ನಮಸ್ಕಾರ ಸ್ನೇಹಿತರೆ...
ನೀವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿದ್ದಲ್ಲಿ ಸರ್ಕಾರದಿಂದ ಇಲ್ಲಿದೆ ನಿಮಗೆ ಗುಡ್ ನ್ಯೂಸ್... ಕಾರ್ಮಿಕ ಇಲಾಖೆಯಿಂದ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿರುತ್ತದೆ. ಅವುಗಳನ್ನು ಪಡೆಯಲು ಕಾರ್ಮಿಕರು ನೋಂದಣಿ ಕಡ್ಡಾಯವಾಗಿರುತ್ತದೆ.
ಕರ್ನಾಟಕ ಸರ್ಕಾರ ಕರ್ನಾಕಟ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಅನೇಕ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಅದಕ್ಕಾಗಿ ಕಡ್ಡಾಯವಾಗಿ ಕಾರ್ಮಿಕರು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ.
ನೋಂದಣಿ ಪೂರ್ವದಲ್ಲಿ 12 ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಳಸ ನಿರ್ವಹಿಸಿರಬೇಕು..
ವಯೋಮಿತಿ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಲು ವಯೋಮಿತಿಯು 18 ರಿಂದ 60 ವರ್ಷದೊಳಗಿರಬೇಕು.
ಲೇಬರ್ ಕಾರ್ಡ್ ಹೊಂದಿದವರಿಗೆ ಸಿಗುವ ಸೌಲಭ್ಯಗಳು:
👉 ಲೇಬರ್ ಕಾರ್ಡ್ ಹೊಂದಿದವರಿಗೆ ಸಿಗುವ ಸೌಲಭ್ಯಗಳು:
👉 ಅಪಘಾತ ಪರಿಹಾರ
👉 ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
👉 ತಾಯಿ ಮಗು ಸಹಾಯಹಸ್ತ
👉 ದುರ್ಬಲತೆ ಪಿಂಚಣಿ ಮುಂದುವರಿಕೆ ಪಿಂಚಣಿ ಮುಂದುವರಿಕೆ
👉 ಹೆರಿಗೆ ಸೌಲಭ್ಯ
👉 ಶೈಕ್ಷಣಿಕ ಸಹಾಯಧನ
👉 ಅಂತ್ಯಕ್ರಿಯೆ ವೆಚ್ಚ
👉 ಮದುವೆ ಸಹಾಯಧನ
👉 ಶ್ರಮಸಾಮರ್ಥ್ಯ ಟೂಲ್ ಕಿಟ್
👉 ಉಚಿತ ಸಾರಿಗೆ ಬಸ್ ಪಾಸ್ ಸೌಲಭ್ಯ.
ನೋಂದಣಿಗೆ ಬೇಕಾಗುವ ದಾಖಲೆಗಳು:
90 ದಿನಗಳ ಉದ್ಯೋಗ ಧೃಢೀಕರಣ ಪತ್ರ
ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಪ್ರತಿ
ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ
ಅರ್ಜಿದಾರರ ಆಧಾರ್ ಕಾರ್ಡ್ ಗೆ ಲಿಂಕ್ ಗೊಂಡ ದೂರವಾಣಿ ಸಂಖ್ಯೆ
ನೋಂದಣಿ ಅಭಿಯಾನ :
ಬೆಂಗಳೂರು ನಗರದಲ್ಲಿ ಸ್ಥಳದಲ್ಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಅಭಿಯಾನವು ಡಿಸೆಂಬರ್ 30 ರಿಂದ ಮಾರ್ಚ್ 31 2024 ರ ವರೆಗೆ ನಡೆಯಲಿದೆ.
Tags
Labour Card