ಗೃಹಲಕ್ಷ್ಮಿ ಯೋಜನೆ :
ಹೊಸ ಉಪಕ್ರಮ ಕೈಗೊಂಡ ಸರ್ಕಾರ :
ಗೃಹಲಕ್ಷ್ಮಿ ಯೋಜನೆ 100% ಸಕ್ಸಸ್ ಆಗಬೇಕು ಎನ್ನುವುದು ಸರ್ಕಾರದ ಉದ್ದೇಶ, ಅತಿ ಹೆಚ್ಚು ಅನುದಾನ ಪಡೆದುಕೊಂಡು ಬಿಡುಗಡೆ ಆಗಿರುವ ಯೋಜನೆ ಬಹುತೇಕ ಫಲಾನುಭವಿಗಳಿಗೆ ತಲುಪಿದ್ದರು ಕೂಡ ಅರ್ಜಿ ಸಲ್ಲಿಸಿರುವ ಇನ್ನು ಲಕ್ಷಾಂತರ ಮಹಿಳೆಯರು ಹಣ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಸರ್ಕಾರದ ಅಂಕಿ ಅಂಶಗಳ ಪ್ರಕಾರ 5,96,268 ಮಹಿಳೆಯರ ಖಾತೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿಲ್ಲ. 2,17,536 ಫಲಾನುಭವಿಗಳ ಬ್ಯಾಂಕ್ ಖಾತೆ ಆಧಾರ್ ನೊಂದಿಗೆ ಸದ್ಯ ಲಿಂಕ್ ಆಗಿದೆ. ಹಾಗಾಗಿ ಅಂಥವರಿಗೆ ಹಣ ಜಮಾ ಆಗಿದೆ.
ಉಳಿದ ಮಹಿಳೆಯರಿಗೆ ಸದ್ಯದಲ್ಲಿ ಆಹಾರ ಇಲಾಖೆ ಸೂಚಿಸಿರುವಂತೆ ಅಂಗನವಾಡಿ ಸಹಾಯಕಿಯರು ಅಥವಾ ಗ್ರಾಮ ಪಂಚಾಯತ್ ಸಿಬ್ಬಂಧಿಗಳು ಮಹಿಳೆಯರ ಬ್ಯಾಂಕ್ ಖಾತೆಯೆಲ್ಲಿ ಇರುವ ಸಮಸ್ಯೆಗಳನ್ನು ತಾವೇ ಸ್ವತಃ ಪರಿಹರಿಸಿ ಅಂತಹ ಮಹಿಳೆಯರ ಖಾತೆಗೂ ಹಣ ಜಮಾ ಆಗುವಂತೆ ಮಾಡಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಜಿಲ್ಲೆಗಳಲ್ಲಿ 4ನೇ ಕಂತಿನ ಹಣ ಜಮಾ!!
ಕೆಲವರು ಮೂರೂ ಕಂತಿನ ಹಣ ಪಡೆದಿದ್ದರೆ, ಇನ್ನು ಕೆಲವರು ಒಂದೇ ಒಂದು ಕಂತಿನ ಹಣ ಪಡೆದಿಲ್ಲ. ಇದುವರೆಗೆ ಯಾರಿಗೆ ಹಣ ಬಂದಿಲ್ಲವೋ ಎಲ್ಲರಿಗೂ ಸಮಸ್ಯೆಗಳನ್ನು ಬಗೆಹರಿಸಿ ಡಿಸೆಂಬರ್ ಒಳಗಾಗಿ 6 ಶಿವರ ಜಮಾ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದಕ್ಕೆ ಸಾಕ್ಷಿಯಾಗಿ ಈಗಾಗಲೇ ಕೆಲವರ ಖಾತೆಗೆ ಹಣ ಸಂದಾಯವಾಗಿದೆ.
ಗೃಹಲಕ್ಷ್ಮಿ 4ನೇ ಕಂತಿನ ಹಣ ಜಮಾ ಆಗಿದ್ದು ಮೊದಲ ಹಂತದಲ್ಲಿ 15 ಜಿಲ್ಲೆಗಳಿಗೆ ಹಣ ಬಿಡುಗಡೆ ಆಗಿದೆ ಇನ್ನು ಡಿಸೆಂಬರ್ 20ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರ ಖಾತೆಗೂ ಕೂಡ ನಾಲ್ಕನೇ ಕಂತಿನ ಹಣ ಜಮಾ ಆಗುವ ಸಾಧ್ಯತೆ ಇದೆ.
4 ನೇ ಕಂತು ಜಮೆ ಆಗಿರುವ ಜಿಲ್ಲೆಗಳು
💨 ಬಾಗಲಕೋಟೆ
💨 ಚಿತ್ರದುರ್ಗ
💨 ಹಾಸನ
💨 ಬಿಜಾಪುರ
💨 ಕೊಳ್ಳಿರ
💨 ಬೆಳಗಾವಿ
💨 ಉತ್ತರ ಕನ್ನಡ
💨 ದಾವಣಗೆರೆ
💨 ಬೆಂಗಳೂರು
💨 ಮಂಡ್ಯ
💨 ಗದಗ
💨 ರಾಯಚೂರು
💨 ಕಲಬುರಗಿ
💨 ಮೈಸೂರು
💨 ಧಾರವಾಡ
Tags
Govt.scheme

WhatsApp Group