ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ..ಕಂಪ್ಲೀಟ್ ಮಾಹಿತಿಯೊಂದಿಗೆ ಕೂಡಲೇ ಅರ್ಜಿ ಸಲ್ಲಿಸಿ:

ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ..ಕಂಪ್ಲೀಟ್ ಮಾಹಿತಿಯೊಂದಿಗೆ ಕೂಡಲೇ ಅರ್ಜಿ ಸಲ್ಲಿಸಿ:



           ನಮಸ್ಕಾರ ಸ್ನೇಹಿತರೆ... ಇವತ್ತಿನ ಲೇಖನದಲ್ಲಿ ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಸಲ್ಲಿಸಲು ಆಹ್ವಾನಿಸಿದ್ದು ಅವಶ್ಯಕ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

 
ಪ್ರಸ್ತುತ ಕರ್ನಾಟಕದಲ್ಲಿ 60ಕ್ಕೂ ಹೆಚ್ಚು ಕರ್ನಾಟಕ ಒನ್ ಸೇವಾ ಕೇಂದ್ರಗಳಿವೆ. ಹಲವು ಜಿಲ್ಲೆಗಳಲ್ಲಿ ಹೊಸ ಕೇಂದ್ರಗಳನ್ನು ತೆರೆಯಲು ಆಗಾಗ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.ಬೆಂಗಳೂರು ನಗರದಲ್ಲಿ ಒಂದೇ ಸೂರಿನಡಿ ಹಲವು ನಾಗರಿಕ ಸೇವೆಗಳನ್ನು ನೀಡಲು 'ಬೆಂಗಳೂರು ಒನ್' ಕೇಂದ್ರಗಳನ್ನು ತೆರೆಯಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಕರ್ನಾಟಕ ಸರ್ಕಾರ 'ಕರ್ನಾಟಕ ಒನ್' ಸೇವಾಕೇಂದ್ರವನ್ನು ಆರಂಭಿಸಿದೆ.

2 ಕೇಂದ್ರಗಳಿಗೆ ಅರ್ಜಿ ಆಹ್ವಾನ:

   ಅಣ್ಣಿಗೇರಿ ಪಟ್ಟಣದಲ್ಲಿ ಎರಡು ಕರ್ನಾಟಕ ಒನ್ ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಇ.ಡಿ.ಸಿ.ಎಸ್ ನಿರ್ದೇಶನಾಲಯ, ಇ-ಆಡಳಿತ ಇಲಾಖೆಯಿಂದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಉಳಿದಿರುವ ಕರ್ನಾಟಕ ಒನ್ 2 ಕೇಂದ್ರಗಳಿಗೆ ಪ್ರಾಂಜೇಸಿಗಾಗಿ ಫ್ರಾಂಚೈಸಿಗಳನ್ನು ಆಯ್ಕೆ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.


whatss

 

ಅರ್ಹತೆಗಳು:

✅  ಅರ್ಜಿ ಸಲ್ಲಿಸುವವರು ಪಿಯುಸಿ, ಐ.ಟಿ.ಐ, ಡಿಪ್ಲೊಮಾ, ಪದವಿ, ಸ್ನಾತ್ತಕೋತ್ತರ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 

✅ ಕರ್ನಾಟಕ ಒನ್ ಕೇಂದ್ರ ಸ್ಥಾಪಿಸಲು ಕನಿಷ್ಠ 100 ಚದರ ಅಡಿ ವಿಸ್ತೀರ್ಣವುಳ್ಳ ಸುಸಜ್ಜಿತ ಕಟ್ಟಡ, ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್, ಬಯೋಮೆಟ್ರಿಕ್ ಡಿವೈಸ್ ಮತ್ತು 8 ಗಂಟೆಗಳ ವಿದ್ಯುತ್ ಪರ್ಯಾಯ ವ್ಯವಸ್ಥೆ ಹೊಂದಿರಬೇಕು.

✅ ಈಗಾಗಲೇ ಸರಕಾರದಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಒನ್ ಕೇಂದ್ರದಿಂದ ಅಂತರ 2 ಕಿ. ಮೀ. ಇರಬೇಕು ಹಾಗೂ ಅರ್ಜಿದಾರರು ಕೇಂದ್ರವನ್ನು ಸ್ಥಾಪಿಸಲು ಒಂದಕ್ಕಿಂತ ಹೆಚ್ಚು ಸ್ಥಳಗಳನ್ನು ಗುರುತಿಸಿದಲ್ಲಿ ಜಿಲ್ಲಾ ಕಾರ್ಯಪಡೆಯ ನಿರ್ಣಯ ಅಂತಿಮ ಇರುವ ಮಾನದಂಡಗಳಿಗೆ ಬದ್ಧರಾಗಿರಬೇಕು.

ಆಸಕ್ತರು https://www.karnatakaone.gov.in/Public/FranchiseeTerms ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಕೆ ಮಾಡಲು ಜನವರಿ 2, 2024 ಕೊನೆಯ ದಿನವಾಗಿದೆ.

ಈಗ ಕರ್ನಾಟಕ ಒನ್ ಕೇಂದ್ರದ ಮೂಲಕ ಹಲವು ಸೇವೆಗಳನ್ನು ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ಬಳಿಕ ಫಲಾನುಭವಿಗಳು ಈ ಕೇಂದ್ರದ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಸಹ ಅವಕಾಶ ನೀಡಲಾಗಿದೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು