Z ಸ್ಕಾಲರ್ಶಿಪ್ : ನೇರವಾಗಿ ಎಲ್ಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 50,000 ಜಮಾ ...!
ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಜೇಡ್ ಸ್ಕಾಲರ್ಶಿಪ್ ಬಗ್ಗೆ ತಿಳಿಸಲಾಗುತ್ತಿದೆ. ಜೇಡ್ ಎಸ್ ಅಸೋಷಿಯೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಜೇಡ್ ಸ್ಕಾಲರ್ಸ್ ಪ್ರೋಗ್ರಾಮ್ 2023-24ನೇ ಸಾಲಿನಲ್ಲಿ ನೀಡುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಅದರಂತೆ ಈ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಬೇಕಾದರೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲಾ ದಾಖಲೆಗಳು ಬೇಕು ಹಾಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ವಿದ್ಯಾರ್ಥಿವೇತನದ ಮೊತ್ತ :
ಪದವಿ ಪೂರ್ವ ಡಿಗ್ರಿ ಅಂತಹ ಕೋರ್ಸ್ ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ಓದುತ್ತಿದ್ದರೆ, ವರ್ಷಕ್ಕೊಮ್ಮೆ 20,000 ಗಳನ್ನು ಈ ವಿದ್ಯಾರ್ಥಿವೇತನದ ಅಡಿಯಲ್ಲಿ ಜಮಾ ಮಾಡಲಾಗುತ್ತದೆ. ವೃತ್ತಿಪರ ಕೋರ್ಸ್ ಗಳನ್ನು ಮಾಡುತ್ತಿದ್ದರೆ, ಸುಮಾರು 50,000 ರೂಪಾಯಿಗಳವರೆಗೆ ಹಣವನ್ನು ಪಡೆಯಬಹುದಾಗಿದೆ. ಡಿಸೇಂಬರ್ 15 ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಹೀಗೆ ಜೇಡ್ ಸ್ಕಾಲರ್ಶಿಪ್ ನ ವತಿಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಅಹ್ವಾನ ಮಾಡಲಾಗಿದ್ದು, ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಬಹುದಾಗಿದೆ.
ಜೇಡ್ ಸ್ಕಾಲರ್ಶಿಪ್ ವಿದ್ಯಾರ್ಥಿವೇತನ :
ಇದರ ಅಡಿಯಲ್ಲಿ ವರ್ಷಕ್ಕೊಮ್ಮೆ 20,000 ಗಳ ಹಣವನ್ನು ಡಿಗ್ರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಜೇಡ್ ಎಸ್ ಅಸೋಷಿಯೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅಹ್ವಾನ ಮಾಡಲಾಗಿದ್ದು, ಡಿಗ್ರಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆಗಳು :
ನೀವೇನಾದರೂ ಬೆಂಗಳೂರು, ಪುಣೆ, ದೆಹಲಿ ಹಾಗೂ ಚೆನ್ನೈ ನಲ್ಲಿರುವ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ. ಹಾಗೂ ಬಿಕಾಂ, ಬಿಎಸ್ಸಿ, ಬಿಎ ಕೋರ್ಸ್ ಗಳನ್ನು ಮೊದಲನೇ ವರ್ಷದಲ್ಲಿ ಓದುತ್ತಿದ್ದರೆ ಈ ವಿದ್ಯಾರ್ಥಿವೇತನಕ್ಕೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸುಮಾರು 20 ಸಾವಿರ ರೂಪಾಯಿಗಳವರೆಗೆ ವರ್ಷಕ್ಕೆ ಒಂದು ಬಾರಿ ಈ ವಿದ್ಯಾರ್ಥಿವೇತನದಿಂದ ಹಣವನ್ನು ನೀಡಲಾಗುತ್ತದೆ. 12 ನೇ ತರಗತಿಯಲ್ಲಿ 60 % ರಷ್ಟು ಕನಿಷ್ಠ ಫಲಿತಾಂಶವನ್ನು ಹೊಂದಿದ್ದರೆ, ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ ೮ ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
Tags
Scholarship