದೆ.
ಈ ಹೂಡಿಕೆಯಲ್ಲಿ 60 ವರ್ಷಗಳ ನಂತರ ಹೂಡಿಕೆದಾರರು 5000 ರೂ ಪಿಂಚಣಿ ಪಡೆಯುತ್ತಾರೆ. ಈ ಹೂಡಿಕೆಯ ಒಟ್ಟು ಮೊತ್ತವು 8.5 ಲಕ್ಷ ರೂ ಗಳಾಗಿರುತ್ತದೆ.
ಹೂಡಿಕೆಯ ಅವಧಿ 22 ವರ್ಷಗಳವರೆಗೆ ಇರಲಿದ್ದು, ಅಟಲ್ ಪಿಂಚಣಿ ಯೋಜನೆಯು ಸೇರಲು ಬಯಸುವ ಎಲ್ಲಾ ಬ್ಯಾಂಕ್ ಖಾತೆದಾರರಿಗಾಗಿ ಅನುಕೂಲವಾಗಿದೆ. ಯೋಜನೆಗೆ ಸೇರಲು ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಟ ಆಯಸ್ಸು 42 ವರ್ಷಗಳು. ಅಂದರೆ, ಯೋಜನೆಯ ಅಡಿಯಲ್ಲಿ ಸೇರಿದವರು ಹೂಡಿಕೆಯ ಅವಧಿಯ ಅಡಿಯಲ್ಲಿ ಸೇರಿದವರು ಹೂಡಿಕೆಯ ಅವಧಿಯು 22 ವರ್ಷಗಳು. ಎಲ್ಲ ಬ್ಯಾಂಕ್ ಖಾತೆದಾರರು ಖಾತೆಗಳಲ್ಲಿ ಸ್ವಯಂ ಡೆಬಿಟ್ ಸೌಲಭ್ಯದೊಂದಿಗೆ ಯೋಜನೆಗೆ ಸೇರಬಹುದು.
Tags
Govt.scheme