ಗೃಹಲಕ್ಷ್ಮಿ DBT ಸ್ಟೇಟಸ್ ಚೆಕ್ ಮಾಡಿ, 2000/- ರೂ. ಬಂತಾ ನೋಡಿ... Gruhalakshmi DBT Status Check Online2023||
ನಮಸ್ಕಾರ ಸ್ನೇಹಿತರೆ.......
ಸರ್ಕಾರದ ಪಂಚ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ 2000 ರೂ ಹಣ ನಿಮಗೆ ಬಂದಿದೆಯಾ? ನೀವು DBT ಸ್ಟೇಟಸ್ ಚೆಕ್ ಮಾಡಬೇಕಾ? ಹಾಗಿದ್ದರೆ ಈ ಲೇಖನವನ್ನು ಓದಿ ಸರಳ ವಿಧಾನ ತಿಳಿಸಲಾಗಿದೆ.
ಗೃಹಲಕ್ಷ್ಮಿ DBT ಸ್ಟೇಟಸ್ ಚೆಕ್ :
ಗೃಹಲಕ್ಷ್ಮಿ ಯೋಜನೆಯ 2000 ಹಣ ವರ್ಗಾವಣೆ ಆಗಿರುವ ಮಾಹಿತಿಯನ್ನು ಕರ್ನಾಟಕ ಸರ್ಕಾರದ ಅಧಿಕೃತ DBT Karnataka App ಮೂಲಕ ಈ ಕೆಳಗೆ ನೀಡಲಾಗಿರುವ ವಿಧಾನವನ್ನು ಅನುಸರಿಸಿ ಚೆಕ್ ಮಾಡಿ.
ಸ್ಟೇಟಸ್ ಚೆಕ್ ಮಾಡುವ ವಿಧಾನ :
1. ಮೊದಲನೆಯದಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ DBT Karnataka ಅಧಿಕೃತ App ಡೌನ್ಲೋಡ್ ಮಾಡಿಕೊಳ್ಳಿ.
2. App ಓಪನ್ ಮಾಡಿ, ಅಲ್ಲಿ Enter Aadhaar Number ಎಂಬಲ್ಲಿ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ. GET OTP ಎಂಬುದರ ಮೇಲೆ ಕ್ಲಿಕ್ ಮಾಡಿ.
3. ಫಲಾನುಭವಿಯ ಆಧಾರ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ OTP ಬರುತ್ತದೆ. Enter OTP ಎಂದಿರುವಲ್ಲಿ ಆರು ಸಂಖ್ಯೆಗಳ OTP ಎಂಟರ್ ಮಾಡಿ. verify OTP ಬಟನ್ ಮೇಲೆ ಕ್ಲಿಕ್ ಮಾಡಿ.
4. ಫಲಾನುಭವಿಯ ವೈಯಕ್ತಿಕ ವಿವರ ನಿಮಮ್ ಮುಂದೆ ಕಾಣುತ್ತದೆ. ಅಲ್ಲಿ ಮೊಬೈಲ್ ನಂಬರ್ ಎಂಟರ್ ಮಾಡಲು ತಿಳಿಸಲಾಗಿರುತ್ತದೆ. ಆಧಾರ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ನಮೂದಿಸಿ. ಓಕೆ ಬಟನ್ ಮೇಲೆ ಕ್ಲಿಕ್ ಮಾಡಿ.
5. ನಂತರ Create mPIN ಎಂಟರ್ ಮಾಡಿ. Submit ಬಟನ್ ಮೇಲೆ ಕ್ಲಿಕ್ ಮಾಡಿ.
6. ನಂತರ ಅಲ್ಲಿ Select Beneficiary ಎಂದು ಬರುತ್ತದೆ. ನೀವು add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿ.
7. ಫಲಾನುಭವಿಯನ್ನು ಆಯ್ಕೆ ಮಾಡಿದ ನಂತರ ನೀವು Create ಮಾಡಿದ mPIN ಅನ್ನು ಎಂಟರ್ ಮಾಡಿ. LOGIN ಬಟನ್ ಮೇಲೆ ಕ್ಲಿಕ್ ಮಾಡಿ.
8. ಮೊದಲನೆಯ ಆಯ್ಕೆ Payment Status ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
9. ಅಲ್ಲಿ ನಿಮ್ಮ ಮುಂದೆ Gruhalakshmi DBT Status Check ಮಾಡುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
9. ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂ. ಜಮಾ ಆಗಿರುವ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ, ಯಾವ ದಿನಾಂಕದಂದು ಹಣ ವರ್ಗಾವಣೆ ಆಗಿರುತ್ತದೆ ಎಂಬ ವಿವರಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದು.
Tags
Govt.scheme