ರೂ 3. ಲಕ್ಷಗಳಿಂದ ರೂ 10 ಲಕ್ಷಕ್ಕೆ ಹೆಚ್ಚಳ
ಜನೆವರಿ 1, 2024 ರಿಂದ ಜಾರಿ
ನಮಸ್ಕಾರ ಸ್ನೇಹಿತರೆ.......
ಇವತ್ತಿನ ಈ ಲೇಖನದಲ್ಲಿ ಬಹುಮುಖ್ಯವಾದ ಮಾಹಿತಿಯನ್ನು ನೀಡಲು ಇಚ್ಛಿಸುತ್ತೇವೆ. ಎಲ್ಲರು ಈ ಮಾಹಿತಿಯನ್ನು ತಿಳಿಯುವುದು ಅವಶ್ಯವಾಗಿದೆ. ಇನ್ನುಮುಂದೆ ಪ್ರಯಾಣಿಕರ ಗಮನಕ್ಕೆ ತಿಳಿಸುವುದೇನೆಂದರೆ ಪ್ರಯಾಣಿಸುವವರ ಜೀವ ಸಂರಕ್ಷಣೆಗೆ ಸರ್ಕಾರ ಕೈಗೊಳ್ಳುತ್ತಿದೆ ಹೊಸ ಪರಿಹಾರ ನಿಧಿ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಅಪಘಾತಕ್ಕೀಡಾಗಿ ಮೃತಪಟ್ಟ ಪ್ರಯಾಣಿಕರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡುವ ಸದುದ್ದೇಶದಿಂದ ಪರಿಹಾರ ಮೊತ್ತವನ್ನು ರೂ 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.
ರೂಪಾಯಿ 49ಕ್ಕಿಂತ ಕಡಿಮೆ ಮುಖಬೆಲೆಯ ಟಿಕೆಟ್ ಗೆ ಯಾವುದೇ ಅಪಘಾತ ಪರಿಹಾರದ ನಿಧಿ ವಂತಿಕೆ ಇರುವುದಿಲ್ಲ. ರೂಪಾಯಿ 50 ರಿಂದ ರೂ 100ರ ವರೆಗಿನ ಮುಖ ಬೆಲೆ ಟಿಕೆಟ್ ಗೆ ರೂ 1 ಹಾಗೂ ರೂ 100ಕ್ಕಿಂತ ಹೆಚ್ಚು ಮುಖಬೆಲೆಯ ಟಿಕೆಟ್ ಗೆ 2 ಅಪಘಾತ ಪರಿಹಾರ ನಿಧಿ ವಂತಿಕೆಯಾಗಿ ಸಂಗ್ರಹಿಸಲಾಗುತ್ತದೆ.
Tags
Govt.scheme

WhatsApp Group