ನಿಮ್ಮ ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ!! ಕೂಡಲೇ ಅರ್ಜಿ ಸಲ್ಲಿಸಿ ಫ್ರಾಂಚೈಸಿ ಪಡೆಯಿರಿ :

ನಿಮ್ಮ ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ!! ಕೂಡಲೇ ಅರ್ಜಿ ಸಲ್ಲಿಸಿ ಫ್ರಾಂಚೈಸಿ ಪಡೆಯಿರಿ :



 
ಇತ್ತೀಚಿಗಂತೂ ರಾಜ್ಯದಲ್ಲಿ ಗ್ರಾಮ ಒನ್ ಹಾಗೂ ಜನರ ನಡುವಿನ ಸಂಪರ್ಕ ಹೆಚ್ಚಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಜನ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ.

ಗ್ರಾಮ ಒನ್ ಏಕೆ ಬೇಕು?

ಸರ್ಕಾರದಿಂದ ಯಾವುದೇ ಹೊಸ ಯೋಜನೆ ಘೋಷಣೆ ಆದರೂ ಅದರ ಪ್ರಯೋಜನವನ್ನು ಗ್ರಾಮ ಒನ್ ನಲ್ಲಿಯೇ ಪಡೆದುಕೊಳ್ಳಬಹುದು. ಈಗಾಗಲೇ ಸೇವಾ ಸಿಂಧು ಪೋರ್ಟಲ್ ನಲ್ಲಿ ಇರುವ 80 ಇಲಾಖೆಗಳಿಂದ ನೀಡಲಾಗುತ್ತಿರುವ 798 ಯೋಜನೆಯ ಪ್ರಯೋಜನಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ಕೆಲಸವನ್ನು ಗ್ರಾಮ ಒನ್ ಕೇಂದ್ರಗಳು ಮಾಡುತ್ತಿವೆ.

             ಸರ್ಕಾರವು ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರಿಗೆ ಒಂದಲ್ಲ ಒಂದು ರೀತಿಯ ಸೇವೆಗಳನ್ನು ಒದಗಿಸುತ್ತಿದ್ದು, ಈಗ ಸೇವಾ ಕೇಂದ್ರ ಶುರು ಮಾಡುವುದಕ್ಕೆ ಗ್ರಾಮೀಣ ಭಾಗದಲ್ಲಿ ಯುವಕರಿಗೆ ಅವಕಾಶ ಮಾಡಿಕೊಡುತ್ತಿದೆ. ನಿರುದ್ಯೋಗಿ ಯುವಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಇಂದು ಸರ್ಕಾರದ ಯಾವುದೇ ಯೋಜನೆ ಜಾರಿಗೆ ಬಂದರೂ ಕೂಡ ಅದನ್ನ ಗ್ರಾಮೀಣ ಭಾಗದಲ್ಲಿ ಇರುವ ಜನರಿಗೆ ತಲುಪಿಸುವ ಕೆಲಸವನ್ನು ಗ್ರಾಮ ಒನ್ ಸೇವಾ ಕೇಂದ್ರಗಳು ಮಾಡುತ್ತವೆ.

ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯುವುದು ಅಗತ್ಯವಾಗಿದ್ದು ಈಗ ಸರ್ಕಾರ ರಾಜ್ಯದಲ್ಲಿ ವಾಸಿಸುವ ನಿರುದ್ಯೋಗಿ ಯುವಕರಿಗೆ ಈ ಕೇಂದ್ರ ಸ್ಥಾಪಿಸಲು ಅವಕಾಶ ಕಲ್ಪಿಸಿಕೊಡುತ್ತದೆ.

ಗ್ರಾಮ ಒನ್ ಕೇಂದ್ರ ಆರಂಭಿಸಲು ಯುವಕರಿಗೆ ಅವಕಾಶ :

ಗ್ರಾಮ ಒನ್ ಪ್ರಾಂಚೈಸಿಯನ್ನು ಕಲ್ಬುರ್ಗಿ ಮೈಸೂರು ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ನೀಡಲು ಸರ್ಕಾರ ಮುಂದಾಗಿದೆ. ಆಸಕ್ತ ಯುವಕರ ಅರ್ಜಿ ಸಲ್ಲಿಸಿ ಗ್ರಾಮ ಒನ್ ಪ್ರಾಂಚೈಸಿಯನ್ನು ಪಡೆದುಕೊಂಡು ಹಣ ಸಂಪಾದಿಸಬಹುದು.

ಗ್ರಾಮ ಒನ್ ಆರಂಭಿಸಲು ಅವಕಾಶವಿರುವ ಜಿಲ್ಲೆಗಳು:

ಮೈಸೂರು ವಿಭಾಗ :
ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ,  ಹಾಸನ, ಕೊಡಗು, ಮಂಡ್ಯ, ಉಡುಪಿ, ಮೈಸೂರು 

ಕಲಬುರಗಿ ವಿಭಾಗ :
ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯನಗರ, ಬಳ್ಳಾರಿ

whatss


ಅರ್ಜಿ ಸಲ್ಲಿಸಲು ಅರ್ಹತೆಗಳು:

⇨  ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
⇨  18 ವರ್ಷ ಮೀರಿದ ಯುವಕರು ಅರ್ಜಿ ಸಲ್ಲಿಸಬಹುದು.
⇨  10ನೇ ತರಗತಿ ಉತ್ತೀರ್ಣರಾಗಿರಬೇಕು. ಹೆಚ್ಚು ವಿದ್ಯಾಭ್ಯಾಸ ಹೊಂದಿರುವವರಿಗೆ ಮೊದಲ ಆದ್ಯತೆ 
⇨  ನೀಡಲಾಗುತ್ತದೆ.
⇨  ಇಂಗ್ಲಿಷ್ ಎರಡು ಭಾಷೆಯನ್ನು ಟೈಪ್ ಮಾಡಲು ಓದಲು ಬರೆಯಲು ತಿಳಿದಿರಬೇಕು.
⇨  ಕಂಪ್ಯೂಟರ್ ಜ್ಞಾನ ಇರಬೇಕು.
⇨  ಅರ್ಜಿ ಸಲ್ಲಿಸುವ ಅಭ್ಯರ್ಥಿ ಯಾವುದೇ ಕ್ರಿಮಿನಲ್ ಕೇಸ್ ಗಳನ್ನೂ ಹೊಂದಿಲ್ಲ ಎನ್ನುವುದಕ್ಕೆ ಪೊಲೀಸ್ ಧೃಢೀಕರಣ  ಪ್ರಮಾಣಪತ್ರ ಒದಗಿಸಬೇಕು.
⇨  ರಸ್ತೆ ಸಂಪರ್ಕ ವಿದ್ಯುತ್ ಮೊದಲಾದ ವ್ಯವಸ್ಥೆ ಇರುವ ಜಾಗ ಹೊಂದಿರಬೇಕು.

ಸೇವಾ ಕೇಂದ್ರ ತೆರೆಯಲು ಅವಶ್ಯವಿರುವ ವಸ್ತುಗಳು:

✔   ಕಂಪ್ಯೂಟರ್ ಸಿಸ್ಟಮ್ ಅಥವಾ ಲ್ಯಾಪ್ ಟಾಪ್ 
✔   ಫಿಂಗರ್ ಪ್ರಿಂಟ್ ಸ್ಕ್ಯಾನ್ ಮಾಡುವ ಸಾಧನ 
✔   ಪ್ರಿಂಟರ್ 
✔   ವೆಬ್ ಕ್ಯಾಮರಾ 

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

👉  ಅಭ್ಯರ್ಥಿಯ ಆಧಾರ್ ಕಾರ್ಡ್ 
👉  ಪ್ಯಾನ್ ಕಾರ್ಡ್ 
👉  ನಿವಾಸದ ಪ್ರೂಫ್ 
👉  ಸ್ವಯಂ ಘೋಷಣಾ ಪತ್ರ 
👉  ಬ್ಯಾಂಕ್ ಪಾಸ್ ಬುಕ್ ವಿವರ 
👉  ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ದಾಖಲೆಗಳು 

ಅರ್ಜಿ ಸಲ್ಲಿಸುವದು ಹೇಗೆ?

ಗ್ರಾಮ ಒನ್ ಪ್ರಾಂಚೈಸಿ  ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಬಯಸಿದರೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ದಾಖಲೆಗಳ ಸ್ಕ್ಯಾನ್ ಪ್ರತಿ ಅವಶ್ಯವಿರುತ್ತದೆ. ಅಹ್ಗೂ 100/- ಶುಲ್ಕ ಪಾವತಿಸಬೇಕು.
👇👇👇👇👇

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು