ಉಚಿತ ಎಲೆಕ್ಟ್ರಿಕ್ ಹೊಲಿಗೆ ಯಂತ್ರ ಹಾಗೂ ಟೂಲ್ ಕಿಟ್ ವಿತರಣೆ; ಕೂಡಲೇ ಅರ್ಜಿ ಸಲ್ಲಿಸಿ.....
ಇದೀಗ ಗ್ರಾಮೀಣ ಕೈಗಾರಿಕಾ ಇಲಾಖೆಯ ವತಿಯಿಂದ 2023-24ನೇ ಸಾಲಿನ, ಜಿಲ್ಲಾ ಪಂಚಾಯತ್ ಮೂಲಕ ಅಲ್ಲಿನ ಜನತೆಗೆ ಉಚಿತವಾಗಿ ಸಲಕರಣೆ ಸರಬರಾಜು ಮಾಡುವ ಯೋಜನೆ ಜಾರಿಗೆ ಬಂದಿದೆ.
ಪ್ರತಿ ಜಿಲ್ಲೆಗೆ ಪ್ರತ್ಯೇಕ ವೆಬ್ ಪೋರ್ಟಲ್ ನೀಡಲಾಗಿದ್ದು ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಯಾರಿಗೆ ಸಿಗಲಿದೆ ಪ್ರಯೋಜನ?
ಗ್ರಾಮೀಣ ಭಾಗದಲ್ಲಿ ಇರುವ ಕರಕುಶಲ ವೃತ್ತಿ ನಿರತ ಜನತೆಗೆ ಅನುಕೂಲವಾಗುವಂತೆ ಸರ್ಕಾರ ಹೊಸ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಈ ಮೂಲಕ ಬಡ್ಡಿ ರಹಿತ ಸಾಲ ಸೌಲಭ್ಯ ನೀಡುವುದು, ಸಬ್ಸಿಡಿ ನೀಡುವುದು ಈ ಸೌಕರ್ಯಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.
ಕಮ್ಮಾರರು, ಎಲೆಕ್ಟ್ರಿಷಿಯನ್, ದೋಬಿ, ಕ್ಷೌರಿಕ, ಮೊದಲಾದವರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಇದರ ಜೊತೆಗೆ ಮಹಿಳೆಯರಿಗೆ ಎಲ್ಲಾ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆ ಕೂಡ ಮಾಡಲಾಗುವುದು.
ಈ ಜಿಲ್ಲೆಯವರಿಗೆ ಸಿಗಲಿದೆ ಪ್ರಯೋಜನ!
👉 ಮೈಸೂರು
👉 ಮಂಡ್ಯ
👉 ಚಿಕ್ಕಬಳ್ಳಾಪುರ
👉 ಚಾಮರಾಜನಗರ
👉 ಬೀದರ್
👉 ಬೆಂಗಳೂರು
👉 ಕೋಲಾರ
👉 ಹಾಸನ
👉 ಯಾದಗಿರಿ
👉 ಗದಗ
👉 ರಾಯಚೂರು
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
✅ ಪಾಸ್ಪೋರ್ಟ್ ಅಳತೆಯ ಫೋಟೋ
✅ ಆಧಾರ್ ಕಾರ್ಡ್
✅ ಜಾತಿ ಪ್ರಮಾಣಪತ್ರ
✅ ಹೊಲಿಗೆ ತರಬೇತಿ ಪ್ರಮಾಣಪತ್ರ
ಕುಶಲಕರ್ಮಿ ವೃತ್ತಿಪರರು ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಧೃಢೀಕರಣ ಪ್ರಮಾಣಪತ್ರ ಅಥವಾ ಕಾರ್ಮಿಕ ಇಲಾಖೆಯಿಂದ ವಿತರಿಸಿರುವ ಪ್ರಮಾಣಪತ್ರ ಸಲ್ಲಿಸಬೇಕು.
ಇದರ ಜೊತೆಗೆ ಸಹಾಯಧನ ಪಡೆದುಕೊಳ್ಳಲು ಬ್ಯಾಂಕ್ ಪಾಸ್ ಬುಕ್ ವಿವರ ನೀಡುವುದು ಕಡ್ಡಾಯ.
ಅರ್ಜಿ ಸಲ್ಲಿಸುವುದು ಹೇಗೆ?
⇉ ವೆಬ್ ಸೈಟ್ ಗೆ ಭೇಟಿ ನೀಡಿ ನಂತರ ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಕಾಗುತ್ತದೆ.
⇉ ನಂತರ ಯಾವ ಯೋಜನೆಗೆ ನೆರವು ಪಡೆಯಲು ಬಯಸಿದ್ದೀರಾ ಎಂಬುದನ್ನು ಆಯ್ಕೆ ಮಾಡಬೇಕು.
⇉ ವಿವರಗಳನ್ನು ಭರ್ತಿ ಮಾಡಿದ ನಂತರ ಘೋಷಣಾ ಪಾತ್ರದಲ್ಲಿ I agree ಎನ್ನುವುದನ್ನು ಆಯ್ಕೆ ಮಾಡಿದರೆ ನಿಮ್ಮ ಅಪ್ಲಿಕೇಶನ್ ಸಬ್ ಮಿಟ್ ಆಗುತ್ತದೆ.
ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹೊರಡಿಸಿರುವ ಅದೇ ಸೂಚನೆಯ ಪ್ರಕಾರ ಕೊನೆಯ ದಿನಾಂಕ ನಿರ್ಧರಿಸಲಾಗುತ್ತದೆ.
Tags
Govt.scheme