ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ನಾಲ್ಕು ತಿಂಗಳುಗಳೇ ಕಳೆದಿವೆ, ಈವರೆಗೆ ಮೂರೂ ಕಂತಿನ ಹಣ ಜಮಾ ಆಗಿರುವುದು ಮಹಿಳೆಯರಿಗೆ ಸಂತಸದ ವಿಷಯವಾಗಿದೆ.
ಸಾಕಷ್ಟು ಮಹಿಳೆಯರು ತಿಂಗಳ ಸಣ್ಣಪುಟ್ಟ ಮನೆ ನಿರ್ವಹಣಾ ಖರ್ಚಿಗಾಗಿ ಸರ್ಕಾರದಿಂದ ಉಚಿತವಾಗಿ ಈ ಹಣವನ್ನು ಬಳಸಿಕೊಳ್ಳಲು ಸಾಧ್ಯವಾಗಿದೆ. ರಾಜ್ಯ ದಲ್ಲಿ ಸಾಕಷ್ಟು ಬೇಡ ಮಹಿಳೆಯರು ವಾಸವಾಗಿದ್ದು ಅಂತವರಿಗೆ ಉಚಿತವಾಗಿ ಸಿಗುತ್ತಿರುವುದು ನಿಜಕ್ಕೂ ದೊಡ್ಡ ಮೊತ್ತ ಎನಿಸಿದೆ.
ಅದೇನೇ ಇರಲಿ ಗ್ರೂಅಹ್ಲಕ್ಷ್ಮಿ ಹಣ ತಮ್ಮ ಖಾತೆಗೆ ಜಮಾ ಆಗಿಲ್ಲ ಎನ್ನುವ ಗೃಹಿಣಿಯರ ಸಂಖ್ಯೆಯಂತೂ ಕಡಿಮೆಯಾಗಿಲ್ಲ.
ಮೂರನೇ ಕಂತಿನ ಹಣ 1.10 ಕೋಟಿಗೂ ಅಧಿಕ ಮಹಿಳೆಯರಿಗೆ!!
ಗೃಹಲಕ್ಷ್ಮಿ ಯೋಜನೆಯ ಉಚಿತ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಒಟ್ಟು ರಾಜ್ಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು 1.18 ಕೋಟಿ ಎಂದು ಸರ್ಕಾರ ತಮ್ಮ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಪ್ರತಿಯೊಬ್ಬರ ಖಾತೆಗೂ ಹಣ ಬರುವಂತೆ ಮಾಡಲು ಸರ್ಕಾರ 2000 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಮೀಸಲಾಗಿಸಿದೆ. ಆದರೆ ಇನ್ನು ಸಾಕಷ್ಟು ಜನರ ಖಾತೆಗೆ ವರ್ಗಾವಣೆ ಅಜಿಲ ಇದಕ್ಕೆ ಮುಖ್ಯವಾದ ಕಾರಣವನ್ನು ಕೂಡ ಸರ್ಕಾರ ಈಗಾಗಲೇ ತಿಳಿಸಿದೆ.
ಗೃಹಲಕ್ಷ್ಮಿ ಅರ್ಜಿ ತಿರಸ್ಕಾರ!!
ಗೃಹಲಕ್ಷ್ಮಿ ಯೋಜನೆ ಆರಂಭವಾದಾಗಿನಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಸಾಕಷ್ಟು ಬೇರೆ ಬೇರೆ ಕ್ರಮಗಳನ್ನು ಕೈಗೊಂಡಿದೆ. ಆದರೆ ಇಲ್ಲಿಯವರೆಗೆ ಕೋಟಿ ಮಹಿಳೆಯರಿಗೆ ಈ ಯೋಜನೆಯ ಪ್ರಯೋಜನ ಸಿಕ್ಕಿದ್ದರು ಕೂಡ ಸುಮಾರು 4-5 ಲಕ್ಷ ಮಹಿಳೆಯರು ಇದುವರೆಗೆ ಒಂದೇ ಒಂದು ಕಂತಿನ ಹಣ ಪಡೆದುಕೊಂಡಿಲ್ಲ.
ಈ ಕಾರಣಕ್ಕೆ ಯಾರಿಗೆ ಹಣ ಸಿಕ್ಕಿಲ್ಲ ಎಂಬುದನ್ನು ಪರಿಶೀಲನೆ ಮಾಡಲು ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಸರ್ಕಾರ ತಿಳಿಸಿದೆ.
ಇನ್ನು ಸಾಕಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ್ದರು ಕೂಡ ಅವರ ಅರ್ಜಿ ರಿಜೆಕ್ಟ್ ಆಗಿದೆ, ಇದಕ್ಕೆ ಸರ್ಕಾರದ ಸರ್ವರ್ ಸಮಸ್ಯೆಯಿಂದ ಹಿಡಿದು, ರೇಷನ್ ಕಾರ್ಡ್ ಅನ್ನು ಮನೆ ಯಜಮಾನಿ ಹೆಸರಿಗೆ ಮಾಡಿಕೊಳ್ಳದೆ ಇರುವುದು ಕೂಡ ಒಂದು ಪ್ರಮುಖ ಕಾರಣವಾಗಿದೆ.
ಈ ಕಾರಣಕ್ಕಾಗಿ ಸುಮಾರು 50 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ, ಇನ್ನು ಸುಮಾರು 3,082 ಅರ್ಜಿ ಹಾಕಿದ ಮಹಿಳೆಯರು ಮೃತಪಟ್ಟಿರುವ ಹಿನ್ನಲೆಯಲ್ಲಿ ಅಂಥವರಿಗೆ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಲಭ್ಯವಾಗುವುದಿಲ್ಲ. ಅವರ ಅರ್ಜಿಯನ್ನು ರಿಜೆಕ್ಟ್ ಮಾಡಲಾಗಿದೆ.
ಹಾಗಿದ್ದಲ್ಲಿ ನಿಮ್ಮ ಅರ್ಜಿ ಸ್ಥಿತಿ ಏನು?
ನಿಮ್ಮ ಅರ್ಜಿ ಸಲ್ಲಿಕೆ ಸರಿಯಾಗಿದ್ದರೆ ಯಶಸ್ವಿಯಾಗಿದೆ ಎಂದು ಸಂದೇಶ ಬರುತ್ತದೆ. ಹಾಗೆ ಅರ್ಜಿ ಸಲ್ಲಿಕೆ ಸರಿಯಾಗಿ ಆಗಿಲ್ಲ ಎಂದು ಸಂದೇಶ ಬರುತ್ತದೆ.
ಆಗ ನೀವು ಮತ್ತೊಂದು ಸರಿ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಬೇಕಾಗುತ್ತದೆ.
Tags
Govt.scheme

WhatsApp Group