ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ..! ಆಸಕ್ತರು ಕೂಡಲೇ ಅರ್ಜಿ ಹಾಕಿ...


ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ..! ಆಸಕ್ತರು ಕೂಡಲೇ ಅರ್ಜಿ ಹಾಕಿ...




 

       ಈಗಾಗಲೇ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಕೊಡುತ್ತಿರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಈಗ ಕೆಲವು ಗ್ರಾಮಗಳಲ್ಲಿ ಪಡಿತರ ವಸ್ತುಗಳನ್ನ ನೀಡುವ ನ್ಯಾಯಬೆಲೆ ಅಂಗಡಿಗಳ ಕೊರತೆ ಉಂಟಾಗಿದ್ದು ಅಲ್ಲಿಯ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ವರದಿಯಾಗಿದೆ.
 
ಈ ಹಿನ್ನಲೆಯಲ್ಲಿ ಸರ್ಕಾರ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದ್ದು ನೀವು ಸ್ಥಳೀಯರಾಗಿದ್ದರೆ ಅರ್ಜಿ ಸಲ್ಲಿಸಿ ನ್ಯಾಯಬೆಲೆ ಅಂಗಡಿಯನ್ನು ಆರಂಭಿಸಿಬಹುದು. ಇದಕ್ಕೆ ಆರಂಭಿಕ ಬಂಡವಾಳವನ್ನು ನೀವು ಹೂಡಿಕೆ ಮಾಡಿದರು ಕೂಡ ಸರ್ಕಾರದಿಂದ ಎಲ್ಲಾ ರೀತಿಯ ಫೆಸಿಲಿಟಿ ಲಭ್ಯವಿದೆ.

ನ್ಯಾಯಬೆಲೆ ಅಂಗಡಿ ಆರಂಭಿಸಿದರೆ ಸಿಗುತ್ತೆ ಲಾಭ?

ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಪ್ರತಿ ಕೆಜಿ ದವಸ ಧಾನ್ಯ ಮಾರಾಟಕ್ಕೆ ಇಂತಿಷ್ಟು ಎಂದು ಕಮಿಷನ್ ನೀಡಲಾಗುತ್ತದೆ ಇನ್ನು ಕೆಳಗಡೆ ತಿಂಗಳ ಮೊತ್ತವನ್ನು ಪಾವತಿಸಲಾಗುತ್ತದೆ. ಇದರ ಜೊತೆಗೆ ಆ ಭಾಗದ ರೇಷನ್ ಕಾರ್ಡ್ ದಾರರ ಆಧಾರದ ಮೇಲೆ ಹೆಚ್ಚುವರಿ ಬೋನಸ್  ಕೂಡ ಸಿಗುತ್ತದೆ.

whatss


ಯಾರು ಅರ್ಜಿ ಸಲ್ಲಿಸಬಹುದು?

18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದಾಗಿದ್ದು, ನ್ಯಾಯಬೆಲೆ ಅಂಗಡಿ ಆರಂಭಿಸುವ ಅಭ್ಯರ್ಥಿಗೆ ಕಂಪ್ಯೂಟರ್ ಜ್ಞಾನ ಇರುವುದು ಕಡ್ಡಾಯವಾಗಿದೆ, ಅಪೀಡಿತರ ವಿತರಣೆ ಮಾಡಿದ ನಂತರ ಗಣಕೀಕರಣ ಮಾಡುವ ಅಗತ್ಯ ಇರುವುದರಿಂದ ಕಂಪ್ಯೂಟರ್ ಬಗ್ಗೆ ಚೆನ್ನಾಗಿ ತಿಳಿದಿರಬೇಕು.

ಸಂಘಸಂಸ್ಥೆಗಳಿಗೆ ಮೊದಲ ಆದ್ಯತೆ:

      ಪ್ರಾಥಮಿಕ ಕೃಷಿ ಸಹಕಾರಿ ಸಂಘ, ತೋಟಗಾರಿಕಾ  ಸಂಘ ಸಂಸ್ಥೆಗಳು, ಕಂಪನಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಮಾನ್ಯತೆ ಒಅಡೆದುಕೊಂಡಿರುವ ಸ್ವ-ಸಹಾಯ ಗುಂಪುಗಳು ಮೊದಲಾದ ಸಂಘ-ಸಂಸ್ಥೆಗಳಿಗೆ ನ್ಯಾಯಬೆಲೆ ಅಂಗಡಿ ಆರಂಭಿಸಲು ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ನ್ಯಾಯಬೆಲೆ ಅಂಗಡಿ ಆರಂಭಿಸಲು ಅರ್ಜಿ ಸಲ್ಲಿಸುವುದಕ್ಕೂ ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಆಗಿರುವ ahara.kar.nic.in ಭೇಟಿ ನೀಡಿ 

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿ ಸಲ್ಲಿಸಲು ನವೆಂಬರ್ ತಿಂಗಳು ಕೊನೆಯ ದಿನಾಂಕವಾಗಿದ್ದು ನೀವು ಸಂಬಂಧಪಟ್ಟ ಧೃಢೀಕರಣ ಪ್ರಮಾಣಪತ್ರಗಳನ್ನು ನಿಮ್ಮ ಹತ್ತಿರದ ಆಹಾರ ಇಲಾಖೆ ಕಚೇರಿಗೆ ಹೋಗಿ, ಪಡೆದು, ನಾಗರೀಕ ಸರಬರಾಜು ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಜಂಟಿ ನಿರ್ದೇಶಕರ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು