2023-24 ನೇ ಸಾಲಿನ ಕರ್ನಾಟಕ B.Ed ಪ್ರವೇಶಾತಿ ಅರ್ಜಿಗೆ ಮತ್ತೊಮ್ಮೆ ಅವಕಾಶ .......

2023-24 ನೇ ಸಾಲಿನ ಕರ್ನಾಟಕ B.Ed ಪ್ರವೇಶಾತಿ ಅರ್ಜಿಗೆ ಮತ್ತೊಮ್ಮೆ ಅವಕಾಶ .....



 

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ಘಟಕವು ಪ್ರಸಕ್ತ ಬಿ.ಎಡ್ ಶಿಕ್ಷಣ ಪ್ರವೇಶಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿದೆ.

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2023-24ನೇ ಸಾಲಿಗೆ 2 ವರ್ಷದ ಬಿ.ಇಡಿ ಶಿಕ್ಷಣ ಪ್ರವೇಶಾತಿಗೆ ಸಂಬಂಧ, ಆನ್ ಲೈನ್ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಡಿಸೇಂಬರ್ 11 ರವರೆಗೆ ಅರ್ಜಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ನವೆಂಬರ್ 29 ರವರೆಗೆ ಮಾತ್ರ ಅರ್ಜಿಗೆ ಅವಕಾಶ ನೀಡಲಾಗಿತ್ತು. ಆದರೆ ಅಭ್ಯರ್ಥಿಗಳ ಮನವಿ ಮೇರೆಗೆ ಅರ್ಜಿಗೆ ಡಿಸೇಂಬರ್ 11 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ಈ ಕೋರ್ಸ್ ಪಡೆಯಲು ಅರ್ಹತೆ ಇದ್ದು, ಇನ್ನು ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮತ್ತೆ ಕೊನೆ ಕ್ಷಣದವರೆಗೆ ಕಾಯದೆ ಬೇಗ ಬೇಗ ಅರ್ಜಿ ಸಲ್ಲಿಸಿ.

ಬಿ.ಇಡಿ ಕೋರ್ಸಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ 

ಅರ್ಜಿ ಸಲ್ಲಿಸುವವರು ಕನಿಷ್ಠ 50% ಅಂಕಗಳೊಂದಿಗೆ ಪದವಿ ಅಥವಾ 50% ಅಂಕಗಳೊಂದಿಗೆ ವಿಜ್ಞಾನ / ಸಾಮಾಜಿಕ ವಿಜ್ಞಾನಗಳು/ ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು.
ಕನಿಷ್ಠ 55% ರಷ್ಟು ಅಂಕಗಳೊಂದಿಗೆ ಬಿಇ ಪದವಿ/ ವಿಜ್ಞಾನ ಮತ್ತು ಗಣಿತಶಾಸ್ತ್ರದಲ್ಲಿ ಪರಿಣಿತ ಪಡೆದಿರುವ ತಂತ್ರಜ್ಞಾನ ಅಥವಾ ಇನ್ಯಾವುದೇ ತತ್ಸಮಾನ ವಿದ್ಯಾರ್ಹತೆ ಪಾಸ್.

ಆನ್ ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 31-10-2023
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-12-2023

ಪ್ರವೇಶಾತಿ ಆಯ್ಕೆ ವಿಧಾನ :

ಸ್ವೀಕೃತವಾದ ಅರ್ಜಿಗಳಲ್ಲಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಅರ್ಹತಾ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಪದವಿ ಶಿಕ್ಷಣದ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಿ, ಕೌನ್ಸಿಲಿಂಗ್ ನಡೆಸಿ, ಬಿ.ಇಡಿ ಶಿಕ್ಷಣಕ್ಕೆ ಸೀಟು ಹಂಚಿಕೆ ಮಾಡಲಾಗುತ್ತದೆ.

whatss

ಅರ್ಜಿ ಶುಲ್ಕ ಮಾಹಿತಿ :

ಜೆನೆರಲ್ ಕೆಟಗೆರಿ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300
ಎಸ್ ಸಿ / ಎಸ್ ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.100
ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯತಿ ನೀಡಲಾಗಿದೆ.

ಬಿ.ಇಡಿ ಅಡ್ಮಿಷನ್ ಶುಲ್ಕ ಮಾಹಿತಿಗಳು :

ಕಲಾ ವಿಭಾಗದ ಪ್ರವೇಶಾತಿಗೆ ಶುಲ್ಕದ ವಿವರ ಸರ್ಕಾರೀ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ರೂ.5025
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ರೂ.6025
ಅನುದಾನಿತ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ರೂ.10,025.

ವಿಜ್ಞಾನ ವಿಭಾಗದಲ್ಲಿ ಬಿ.ಇಡಿ ಕೋರ್ಸ್ ಅಡ್ಮಿಷನ್ ಗೆ ಶುಲ್ಕ ಮಾಹಿತಿಗಳು :

ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ರೂ.5175
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ರೂ.6175
ಅನುದಾನಿತ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ರೂ.10,175

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ವಿಳಾಸ :
👇👇👇👇👇
https://schooleducation.karnataka.gov.in/




 








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು