ಈ ಜಿಲ್ಲೆಯವರಿಗೆ ಸರ್ಕಾರದಿಂದ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ....!

ಈ ಜಿಲ್ಲೆಯವರಿಗೆ ಸರ್ಕಾರದಿಂದ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ....!


 
 

          ಈಗಾಗಲೇ ಕರ್ನಾಟಕ ಗೃಹ ಮಂಡಳಿಯಿಂದ ವಿವಿಧ ಜಿಲ್ಲೆಗಳ ಬಡಾವಣೆಗಳ ಅಭಿವೃದ್ಧಿಗಾಗಿ ಹಲವು ನಿವೇಶನಗಳನ್ನು ಹಂಚಿಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಇದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗಿನಂತಿದೆ. 

ಸೈಟ್ ಹಂಚಿಕೆಗೆ ಅರ್ಜಿ ಅಹ್ವಾನ:

          ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ನಿವೇಶಗಳನ್ನು ಹಂಚಿಕೆ ಮಾಡಿದೆ. ಹಂಚಿಕೆ ಮಡಿದ ನಂತರ ಬಾಕಿ ಉಳಿದಿರುವ ನಿವೇಶಗಳನ್ನು ಹಂಚಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಇ-ಪೇಮೆಂಟ್ ಮೂಲಕ ಠೇವಣಿ ಹಣವನ್ನು ಪಾವತಿಸಿ ಅರ್ಜಿಗಳನ್ನು 27/12//2023ರ ಒಳಗೆ ಸಲ್ಲಿಸಬಹುದು. 

ನಿವೇಶಗಳಿಗೆ ಪಾವತಿ ಮಾಡುವ ನೊಂದಣಿ  ಶುಲ್ಕ ಮತ್ತು ಆರಂಭಿಕ ಠೇವಣಿ ಮೊತ್ತದ ವಿವರ:

⇨  EWS - 25000
⇨ LIG   - 50500
⇨ MIG  - 76000
⇨ HIG   - 1 & 2  1,01,500 ರೂಗಳು 

whatss

ಈ ಯೋಜನೆಗೆ ಸೈಟ್ ಲಭ್ಯವಿರುವ ಸ್ಥಳಗಳ ಹೆಸರುಗಳು:

✔  ಚಿಕ್ಕಬಾದವಡಗಿ, ಹುನಗುಂದ ತಾಲೂಕು, ಬಾಗಲಕೋಟೆ ಜಿಲ್ಲೆ, ಅನಂತನಹಳ್ಳಿ - ಮೆಳ್ಳೆಕಟ್ಟೆ ಹರಪ್ಪನಹಳ್ಳಿ ತಾಲೂಕು, ವಿಜನಗರ ಜಿಲ್ಲೆ.
NGO (ಮುಂಡ್ರಿಗಿ) ಹಲಕುಂದಿ, ಬಳ್ಳಾರಿ ಜಿಲ್ಲೆ, ಬಬಲೇಶ್ವರ, ವಿಜಯಪುರ ಜಿಲ್ಲೆ.
ಮುದ್ದೇಬಿಹಾಳ 2ನೇ ಹಂತ, ವಿಜಯಪುರ ಜಿಲ್ಲೆ.

✔  ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲೂಕು, ಚಿಕ್ಕಬದಾವಾಡಗಿ, ಈ ಸ್ಥಳದ ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ 500 ಇರುತ್ತದೆ. ಮತ್ತು ಲಭ್ಯವಿರುವ ಸೈಟ್ LIG 44,  MIG 78,  HIG-1  19,  HIG2  6 ಹೀಗಿದೆ.

✔  ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕು, ಅನಂತನಹಳ್ಳಿ, ಮೆಳ್ಳೆಕಟ್ಟೆ.
ಈ ಸೈಟ್ LIG 12, MIG 7, HIG-1 6, HIG-2 13. ಆಗಿರುತ್ತದೆ. ಮತ್ತು ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ. 650. ಇರುತ್ತದೆ.

✔  ಬಳ್ಳಾರಿ ಜಿಲ್ಲೆ, ಎನ್‌ಜಿಓ (ಮುಂಡ್ರಿಗಿ) & ಹಲಕುಂದಿ. ಲಭ್ಯವಿರುವ ನಿವೇಶನ MIG 149. ಆಗಿದ್ದು , ಮಂಡಳಿಯ ದರ ಪ್ರತಿ ಚದರ ಅಡಿಗೆ 550 ರೂ.ಗಳು. ಆಗಿರುತ್ತದೆ.

✔  ವಿಜಯಪುರ ಜಿಲ್ಲೆ, ಬಬಲೇಶ್ವರ. ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ. 430.ಇರುತ್ತದೆ. ಮತ್ತು ಲಭ್ಯವಿರುವ ಸೈಟ್ LIG 54, MIG 65, HIG-1 45. ಆಗಿದೆ.

✔  ವಿಜಯಪುರ ಜಿಲ್ಲೆ, ಮುದ್ದೇಬಿಹಾಳ 2ನೇ ಹಂತ. EWS 17. LIG 57, MIG 108, HIG-1 51, HIG 16. ಈ ರೀತಿ ಇದೆ.



ಈ ಯೋಜನೆಗಳ ಷರತ್ತು ಮತ್ತು ಸೂಚನೆಗಳು :

1.  ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಅರ್ಜಿದಾರರು ಸುಮಾರು 10 ವರ್ಷಗಳಾದರೂ ಕರ್ನಾಟಕ ರಾಜ್ಯದ ಸಾಮಾನ್ಯ ನಿವಾಸಿಯಾಗಿರಬೇಕು. 

2.  ಅರ್ಜಿದಾರರ ಪತಿ/ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಕರ್ನಾಟಕ ಗೃಹ ಮಂಡಳಿ ಅಥವಾ ಇನ್ನಿತರೇ ಯಾವುದೇ ಸ್ಥಳೀಯ ಸಂಸ್ಥೆ/ಪ್ರಾಧಿಕಾರದಿಂದಾಗಲಿ ಫ್ಲಾಟ್/ಮನೆ ನಿವೇಶನ ಪಡೆದಿರುವುದಿಲ್ಲವೆಂದು ನೋಟರಿ ಮೂಲಕ ಪ್ರಮಾಣೀಕರಿಸಿದ ಪ್ರಮಾಣಪತ್ರ ಹೊಂದಿರಬೇಕು.



 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು