ಸರ್ಕಾರದಿಂದ ಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ಕಡಿಮೆ ದರದಲ್ಲಿ ಟೂರ್ ಪ್ಯಾಕೆಜ್... ಟಿಕೆಟ್ ಬುಕ್ಕಿಂಗ್ ಶುರು!

ಸರ್ಕಾರದಿಂದ ಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ಕಡಿಮೆ ದರದಲ್ಲಿ ಟೂರ್ ಪ್ಯಾಕೆಜ್... ಟಿಕೆಟ್ ಬುಕ್ಕಿಂಗ್ ಶುರು!



 
            ಇದೀಗ ಬಿಜೆಪಿ ಹೊರಿಸಿರುವ ಹಿಂದೂ ವಿರೋಧಿ ಪಟ್ಟದಿಂದ ಕಾಂಗ್ರೆಸ್ ಹೊರಬರಲು ಪ್ಲಾನ್ ಮಾಡಿದ್ದೂ, ಹಿಂದೂ ಭಕ್ತಾದಿಗಳನ್ನು ಗಮದಲ್ಲಿಟ್ಟುಕೊಂಡು ದಕ್ಷಿಣ ಭಾರತದ ಪ್ರಮುಖ ತೀರ್ಥ ಕ್ಷೇತ್ರಗಳಿಗೆ ಟೂರ್ ಪ್ಯಾಕೆಜ್ ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಕರ್ನಾಟಕ ಭಾರತ ಗೌರವ್ ದಕ್ಷಿಣ ಯಾತ್ರಾ ಮೂಲಕ ಹಿಂದೂ ಭಕ್ತಾದಿಗಳ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಕನಸನ್ನು ನನಸು ಮಾಡಲು ಸಿದ್ಧರಾಮಯ್ಯ ಸರ್ಕಾರ ನಿರ್ಧರಿಸಿದ್ದು, ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ದಕ್ಷಿಣ ಯಾತ್ರಾ ಯೋಜನೆ ಜಾರಿಗೊಳಿಸಲಾಗಿದೆ.

ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ನಡೆಯುವ ಈ ಪ್ಯಾಕೇಜ್ ಟೂರ್ ೬ ದಿನಗಳ ಕಾಲ ನಡೆಯಲಿದ್ದು, ಇದಕ್ಕೆ ೧೫ ಸಾವಿರ ರೂಪಾಯಿ ವೆಚ್ಚ ತಗುಲಲಿದೆ. ಆದರೆ ಸರ್ಕಾರದಿಂದ ೫ ಸಾವಿರ ರೂಪಾಯಿ ಸಬ್ಸಿಡಿ ಸಿಗಲಿದೆ.

ಈ ಹಿನ್ನಲೆ ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರಗಳ ಯಾತ್ರೆಗೆ ಹೋರಾಡುವವರು ೧೦ ಸಾವಿರ ರೂಪಾಯಿ ಪಾವತಿಸಬೇಕು ಎಂದು ಪ್ಯಾಕೇಜ್ ಟೂರ್ ನ ನಿಯಮಾವಳಿಗಳಲ್ಲಿ ತಿಳಿಸಲಾಗಿದೆ.

ಈಗಾಗಲೇ IRCTC ರೈಲ್ವೆ ಆಪ್ ಮೂಲಕ ಧಾರ್ಮಿಕ ದತ್ತಿ ಇಲ್ಕಹೆ ಆನ್ಲೈನ್ ಬುಕ್ಕಿಂಗ್ ಶುರು ಮಾಡಿದ್ದೂ, ಮೊದಲ ಹಂತದಲ್ಲಿ ಎರಡು ರೈಲುಗಳಲ್ಲಿ ದಕ್ಷಿಣ ತೀರ್ಥಕ್ಷೇತ್ರಗಳ ಯಾತ್ರೆ ನಡೆಯಲಾಯಿದೆ.

೩ ಟೈಯರ್ ಎಸಿ ಕೋಚ್ ಗಳಲ್ಲಿ ಈ ಯಾತ್ರೆ ನಡೆಯಲಿದ್ದು, ಜನವರಿ ೧೮ರಂದು ಮೊದಲ ರೈಲು ಹೋರಾಡಲಿದ್ದು, ಜನವರಿ ೩೦ರಂದು ಎರಡನೇ ರೈಲು ಹೋರಾಡಲಿದೆ. ಯಾತ್ರಾರ್ಥಿಗಳಿಗೆ ವಿಶೇಷ ವೈದ್ಯಕೀಯ ವ್ಯವಸ್ಥೆಯನ್ನು ಧಾರ್ಮಿಕ ದತ್ತಿ ಇಲಾಖೆ ಮಾಡಲಿದೆ.

whatss
 
ಯಾತ್ರಾರ್ಥಿಗಳಿಗೆ ವಿಶೇಷ ವೈದ್ಯಕೀಯ ವ್ಯವಸ್ಥೆಯನ್ನು ಧಾರ್ಮಿಕ ದತ್ತಿ ಇಲಾಖೆ ಮಾಡಲಿದೆ.

ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ಹಾಗೂ ತಿರುವನಂತಪುರಂ ನ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಲಿದ್ದು, ಯಾತ್ರೆಗೆ ಬರುವವರು ಬೆಳಗಾವಿ, ಹುಬ್ಬಳ್ಳಿ, ಬೀರೂರು ತುಮಕೂರು, ಹಾವೇರಿ, ದಾವಣಗೆರೆ, ಯಶವಂತಪುರ ನಿಲ್ದಾಣಗಳಿಂದ ರೈಲು ಹತ್ತಬಹುದು ಎಂದು ಧಾರ್ಮಿಕದತ್ತಿ ಇಲಾಖೆ ತಿಳಿಸಿದೆ. 

ಶ್ರದ್ಧಾಭಕ್ತಿಯಿಂದ ಆಗಬೇಕಾದ ಕಾರ್ಯಕ್ರಮವನ್ನು ಬಿಜೆಪಿ ರಾಜಕೀಯ ಪ್ರಚಾರಕಕ್ಗಿ ಬಳಸುತ್ತಿದೆ ಎಂದು ಆರೋಪಿಸಿ ಅಯೋಧ್ಯೆಯ ಕಾರ್ಯಕ್ರಮಕ್ಕೆ ಹೋಗಲು ಕಾಂಗ್ರೆಸ್ ನಾಯಕರು ನಿರಾಕರಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್ ಅನ್ನು ಹಿಂದೂ ವಿರೋಧಿ ಎಂದು ಬಿಂಬಿಸಿತ್ತು. ಇದೀಗ ಇದರಿಂದ ಹೊರಬರಲು ಕಾಂಗ್ರೆಸ್ ಪಕ್ಕ ಪ್ಲಾನ್ ಮಾಡಿದೆ.
 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು