ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂಜಿನೀರಿಂಗ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಮೆಜಾನ್ ಕಡೆಯಿಂದ ರೂ 50,000 ವರೆಗೂ ಸ್ಕಾಲರ್ಷಿಪ್ ನೀಡಲಾಗುತ್ತಿದೆ. ಈ ಸ್ಕಾಲರ್ಷಿಪ್ ಪಡೆದುಕೊಂಡು ಶಿಕ್ಷಣ ಸಂಬಂಧಿತ ವೆಚ್ಚಗಳ ಹೊರೆಯನ್ನು ನಿವಾರಿಸಿಕೊಳ್ಳಬಹುದು.
ಫ್ಯೂಚರ್ ಎಂಜಿನಿಯರ್ ಸ್ಕಾಲರ್ಷಿಪ್
ಅಮೆಜಾನ್ ಮತ್ತು ಫೌಂಡೇಶನ್ ಫಾರ್ ಎಲೆಕ್ಷನ್ ಎಜ್ ಜಿ ಒ ಭಾರತದ ಎಂಜಿನಿಯರ್ ವಿದ್ಯಾರ್ಥಿಗಳಿಗೆ ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸ್ಕಾಲರ್ಷಿಪ್ ಘೋಷಿಸಿವೆ. ಈ ಕಾರ್ಯಕ್ರಮವು ಸೈನ್ಸ್ ಇಂಜಿನಿಯರಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಅನುಸರಿಸುತ್ತಿರುವ ಪ್ರಥಮ ವರ್ಷದ BE/B Tech ವಿದ್ಯಾರ್ಥಿಗಳಿಗೆ ಲಭ್ಯವಿದೆ. ಈ ಸ್ಕಾಲರ್ಷಿಪ್ ಮೂಲಕ ವಿದ್ಯಾರ್ಥಿಗಳು ವರ್ಷಕ್ಕೆ 50,000 ಮತ್ತು ಫಲಾನುಭವಿಗಳು ಅವರ ಮೊದಲ ವರ್ಷದ ಅಧ್ಯಯನದಲ್ಲಿ ಲ್ಯಾಪ್ ಟಾಪ್ ಅನ್ನು ಸಹ ಸ್ವೀಕರಿಸುತ್ತಾರೆ. ಇದಲ್ಲದೆ, ಕೌಶಲ್ಯ ನಿರ್ಮಾಣ ಮತ್ತು ನೆಟ್ ವರ್ಕಿಂಗ್ ಅವಕಾಶಗಳು ಹಾಗೂ ಅಮೆಜಾನ್ ಇಂಟರ್ನ್ ಶಿಪ್ ನಲ್ಲಿ ಭಾಗವಹಿಸಲು ಅವಕಾಶವನ್ನು ಸಹ ಕಲ್ಪಿಸುತ್ತದೆ.
ಪ್ರಯೋಜನಗಳು:
👉 ಪ್ರತಿ ವರ್ಷ 50,000 ನೀಡಲಾಗುತ್ತದೆ.
👉 ಮೊದಲ ವರ್ಷ ಲ್ಯಾಪ್ ಟಾಪ್ ನೀಡಲಾಗುತ್ತದೆ.
ಅರ್ಹತೆಗಳು:
⇒ ಭಾರತೀಯ ನಾಗರೀಕರಾಗಿರಬೇಕು.
⇒ 2023-24ರಲ್ಲಿ BE ಅಥವಾ ಬಿ ಟೆಕ್ ನಲ್ಲಿ ಪ್ರಥಮ ವರ್ಷದಲ್ಲಿ ಪ್ರವೇಶ ಪಡೆದಿರಬೇಕು.
⇒ ಇಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಸಂಬಂಧಿತ ವೃತ್ತಿಪರ ಕೋರ್ಸ್ ಅನ್ನು ಅಧ್ಯಯನ ಮಾಡುತ್ತಿರಬೇಕು.
⇒ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 30,000 ಮೀರಿರಬಾರದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
✅ ಆಧಾರ್ ಕಾರ್ಡ್
✅ ವಿದ್ಯಾರ್ಥಿ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
✅ ದ್ವಿತೀಯ ಪಿಯುಸಿ ಅಂಕಪಟ್ಟಿ
✅ ಬಿಇ ಬಿಟೆಕ್ ಕೋರ್ಸ್ ಗೆ ಪ್ರವೇಶ ಪಡೆದ ದಾಖಲೆ
✅ ಬ್ಯಾಂಕ್ ಪಾಸ್ ಬುಕ್
✅ ವಿದ್ಯಾರ್ಥಿಯ ಆದಾಯ ಪ್ರಮಾಣಪತ್ರ
✅ ಟ್ಯೂಷನ್ ಶುಲ್ಕ
✅ ಹಾಸ್ಟೆಲ್ ಶುಲ್ಕ ಇತರೆ ಶೈಕ್ಷಣಿಕ ವೆಚ್ಚಗಳ ರಶೀದಿ
✅ ಪೋಷಕರ ಅನುಮತಿ ಪ್ರಮಾಣಪತ್ರ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 2023 ......
Tags
Scholarship