ಬರ ಪರಿಹಾರ ಕೊಡದ ಕೇಂದ್ರ ಸರ್ಕಾರಕ್ಕೆ ಸಿದ್ದು ಸಡ್ಡು
2000 ರೂ.ವರೆಗೆ ಬರ ಪರಿಹಾರ
ರೈತರಿಗೆ ಮೊದಲ ಕಂತಿನ ನೆರವು ಘೋಷಣೆ ! 3-4 ದಿನಗಳಲ್ಲಿ ಹಣ ವರ್ಗಾವಣೆ
v
ರಾಜ್ಯದ 223 ತಾಲೂಕುಗಳಲ್ಲಿ ಬರ ಘೋಷಣೆಯಾಗಿದ್ದು 48.19 ಲಕ್ಷ ಹೆಕ್ಟೇರ್ ಬೆಲೆ ನಷ್ಟ ಆಗಿದೆ. ಹೀಗಿದ್ದರೂ ಕೇಂದ್ರ ಸರ್ಕಾರವು ಬೆಲೆ ನಷ್ಟ ಪರಿಹಾರ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದಲೇ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ 2 ಸಾವಿರ ರೂ. ವರೆಗೆ ಪರಿಹಾರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ಬಗ್ಗೆ ಗುರುವಾರ ಸಂಜೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಜೊತೆ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪತ್ರ ಬರೆದರೂ ಸ್ಪಂದನೆ ಇಲ್ಲ
ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಸೆ.21 ರಂದು ಮೊದಲ ಮನವಿ ಸಲ್ಲಿಸಲಾಗಿತ್ತು.ಬಳಿಕ 3 ಬಾರಿ ಕಂದಾಯ ಸಚಿವರು ಪತ್ರ ಬರೆದಿದ್ದರೂ ಸ್ಪಂದಿಸಿಲ್ಲ. ಕಳೆದ ಶನಿವಾರ ನಾನೆ ಗೃಹ ಸಚಿವರಿಗೆ ಪತ್ರ ಬರೆದು ಭೇಟಿಗೆ ಅವಕಾಶ ಕೋರಿದ್ದರೂ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ನಾವು ಪರಿಪರಿಯಾಗಿ ಕೇಳಿದರೂ ಚರ್ಚೆಗೆ ಸಮಯ ಸಮಯ ನೀಡುತ್ತಿಲ್ಲ.
🌟 ರಾಜ್ಯದ 223 ತಾಲೂಕುಗಳಲ್ಲಿ ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿದೆ.
🌟ಮಳೆ ಕೊರತೆಯೊಂದಾಗಿ 48.19 ಲಕ್ಷ ಹೆಕ್ಟೇರ್ ಪ್ರದೇಶಗಲ್ಲಿ ಬೆಳೆ ನಷ್ಟವಾಗಿದೆ.
🌟ಎಷ್ಟೇ ಬೆಳೆ ನಷ್ಟ ಆಗಿದ್ದರೂ ಎರಡು ಹೆಕ್ಟೇರ್ ಗಷ್ಟೇ ಪರಿಹಾರ ಕೊಡಬಹುದು.
🌟ಎನ್ ಡಿ ಆರ್ ಎಫ್ ನಿಯಮ ಪ್ರಕಾರ 4663 ಕೋಟಿಯನ್ನು ಕೇಳಿದ್ದೇವೆ.
🌟ಕೇಂದ್ರಕ್ಕೆ ಕಾದರೆ ರೈತರಿಗೆ ಅನ್ಯಾಯ. ಹೀಗಾಗಿ ಹಣ ಬಿಡುಗಡೆ ಸಿಎಂ ಸಿದ್ದು.
Tags
Govt.scheme