ನಮಸ್ಕಾರ ಸ್ನೇಹಿತರೆ.........
ಎಲ್ಲರಿಗು ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ೩ನೇ ಕಂತಿನ ಹಣ ಮತ್ತು ಮುಂದಿನ ಎಲ್ಲ ಕಂತಿನ ಹಣವನ್ನು ಒಂದು ನಿಗದಿತ ದಿನಾಂಕದೊಳಗೆ ಮನೆ ಯಜಮಾನಿಯರ ಖಾತೆಗೆ ಜಮಾ ಮಾಡಲು ಸರ್ಕಾರ ಮುಂದಾಗಿದೆ..
ತಾಂತ್ರಿಕ ಕಾರಣದಿಂದಾಗಿ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ದುಡ್ಡು ವರ್ಗಾವಣೆ ಮಾಡಲು ತಡವಾಗಿತ್ತು. ಸೆಪ್ಟೆಂಬರ್ ತಿಂಗಳ ಹಣವನ್ನು ಅಕ್ಟೋಬರ್ ಕೊನೆಯ ವಾರದಲ್ಲಿ ಹಂತ ಹಂತವಾಗಿ DBT ಮೂಲಕ ವರ್ಗಾವಣೆ ಮಾಡಿದ್ದಾರೆ.
3 ನೇ ಕಂತಿನ ಹಣ ಜಮೆ ಯಾವಾಗ?
ಗೃಹಲಕ್ಷ್ಮಿ ಯೋಜನೆಯ 3ನೇ ಕಂತಿನ ಹಣ ಮತ್ತು ಇನ್ನು ಮುಂದಿನ ಎಲ್ಲ ಕಂತಿನ 2 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಲು ಹಣಕಾಸು ಇಲಾಖೆಯಿಂದ ಹಸಿರು ನಿಶಾನೆ ದೊರೆತದ್ದು ಪ್ರತಿ ತಿಂಗಳ ದಿನಾಂಕ 20 ರೊಳಗೆ ಮನೆ ಯಜಮಾನಿಯರ ಖಾತೆಗೆ ಜಮಾ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಅದರಂತೆ ಅನ್ನಭಾಗ್ಯ ಯೋಜನೆಯ ಹಣವನ್ನು ಪ್ರತಿ ತಿಂಗಳ ದಿನಾಂಕ 20 ರೊಳಗೆ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನು ದಿನಾಂಕ 5 ರೊಳಗೆ ಜಮಾ ಮಾಡಲಿದ್ದಾರೆ. ಈ ರೀತಿಯ ಸರ್ಕಾರದ ಕ್ರಮದಿಂದ ಫಲಾನುಭವಿಗಳ ಗೊಂದಲ ಬಗೆಹರಿಯಲಿದೆ.
Tags
Govt.scheme