ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನವನ್ನು ಕಡಿತಗೊಳಿಸುವುದಾಗಿ ಸರ್ಕಾರ ಇತ್ತೀಚಿಗೆ ತಿಳಿಸಿತ್ತು. ಕಾರ್ಮಿಕ ಇಲಾಖೆಯು ಸಾಕಷ್ಟು ಹಣದ ಕೊರತೆ ಎದುರಿಸುತ್ತಿದೆ ಎಂದು ಸರ್ಕಾರ ಇದಕ್ಕೆ ಕರಣ ನೀಡಿದ್ದು, ವಿದ್ಯಾರ್ಥಿಗಳು ಮತ್ತು ತಜ್ಞರು ಸರ್ಕಾರದ ಕ್ರಮಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಕ್ರಮವು ಬಡತನದ ಅಂಚಿನಲ್ಲಿರುವ ಕಟ್ಟಡ ಕಾರ್ಮಿಕರ ಮಕ್ಕಳ ಕಡಿಮೆ ಶಾಲಾ ದಾಖಲಾತಿಗೆ ಕಾರಣವಾಗಬಹುದು. ಮತ್ತು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಹುದು ಎಂದು ಸಂಬಂಧಪಟ್ಟವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2022-23 ನೇ ಸಾಲಿನಲ್ಲಿ ಕಾರ್ಮಿಕ ಇಲಾಖೆಯು 13 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿವೇತನ ಅರ್ಜಿಗಳನ್ನು ಸ್ವೀಕರಿಸಿದೆ ಮತ್ತು 7 ಲಕ್ಷ ವಿದ್ಯಾರ್ಥಿಗಳನ್ನು ಫಲಾನುಭವಿಗಳಾಗಿ ಗುರುತಿಸಿದೆ ಎಂದು ಅಂಕಿಅಂಶ ಹೇಳುತ್ತದೆ. ಶಾಲಾ ಹಂತದಿಂದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿವೇತನದ ಮೊತ್ತವನ್ನು ಶೇ 80-85 ರಷ್ಟು ಕಡಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಇಂಜಿನಿಯರಿಂಗ್ ಅಥವಾ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಇತರ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಇತರ ಸ್ನಾತಕೋತ್ತರ ವಿದ್ಯಾರ್ಥಿಗಳ ಮೇಲೆ ಇದರ ಪ್ರಭಾವ ಬೀರುತ್ತದೆ.
MBBS ವಿದ್ಯಾರ್ಥಿ ವಾರ್ಷಿಕವಾಗಿ 60,000 ರೂಪಾಯಿಗಳನ್ನು ಪಡೆಯುತ್ತಿದ್ದರು. ಅದು ಈಗ ಕೇವಲ 11,000 ರುಪಾಯಿಗೆ ಕಡಿತಗೊಳ್ಳುತ್ತದೆ. ಮತ್ತು ಪಿಜಿ ವಿದ್ಯಾರ್ಥಿಗಳ ಮೊತ್ತವು 35,000 ರೂಪಾಯಿಗಳಿಂದ 10,000 ರುಪಾಯಿಗೆ ಇಳಿಕೆಯಾಗುತ್ತದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗಳು ಮೊದಲ ವರ್ಷ ಮತ್ತು ಅಂತಿಮ ವರ್ಷದ ಕೋರ್ಸ್ ಗಳ ವಿದ್ಯಾರ್ಥಿಗಳೊಂದಿಗೆ ಮಾತನಾಡಿದಾಗ, ಈ ಕ್ರಮವು ದೊಡ್ಡ ಆಘಾತವನ್ನು ತಂದಿದೆ. ವರ್ಷದಿಂದ ವರ್ಷಕ್ಕೆ ಶಿಕ್ಷಣವೆಚ್ಚವು ಹೆಚ್ಚುತ್ತಿರುವಾಗ, ವಿದ್ಯಾರ್ಥಿವೇತನವನ್ನು ಅವರಿಗೆ ಅನುಕೂಲವಾಗುತ್ತಿತ್ತು. ಅದು ಈಗ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.
ಸಣ್ಣ ಮೊತ್ತದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸರ್ಕಾರ ಅವರನ್ನು ಬೆಂಬಲಿಸದಿದ್ದರೆ ಮತ್ತೆ ಯಾರು ಸಹಾಯ ಮಾಡುತ್ತಾರೆ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ನ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ್ ಶರ್ಮ ಹೇಳಿದ್ದಾರೆ.
Tags
Labour Card