ಸ್ವಯಂ ಉದ್ಯೋಗ ನೇರಸಾಲ, ಸ್ವಾವಲಂಬಿ ಸಾರಥಿ ಯೋಜನೆ ಸೇರಿ ಇತರೆ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!!

ಸ್ವಯಂ ಉದ್ಯೋಗ ನೇರಸಾಲ, ಸ್ವಾವಲಂಬಿ ಸಾರಥಿ ಯೋಜನೆ ಸೇರಿ ಇತರೆ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವ  ದಿನಾಂಕ ವಿಸ್ತರಣೆ!!



 

          ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ನಿಗಮದ ಅರ್ಜಿಗಳನ್ನು ಸಲ್ಲಿಸಲು ಈ ಮೊದಲು ಇದ್ದ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದ್ದು ಆಸಕ್ತ ಅರ್ಜಿದಾರರು ಕೊನೆಯ ದಿನಾಂಕದ ಒಳಗಾಗಿ ಅಗತ್ಯ ದಾಖಲಾತಿಗಳ ಸಮೇತ ಅರ್ಜಿ ಸಲ್ಲಿಸಿ ಈ ಕೆಳಗಿನ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು.

ಯಾವೆಲ್ಲ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?

ಸ್ವಯಂ ಉದ್ಯೋಗ ನೇರಸಾಲ ಯೋಜನೆ:
1 ಲಕ್ಷಗಳ ಸಹಾಯಧನ:

ನಿರುದ್ಯೋಗ ಯುವಕ/ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಸದರಿ ಯೋಜನೆಯ 50% ರಷ್ಟು ಗುರಿಯಲ್ಲಿ ಹೈನುಗಾರಿಕೆ ಮತ್ತು ಉಳಿದ 50% ರಷ್ಟು ಗುರಿಯಲ್ಲಿ ತರಕಾರಿ, ಹಣ್ಣು ಹಂಪಲು, ಮೀನು-ಮಾಂಸ ಮಾರಾಟ,  ಕುರಿ/ಹಂದಿ/ಮೊಲ ಸಾಕಾಣಿಕೆ ಮುಂತಾದ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಮಳಿಗೆ/ ತಳ್ಳುಗಾಡಿ ದುಡಿಮೆ ಬಂಡವಾಳ ಸೇರಿದಂತೆ ಇತ್ಯಾದಿ ಉದ್ದೇಶದ ಸಔಲಭ್ಯಗಳಿಗಾಗಿ ಘಟಕ ವೆಚ್ಚ ರೂ 1 ಲಕ್ಷದಲ್ಲಿ ಶೇ 50% ರಷ್ಟು ಸಾಲ ಮತ್ತು ಶೇ 50% ರಷ್ಟು ಸಹಾಯಧನದ ಮೂಲಕ ಅನುಷ್ಠಾನಗೊಳಿಸುವುದು ಫಲಾನುಭವಿಗಳಿಗೆ 2 ಕಂತುಗಳಲ್ಲಿ ಪಾವತಿಸಲಾಗುವುದು. ಸಾಲವನ್ನು ನಿಗಮದ ಮೂಲಕ ಶೇ ೪ರಷ್ಟು ಬಡ್ಡಿ ದರದಲ್ಲಿ ವಿಧಿಸಲಾಗುತ್ತದೆ.

ಸ್ವಯಂ ಉದ್ಯೋಗ ನೇರಸಾಲ ಯೋಜನೆ:
2 ಲಕ್ಷಗಳ ಸಹಾಯಧನ:

ನಿರುದ್ಯೋಗಿ ಪುರುಷ ಮತ್ತು ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಟ 2 ಲಕ್ಷಗಳವರೆಗೆ ಸಹಾಯಧನವನ್ನು ಮಂಜೂರು ಮಾಡಿ ಬ್ಯಾಂಕ್ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಸಹಾಯದ ಗರಿಷ್ಟ ಮೊತ್ತವು ಘಟಕ ವೆಚ್ಚದ 70% ಆಗಿರುತ್ತದೆ, ಗರಿಷ್ಟ 2 ಲಕ್ಷಗಳು ಮತ್ತು ಘಟಕ ವೆಚ್ಚದ ಉಳಿದ ಭಾಗವನ್ನು ಸಾಲವಾಗಿ ಬ್ಯಾಂಕ್ ಗಳು ಮಂಜೂರು ಮಾಡುತ್ತವೆ.

ಸ್ವಾವಲಂಬಿ ಸಾರಥಿ ಯೋಜನೆ 
4 ಲಕ್ಷಗಳ ಸಹಾಯಧನ:
 ಯೋಜನೆಯಡಿ ಯುವಕ/ಯುವತಿಯರಿಗೆ ಸ್ವ-ಉದ್ಯೋಗವನ್ನು ಉತ್ತೇಜಿಸಲು ಸರಕು ಸಾಗಾಣಿಕೆ ವಾಹನ ಖರೀದಿ ಉದ್ದೇಶದ ಜೊತೆಗೆ ಸಾರಿಗೆ ವಾಹನ, ಟ್ರ್ಯಾಕ್ಟರ್ ಹಾಗೂ ಇತರೆ ವ್ಯಾಪಾರ ಉದ್ದೇಶಗಳಿಗೆ ಘಟಕ ವೆಚ್ಚದಲ್ಲಿ ಶೇ 70ರಷ್ಟು ಅಥವಾ ಗರಿಷ್ಟ ರೂ 4 ಲಕ್ಷಗಳ ಸಹಾಯಧನವಾಗಿದ್ದು,  ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.

ಪ್ರೇರಣಾ (ಮೈಕ್ರೋ ಕ್ರೆಡಿಟ್ ಫೈನಾನ್ಸ್ ) ಯೋಜನೆ:
ನಿಗಮವು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರು ರಚಿಸಿಕೊಂಡಿರುವ ನೋಂದಾಯಿತ ಸ್ವಸಹಾಯ ಸಂಘದ ಸದಸ್ಯರುಗಳ ಆರ್ಥಿಕ ಸ್ವಾವಲಂಬನೆ ಅಮ್ತ್ತು ಸಬಲೀಕರಣ ಉದ್ದೇಶಕ್ಕಾಗಿ ಪ್ರೇರಣಾ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
              ಗರಿಷ್ಟ 10 ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರನ್ನು ಹೊಂದಿರುವ ನೋಂದಾಯಿತ ಸ್ವಸಹಾಯ ಸಂಘಕ್ಕೆ ಪ್ರತಿ ಸದಸ್ಯರಿಗೆ ರೂ 15,000 ಸಹಾಯಧನ  ರೂ 10000 ಸಾಲ ಒಟ್ಟು ರೂ 25000 ಗಳಂತೆ ಒಂದು ಸಂಘಕ್ಕೆ ಗರಿಷ್ಟ 2.5 ಲಕ್ಷ ಅನುದಾನವನ್ನು ಒದಗಿಸಲಾಗುವುದು.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅಗತ್ಯ ದಾಖಲೆಗಳ ಸಮೇತ ಗ್ರಾಮೀಣ ಭಾಗದ ಅರ್ಜಿದಾರರು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಭೇಟಿ ಮಾಡಿ, ಅರ್ಜಿ ಸಲ್ಲಿಸಬಹುದು. ಇದಲ್ಲದೆ ಕರ್ನಾಕಟ ಒನ್ ಬೆಂಗಳೂರು ಒನ್, ಕಂಪ್ಯೂಟರ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸಬಹುದು.


whatss

ನಿಯಮಗಳು:

👉 ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಿರಬೇಕು.

👉 ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದವರಿಗೆ ರೂ 1.5 ಲಕ್ಷ ಹಾಗೂ ನಗರ ಪ್ರದೇಶದವರಿಗೆ ರೂ 2 ಲಕ್ಷಗಳ ಮಿತಿಯಲ್ಲಿರಬೇಕು.

👉 ಅರ್ಜಿದಾರರು 21 ವರ್ಷದಿಂದ 50 ವರ್ಷದವರೆಗಿನ ವಯೋಮಾನದವರಾಗಿರಬೇಕು.

👉 ಉದ್ದೇಶಿತ ವ್ಯಾಪಾರ/ ಚಟುವಟಿಕೆ ಆಧಾರದ ಮೇಲೆ ಸಾಲ/ ಸಹಾಯಧನ ಮಂಜೂರು ಮಾಡಲಾಗುವುದು. 

👉 ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲಾಗುತ್ತದೆ.

👉 ಸಹಾಯಧನ ಮತ್ತು ಸಾಲವನ್ನು ನೇರವಾಗಿ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಗೆ ದಾಖಲಾತಿಗಳು:

1}  ಅರ್ಜಿದಾರರ ಭಾವಚಿತ್ರ 
2}  ಜಾತಿ ಪ್ರಮಾಣಪತ್ರ (ಆರ್ ಡಿ ಸಂಖ್ಯೆ ಹೊಂದಿರಬೇಕು)
3}  ಆದಾಯ ಪತ್ರ (ಆರ್ ಡಿ ಸಂಖ್ಯೆ ಹೊಂದಿರಬೇಕು)
4}  ಆಧಾರ್ ಕಾರ್ಡ್ 
5}  ಬ್ಯಾಂಕ್ ಪಾಸ್ ಬುಕ್ 
6}  ಅಗತ್ಯವಿರುವ ಇತರೆ ದಾಖಲಾತಿಗಳು 
7}  ವಾಹನ ಪರವಾನಿಗೆ (ಸ್ವಾವಲಂಬಿ ಸಾರಥಿ ಯೋಜನೆ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಈ ಮೊದಲು ನವೆಂಬರ್ 30 ಕೊನೆಯ ಅವಕಾಶವಾಗಿತ್ತು, ಈಗ ಡಿಸೆಂಬರ್ 15 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟನೆ ಹೊರಡಿಸಲಾಗಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು