ರೈತರಿಗೆ ಕಡಿಮೆ ಬಡ್ಡಿ ಸಾಲ : ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ಸಾಲ ಸೌಲಭ್ಯ ಯೋಜನೆ।। ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್||

ರೈತರಿಗೆ ಕಡಿಮೆ ಬಡ್ಡಿ ಸಾಲ :
ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ಸಾಲ ಸೌಲಭ್ಯ ಯೋಜನೆ।। ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್||




 
ನಮಸ್ಕಾರ ಸ್ನೇಹಿತರೆ.......

       ರೈತರು ಪಶುಸಂಗೋಪನೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸರ್ಕಾರ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ 2023 ಯೋಜನೆಯ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಅರ್ಹ ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ 2023:

         ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಅರ್ಹ ರೈತರಿಗೆ ಪಶುಸಂಗೋಪನೆ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲು ಸಾಲ ಅಭಿಯಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ವಯ ಈ ಕೆಳಗಿನ ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ಭಾರತ ಸರ್ಕಾರದ, ಹಣಕಾಸು ಸೇವೆಗಳ ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್ / ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ.

ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬಡ್ಡಿ ರಿಯಾಯಿತಿ ಸೌಲಭ್ಯವು ರೂ 3 ಲಕ್ಷ ರೂ ಗಳ ವರೆಗೆ ದೊರೆಯಬಹುದಾಗಿದ್ದು, ಪ್ರತಿ ರೈತರಿಗೆ ರೂಪಾಯಿ 10 ಲಕ್ಷ ಸಾಲ ಸೌಲಭ್ಯವನ್ನು ಯಾವುದೇ ಭದ್ರತೆಯಿಲ್ಲದೆ ಪಡೆಯುವ ಅವಕಾಶವಿರುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ಪಡೆಯುವ ಸಾಲಕ್ಕೆ ಶೇ ೨ ರಷ್ಟು ಬಡ್ಡಿ ಸಹಾಯಧನ ನೀಡುತ್ತಿದ್ದು ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದ್ದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ ಶೇ 3 ರಷ್ಟು ಬಡ್ಡಿ ಸಹಾಯಧನದ ಸೌಲಭ್ಯವನ್ನು ಸಹ ಪಡೆಯಬಹುದಾಗಿದೆ.

ರೈತರು ಅವರ ಕಾರ್ಯವ್ಯಾಪ್ತಿಯ ಬ್ಯಾಂಕುಗಳಿಂದ ಪಡೆಯುವ ಸಾಲದ ಬಡ್ಡಿ ದರಕ್ಕೆ ಒಟ್ಟಾರೆ ಶೇ 5 ರಷ್ಟು ಬಡ್ಡಿ ರಿಯಾಯಿತಿಯನ್ನು ಭಾರತ ಸರ್ಕಾರದಿಂದ ಪಡೆಯಬಹುದಾಗಿರುತ್ತದೆ.

whatss



ಯೋಜನೆಯಡಿ ಎಷ್ಟು ಸಾಲ ಸಿಗುತ್ತದೆ?

ಹೈನುಗಾರಿಕೆ :
ಮಿಶ್ರತಳಿ ದನಗಳ ನಿರ್ವಹಣೆಗೆ (1+1) ಪ್ರತಿ ಹಸುವಿಗೆ ಗರಿಷ್ಟ 18,000 ರೂ ನಂತೆ ಒಟ್ಟು ಎರಡು ಹಸುಗಳಿಗೆ 36,000 ರೂ ಸಾಲ ಸೌಲಭ್ಯ ನೀಡುತ್ತಾರೆ.

ಸುಧಾರಿತ ಎಮ್ಮೆಗಳ ನಿರ್ವಹಣೆಗೆ (1+1) ಪ್ರತಿ ಎಮ್ಮೆ ಗರಿಷ್ಟ 21,000 ರೂ ನಂತೆ ಒಟ್ಟು ಎರಡು ಎಮ್ಮೆಗಳಿಗೆ 42,000 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.

ಕುರಿ ಸಾಕಾಣಿಕೆ:
8 ತಿಂಗಳ ಸಾಕಾಣಿಕೆ ಅವಧಿಗೆ 10+1 ಕುರಿಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಕುರಿಗಳಿಗೆ 29,950 ರೂ ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ 14,700 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.

8 ತಿಂಗಳ ಸಾಕಾಣಿಕೆ ಅವಧಿಗೆ 20+1 ಕುರಿಮರಿಗಳ ನಿರ್ವಹಣೆಗೆ ಕಟ್ಟಿ ಮಾಯಿಸುವ ಕುರಿಗಳಿಗೆ 57,200 ರೂ ಹಾಗೂ ಬಯಲಿನಲ್ಲಿ ಮಾಯಿಸುವ ಕುರಿಗಳಿಗೆ ರೂ 28,200 ರೂಪಾಯಿ ಸಾಲ ಸೌಅಲಭ್ಯ ನೀಡುತ್ತಾರೆ.

10 ಕುರಿಮರಿಗಳ ಕೊಬ್ಬಿಸುವಿಕೆಗೆ 13,120 ರೂ ಹಾಗೂ 20 ಕುರಿ ಮರಿಗಳ ಕೊಬ್ಬಿಸುವಿಕೆಗೆ 26,200 ರೂಪಾಯಿ ನೀಡುತ್ತಾರೆ.

ಮೇಕೆ ಸಾಕಾಣಿಕೆ :
೮ ತಿಂಗಳ ಸಾಕಾಣಿಕೆ ಅವಧಿಗೆ 10+1 ಮೇಕೆಗಳ  ನಿರ್ವಹಣೆಗೆ ಕಟ್ಟಿ ಮೇಯಿಸುವ ಕುರಿಗಳಿಗೆ 29,950 ರೂ ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳ  14,700 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.

8 ತಿಂಗಳ ಸಾಕಾಣಿಕೆ ಅವಧಿಗೆ 20+1 ಮೇಕೆಗಳ  ನಿರ್ವಹಣೆಗೆ ಕಟ್ಟಿ ಮಾಯಿಸುವ ಕುರಿಗಳಿಗೆ 57,200 ರೂ ಹಾಗೂ ಬಯಲಿನಲ್ಲಿ ಮಾಯಿಸುವ ಮೇಕೆಗಳಿಗೆ ರೂ 28,200 ರೂಪಾಯಿ ಸಾಲ ನೀಡುತ್ತಾರೆ.

ಹಂದಿ ನಿರ್ವಹಣೆ :
8 ತಿಂಗಳ ಸಾಕಾಣಿಕೆ ಅವಧಿಗೆ 10 ಕೊಬ್ಬಿಸುವ ಹಂದಿಗಳ ಸಾಕಾಣಿಕೆ 60,000 ಸಾಲ ನೀಡಲಾಗುತ್ತದೆ.

ಕೋಳಿ ಸಾಕಾಣಿಕೆ :
ಮಾಂಸದ ಕೋಳಿ ಸಾಕಾಣಿಕೆಗೆ ತಲಾ ಒಂದು ಕೋಲಿಗೆ ೮೦ ರೂಪಾಯಿಯಂತೆ 1,000 ಕೋಳಿಗಳಿಗೆ ಗರಿಷ್ಟ 80,000 ರೂಪಾಯಿ ವರೆಗೆ ಸಾಲ ನೀಡುತ್ತಾರೆ.

ಮೊಟ್ಟೆ ಕೋಳಿ ಸಾಕಾಣಿಕೆಗೆ ತಲಾ ಒಂದು ಕೋಲಿಗೆ 180 ರೂ 1,000 ಕೋಲಿಗೆ ಗರಿಷ್ಟ 1,80,000 ರೂ ಯೋಜನೆಯಡಿ ಸಿಗುತ್ತದೆ.

ಮೊಲ ಸಾಕಾಣಿಕೆ :
50+10 ಮೊಲ ಸಾಕಾಣಿಕೆಗೆ ಗರಿಷ್ಟ 50,000 ರೂ ವರೆಗೆ ಸಾಲ ನೀಡುತ್ತಾರೆ.

 

ಬೇಕಾಗುವ ದಾಖಲಾತಿಗಳು:

⇔  ಭರ್ತಿ ಮಾಡಿದ ಅರ್ಜಿ ನಮೂನೆ 
⇔  ಬ್ಯಾಂಕ್ ಖಾತೆ ವಿವರ 
⇔  RTC 
⇔  ಆಧಾರ್ ಕಾರ್ಡ್ 
⇔  ಭಾವಚಿತ್ರ 

ಕೆಸಿಸಿ ಯೋಜನೆಯಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/03/2024

1 ಕಾಮೆಂಟ್‌ಗಳು

  1. ಕೇಂದ್ರ ಸರ್ಕಾರದ ನೀಡುವ ಸುಳ್ಳು ಭರವಸೆಯಿಂದ ಕೂಡಿರುವ ರೈತರಿಗೆ ಕಡ್ಡನೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಅಪ್ಪಟ ಸುಳ್ಳು ಬ್ಯಾಂಕಿಗೆ ಹೋಗಿ ಕೇಳಿದರೆ ಅದರ ಬಗ್ಗೆ ನಮಗೆ ಮಾಹಿತಿಯ ಇಲ್ಲ ಎಂದು ಹೇಳುತ್ತಾರೆ ಕೇಂದ್ರ ಸರ್ಕಾರ ಈಗಲಾದರೂ ಸುಳ್ಳು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವುದನ್ನು ನಿಲ್ಲಿಸಲಿ ನಂಜುಂಡಯ್ಯ ಜಿ ಕೊರಟಗೆರೆ ತಾಲೂಕ್ ಅಹಿಂದ ಅಧ್ಯಕ್ಷರು

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು