ಸರಕಾರದಿಂದ 4000 ಉಚಿತ ದ್ವಿಚಕ್ರ ವಾಹನ ವಿತರಣೆ : ಅರ್ಜಿ ಸಲ್ಲಿಕೆ ಹೇಗೆ ?

ಸರಕಾರದಿಂದ 4000  ಉಚಿತ ದ್ವಿಚಕ್ರ ವಾಹನ ವಿತರಣೆ : ಅರ್ಜಿ ಸಲ್ಲಿಕೆ ಹೇಗೆ ?



 

ಅರ್ಹ ಫಲಾನುಭವಿಗಳಿಗೆ 36 ಕೋಟಿ ರೂಪಾಯಿ ವೆಚ್ಚದಲ್ಲಿ 4000 ಯಂತ್ರ ಚಾಲಿತ ಉಚಿತ ದ್ವಿಚಕ್ರ ವಾಹನ ವಿತರಿಸಲು ರಾಜ್ಯ ಸರ್ಕಾರ ಆಯೋಜಿಸಿದೆ. ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ?

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆಯಿಂದ ಅಂಗವಿಕಲರಿಗೆ ನೀಡುವ ತ್ರಿಚಕ್ರ ವಾಹನಗಳ ವಿತರಣೆ ರಾಜ್ಯ ಸರ್ಕಾರ ಸನ್ನದ್ಧವಾಗಿದೆ. 2023 -24  ನೇ ಸಾಲಿಗೆ ಅಂಗವಿಕಲರಿಗೆ 36 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿಯಾಗಿ 4000 ಯಂತ್ರ ಚಾಲಿತ ದ್ವಿಚಕ್ರ ವಾಹನ ಖರೀದಿಸಿ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದ್ದು, ಶೀಘ್ರದಲ್ಲಿಯೇ ಅರ್ಹರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ.

ಡಿಸೇಂಬರ್ ೩ ರಂದು ' ವಿಶ್ವ ಅಂಗವಿಕಲರ ದಿನಾಚರಣೆ ' ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಂಗವಿಕಲರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಕೈಗೊಳ್ಳಲಾದ ಕಾರ್ಯಕ್ರಮಗಳ ವಿವರಣೆ ನೀಡಿದರು.

ಉಚಿತ ವಾಹನ ವಿತರಣೆ :

2011  ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಒಟ್ಟು 13,23,205 ಅಂಗವಿಕಲರಿದ್ದಾರೆ. ಈ ಸಂಖ್ಯೆ ಈಗ ಬಹಳಷ್ಟು ಹೆಚ್ಚಿದೆ. ಯಾರ ಅವಲಂಬನೆಯೂ ಇಲ್ಲದೆ ಸ್ವಾವಲಂಬಿ ಜೀವನ ನಡೆಸಲು ಉದ್ಯೋಗ ಮತ್ತು ವಾಹನ ನೆರವು ಇವರ ಬಹುಮುಖ್ಯ ಬೇಡಿಕೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ವಾಹನ ನೆರವಿಗೆ ಸಹಕಾರ ನೀಡುತ್ತಿದೆ.

ಈ ಮೊದಲು ಸೊಂಟದ ಮೇಲ್ಭಾಗ ಸಧೃಡವಾಗಿರುವ ಅಂಗವಿಕಲ ಫಲಾನುಭವಿಗಳಿಗೆ ಪ್ರತಿ ವರ್ಷ ಶೇ.50 ರಷ್ಟು ರಿಯಾಯತಿ ದರದಲ್ಲಿ ಸರ್ಕಾರದಿಂದ ತ್ರಿಚಕ್ರ ವಾಹನ ವಿತರಿಸಲಾಗುತ್ತಿತ್ತು. ಆದರೆ 2024 ರಿಂದ ರಾಜ್ಯದ ಅಂಗವಿಕಲರಿಗೆ ಉಚಿತವಾಗಿ ತ್ರಿಚಕ್ರ ವಾಹನ ವಿತರಿಸಲಾಗುತ್ತಿದೆ.

ಅಂಗವಿಕಲರ ಸ್ವಾವಲಂಬನೆಗೆ ಉತ್ತೇಜನ :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 27 ರಂದು ನಡೆಸಿದ 'ಜನಸ್ಪಂದನ' ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಅಂಗವಿಕಲರು ಅಹವಾರು ಸಲ್ಲಿಸಿದ್ದು, ಉದ್ಯೋಗ, ಶಿಕ್ಷಣ ಹಾಗೂ ವಾಹನ ಖರೀದಿಗೆ ನೆರವು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಗಳ ಕುರಿತಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಅಂಗವಿಕಲರ ಸ್ವಾವಲಂಬನೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಳ್ಳಲಾದ ಕಾರ್ಯಕ್ರಮಗಳ ವಿವರಣೆ ಈ ಕೆಳಗಿನಂತಿದೆ.

2023-24 ನೇ ಸಾಲಿನಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಏಳು ಜಿಲ್ಲೆಗಳಲ್ಲಿ 10 ವಸತಿ ಶಾಲೆಗಳನ್ನು ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

whatss

ಅಂಗವಿಕಲರ ಶೈಕ್ಷಣಿಕ, ವೈದ್ಯಕೀಯ, ಪುನರ್ವಸತಿ, ಹಿರಿಯ ನಾಗರೀಕ ಕ್ಷೇಮಾಭಿವೃದ್ಧಿಗೆ 284.27 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಮರಣ ಹೊಂದಿದ ಅಂಗವಿಕಲರಿಗೆ ನೀಡುವ ಪರಿಹಾರ ಮೊತ್ತವನ್ನು 50,000 ದಿಂದ 1 ಲಕ್ಷ ರುಪಾಯಿಗೆ ಏರಿಸಲಾಗಿದೆ.


ಆಯ್ಕೆ ಪ್ರಕ್ರಿಯೆ ಹೇಗೆ ?

ಅಂಗವಿಕಲರಿಗೆ ಉಚಿತ ವಾಹನ ವಿತರಣೆ ಸರ್ಕಾರ ಅರ್ಜಿ ಕರೆದು, ಪ್ರತಿ ಜಿಲ್ಲೆಯ ಅಂಗವಿಕಲರ ಸಂಖ್ಯೆಗೆ ಅನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸೊಂಟದ ಮೇಲ್ಭಾಗ ಸಧೃಡವಾಗಿರುವ ವಿಕಲಚೇತನರು ವಾಹನಕ್ಕಾಗಿ ಎಲ್ ಎಲ್ ಆರ್- ವಾಹನ ಕಲಿಕಾ ಅರ್ಹತಾ ಪಾತ್ರ ( drivinga qualification certificate ) ಜೊತೆಗೆ ಸೂಕ್ತ ದಾಖಲೆ ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ವಿವರ ಇಷ್ಟರಲ್ಲೇ ತಿಳಿಯಲಿದೆ.

ಅರ್ಜಿ ಪ್ರಕ್ರಿಯೆಯ ನಂತರ ಜಿಲ್ಲಾ ಮಟ್ಟದಲ್ಲಿ ಪಂಚಾಯತಿ ಸಿಇಒ ಅಧ್ಯಕ್ಷತೆಯ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಸರ್ಕಾರ ಚಕ್ರ ವಾಹನಗಳ ಪೂರೈಕೆಗಾಗಿ ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ಏಜೆನ್ಸಿಗಳ ಮೂಲಕ ಆಯಾ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ವಾಹನಗಳನ್ನು ಪೂರೈಕೆ ಮಾಡುತ್ತದೆ. ಅನಂತರ ಗ್ರಾಮ ಪಂಚಾಯತಿವಾರು ವಾಹನಗಳು ವಿತರಣೆಯಾಗಿ ಫಲಾನುಭವಿಗಳ ಕೈಸೇರುತ್ತದೆ.



 









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು