ಗೃಹಲಕ್ಷ್ಮಿ ಯೋಜನೆಯ ಹಣವನ್ನು ಎಲ್ಲಾ ಫಲಾನುಭವಿ ಗೃಹಿಣಿಯರ ಖಾತೆಗೆ ಜಮಾ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಒಂದು ವೇಳೆ ಮಹಿಳೆಯ ಖಾತೆಗೆ ಜಮಾ ಮಾಡಲು ಸಾಧ್ಯವಾಗದೆ ಇದ್ದಾರೆ ಆ ಕುಟುಂಬದ ಪುರುಷ ಸದಸ್ಯನ ಖಾತೆಗೆ ವರ್ಗಾವಣೆ ಮಾಡಲು ಹೊಸ ಕ್ರಮ ಕೈಗೊಳ್ಳುವುದಾಗಿದೆ.
ಇತ್ತೀಚಿಗೆ ಸಿಎಂ ಸಿದ್ಧರಾಮಯ್ಯನವರು ಸಂಪುಟ ಸಚಿವ ಸಭೆ ನಡೆಸಿದ್ದಾರೆ, ಇದರಲ್ಲಿ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳ ಖಾತೆಗೆ ಹಣ ಡಿಬಿಟಿ ಮಾಡುವ ಕುರಿತು ಸಾಕಷ್ಟು ಚರ್ಚೆ ನಡೆಸಲಾಗಿದೆ.
ಅಲ್ಲದೆ ಇದುವರೆಗೆ ಮಹಿಳೆಯರ ಖಾತೆಗೆ ಯಾಕೆ ಹಣ ವರ್ಗಾವಣೆ ಆಗುತ್ತಿಲ್ಲ ಎನ್ನುವ ಬಗ್ಗೆ ತಲೆಕೆಡಿಸಿಕೊಂಡಿರುವ ಸರ್ಕಾರ ಕೊನೆಗೂ ಒಂದು ಪರಿಹಾರವನ್ನು ಸೂಚಿಸಿದೆ ಎಂದು ಹೇಳಬಹುದು.
ಸಂಪುಟ ಸಭೆಯಲ್ಲಿ ನಡೆದ ವಿಚಾರದ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಅದಾಲತ್ ಆರಂಭವಾಗಿದ್ದೇ ನಿಮಗಾಗಿ!!
ಇದುವರೆಗೆ ಯಾರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲವೋ ಇದಕ್ಕೆ ಕರಣ ಹಲವು ಮಹಿಳೆಯರ, ಖಾತೆಯಲ್ಲಿ ಸಮಸ್ಯೆ ಇದೆ, ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ಜೊತೆಗೆ ಲಿಂಕ್ ಆಗುತ್ತಿಲ್ಲ. ಸರ್ಕಾರದಿಂದ ಹಣ ಜಮಾ ಆಗಿದ್ದರು ಕೂಡ ಇಂಥವರ ಖಾತೆಗೆ ಮಾತ್ರ ಹಣ ಬಂದು ತಲುಪುತ್ತಿಲ್ಲ.
ಸಮಸ್ಯೆ ಪರಿಹರಿಸುವುದಕ್ಕಾಗಿ ಈಗ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಒಂದು ವೇಳೆ ಕುಟುಂಬದ ಮೊದಲ ಮಹಿಳಾ ಸದಸ್ಯ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಎರಡನೇ ಹಿರಿಯ ಸದಸ್ಯ ಖಾತೆಗೆ ಹಣ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.
ಏಕಾಏಕಿ ಪುರುಷ ಸದಸ್ಯರ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಕುಟುಂಬದಲ್ಲಿ ಮತ್ತೊಬ್ಬ ಮಹಿಳೆ ಇದ್ದಾರೆ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಇಲ್ಲದೆ ಇದ್ದಲ್ಲಿ ಆಗ ಮನೆಯ ಯಜಮಾನ ಅಥವಾ ಮನೆಯ ಹಿರಿಯ ಪುರುಷ ಸದಸ್ಯರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
ಗ್ರಾಮ ಪಂಚಾಯತ್ ಸಿಬ್ಬಂದಿಯ ಭೇಟಿ !
ಇದೆ ಸಂಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಮಹಿಳೆಯ ಖಾತೆಗೆ ಸಂದಾಯವಾಗಿಲ್ಲವೋ ಅಂತಹ ಮಹಿಳೆ ನೇರವಾಗಿ ಗ್ರಾಮ ಪಂಚಾಯತಿಗೆ ಹೋಗಿ ಗೃಹಲಕ್ಷ್ಮಿ ಅದಾಲತ್ ಅಡಿಯಲ್ಲಿ ದೂರು ಸಲ್ಲಿಸಬಹುದು.
Tags
Govt.scheme

WhatsApp Group
