7, 8, 9 & 10ನೇ ತರಗತಿಗಳನ್ನು ಓದಿ ಶಾಲೆ ಬಿಟ್ಟವರಿಗೆ/ಫೇಲಾದವರಿಗೆ ನೇರವಾಗಿ SSLC ಪರೀಕ್ಷೆ ಕಟ್ಟಲು ಡಿಸೇಂಬೆರ್ 30ರವರೆಗೆ ಅವಕಾಶ !!

7, 8, 9 & 10ನೇ ತರಗತಿಗಳನ್ನು ಓದಿ ಶಾಲೆ ಬಿಟ್ಟವರಿಗೆ/ಫೇಲಾದವರಿಗೆ ನೇರವಾಗಿ SSLC ಪರೀಕ್ಷೆ ಕಟ್ಟಲು ಡಿಸೇಂಬೆರ್ 30ರವರೆಗೆ ಅವಕಾಶ !!



 
           ರಾಜ್ಯದಲ್ಲಿ SSLC ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳಿಗೋಸ್ಕರ JSS ಕರ್ನಾಟಕ ಮುಕ್ತ ವಿದ್ಯಾಲಯ, ಮೈಸೂರು ಮತ್ತು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ಅಂಕಣ ನಿರ್ಣಯ ಮಂಡಳಿ ಮಲ್ಲೇಶ್ವರಂ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 2024 ರ ಮಾರ್ಚ್ ತಿಂಗಳಲ್ಲಿ ನಡೆಯುವ SSLC ನೇರ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ದಾವಣಗೆರೆ JSS ಕರ್ನಾಟಕ ಮುಕ್ತ ವಿದ್ಯಾಲಯದ ಸಮನ್ವಯಾಧಿಕಾರಿ ಹಾಗೂ ಸ್ವಯಂ ನಿವೃತ್ತ ಶಿಕ್ಷಕರು ಆದ ಆಣಬೇರು ಶಿವಮೂರ್ತಿ ತಿಳಿಸಿದ್ದಾರೆ.

ಕನಿಷ್ಠ ವಿದ್ಯಾರ್ಹತೆ  7ನೇ ತರಗತಿ ಓದಿರಬೇಕು. ಅಥವಾ 8, 9 ಮತ್ತು 10ನೇ ತರಗತಿಯಲ್ಲಿ ಓದಿ ಅರ್ಧಕ್ಕೆ ಶಾಲೆ ಬಿಟ್ಟವರು ಅಥವಾ ಅನುತ್ತೀರ್ಣರಾದವರು.

ಕನಿಷ್ಠ 15ವರ್ಷ ತುಂಬಿದವರು ನೇರವಾಗಿ SSLC ಪರೀಕ್ಷೆಯನ್ನು ಕಟ್ಟಬಹುದಾಗಿದ್ದು, ದಂಡ ಸಹಿತ ಡಿಸೆಂಬರ್ 30ರೊಳಗೆ ಪ್ರವೇಶ ಪಡೆಯಲು ಅವಕಾಶವಿದೆ. ಮೊ ನಂ. 7795063340/- 7975959362 ಸಂಪರ್ಕಿಸಲು ಕೋರಲಾಗಿದೆ.

whatss

ಏನೆಲ್ಲಾ ಪ್ರಯೋಜನ ಸಿಗುತ್ತವೆ?

👉 ಈ ಪರೀಕ್ಷೆಯಲ್ಲಿ ಪಾಸಾದವರು ಸರ್ಕಾರೀ ನೌಕರಿಗೆ ಅರ್ಜಿ ಸಲ್ಲಿಸಬಹುದು. 
👉 ಅನುಕಂಪ ನೌಕರಿ ಪಡೆಯಬಹುದು. 
👉 ಅಂಗನವಾಡಿ ಸಹಾಯಕಿಯರು ಶಿಕ್ಷಕಿಯಾಗಿ ಬಡ್ತಿ ಹೊಂದಬಹುದು. 
👉 ಹೊರ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಹೊ ಗಾರ್ಡ್ಸ್ ಆಶಾ ಕಾರ್ಯಕರ್ತೆಯರು, ಸೆಕ್ಯುರಿಟಿ ಗಾರ್ಡ್ಸ್  ಮತ್ತು ಇರತೇ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು  ಪರೀಕ್ಷೆ  ತೆಗೆದುಕೊಳ್ಳಬಹದು. 
👉 ಹಾಗೂ ಪಿಯುಸಿ, ಡಿಪ್ಲೋಮ, ITI  ಇನ್ನಿತರೇ ಕೋರ್ಸ್  ಗಳಿಗೆ ಸೇರಿ ವಿದ್ಯಾಭ್ಯಾಸ ಮುಂದು ವರಿಸಲು ಅವಕಾಶವಿರುತ್ತದೆ.

ಬೇಕಾದ ದಾಖಲಾತಿಗಳು:

➡ ಅಭ್ಯರ್ಥಿಗಳು ತಮ್ಮ ಮೂಲ ವರ್ಗಾವಣೆ ಪ್ರಮಾಣಪತ್ರ 
➡ ಮೊಬೈಲ್ ನಂಬರ್, ಲಿಂಕಾಗಿರುವ ಆಧಾರ್ ಕಾರ್ಡ್, 
➡ ಇತ್ತೀಚಿನ 5 ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು 

ಆಸಕ್ತ ಅಭ್ಯರ್ಥಿಗಳು ಹಾಗು ಪೋಷಕರು ಪ್ರವೇಶ ಪಡೆದು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಅಣಬೇರು ಶಿವಮೂರ್ತಿ, ಸ್ವಯಂ ನಿವೃತ್ತ ಶಿಕ್ಷಕರು ಹಾಗೂ ಸಮನ್ವಯಾಧಿಕಾರಿಗಳು, JSS ಕರ್ನಾಟಕ ಮುಕ್ತ ವಿದ್ಯಾಲಯ/ ಕನಕ ಕರೆಸ್ಪಾಂಡೆನ್ಸ್ ಕಾಲೇಜು, ಕುರುಬರ ಹಾಸ್ಟೆಲ್ ಕಾಂಪ್ಲೆಕ್ಸ್, ಜಯದೇವ ಸರ್ಕಲ್ ಹತ್ತಿರ ದಾವಣಗೆರೆ-577 002.
ಮೊ ನಂ. 7795063340/- 7975959362 ಸಂಪರ್ಕಿಸಲು ಕೋರಲಾಗಿದೆ.

 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು