ಕೇಜಿಗೆ ರೂ29 ರಂತೆ ಭಾರತ ಅಕ್ಕಿ ಮಾರಾಟ ಶುರು !
ಮೊದಲ ದಿನವೇ ಮುಗಿದುಬಿದ್ದು ಖರೀದಿಸಿದ ಜನರು ರಾಜ್ಯದಂತ 25 ವಾಹನಗಳಲ್ಲಿ ಕೇಂದ್ರೀಕೃತ ಅಕ್ಕಿ ಮಾರಾಟ
ನಮಸ್ಕಾರ ಸ್ನೇಹಿತರೆ......
ಬೆಲೆ ಏರಿಕೆ ಹಿನ್ನಲೆಯಲ್ಲಿ ಜನರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಭಾರತ ಅಕ್ಕಿ ಯೋಜನೆ ಯಡಿ ಕೆಜಿ ಗೆ 29 ರೂ ನಂತೆ ಅಕ್ಕಿ ಮಾರಾಟ ಪ್ರಾರಂಭಿಸಿದ್ದು ಭಾರಿ ಬೇಡಿಕೆ ವ್ಯಕ್ತವಾಗಿದೆ.
ಕಡಿಮೆ ಬೆಲೆಗೆ ಸಿಗಲಿದೆ ಭಾರತ ಅಕ್ಕಿ .....
ಈ ಯೋಜನೆಗೆ ಎಪ್ ಸಿ ಐ ಅಧ್ಯಕ್ಷ ಭೂಪೇಂದ್ರ ಸಿಂಗ್ ಅವರು ಚಾಲನೆ ನೀಡ್ದಿದಾರೆ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳಿ ರೈತರಿಂದ ನೇರವಾಗಿ ಅಕ್ಕಿ ಖರೀದಿಸಿ ಕಡಿಮೆ ಬೆಲೆಯಲ್ಲಿ ಈ ಯೋಜನೆಯಡಿ ಅಕ್ಕಿ ಮಾರಾಟ ಮಾಡಲಿದೆ .10 ಕೆಜಿ ಭಾರತ ಅಕ್ಕಿಗೆ 290 ರೂ ನಂತೆ ಮಾರಾಟ ಮಾಡುತಿದ್ದರು ಎಪಿಎಲ್ ಬಿಪಿಯಲ್ ಅಂತ್ಯೋದಯ ಸೇರಿದಂತೆ ಯಾವುದೇ ಪಡಿತರ ಚೀಟಿಯ ಅವಶ್ಯಕತೆ ಇಲ್ಲದೆ ಯಾರು ಬೇಕಾದರೂ ಈ ಅಕ್ಕಿಯನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ರಾಜ್ಯದೆಂತ 25 ಸಂಚಾರಿ ವಾಹನಗಳಲ್ಲಿ ಅಕ್ಕಿ ಮಾರಾಟ ಮಾಡುತಿದ್ದರು ,ಬೆಂಗಳೂರಿನಲ್ಲಿ ಜನ ಸಂಖ್ಯೆ ಹೆಚ್ಚಾಗಿ ವಾಸವಿರುವಂತಹ 5 ಪ್ರದೇಶಗಳಲ್ಲಿ ಸಂಚಾರಿ ವಾಹನದ ಮೂಲಕ 29 ರೂಗಳಿಗೆ ಅಕ್ಕಿ ಮಾರಾಟ ಮಾಡಲಾಗುತಿತ್ತು ಇದರೊಂದಿಗೆ ಗೋದಿಯನ್ನು ಕೆ ಜಿ ಗೆ 50 ರೂ ಹೆಸರು ಕಾಳು 90 ತೊಗರಿ ಬೇಳೆ ರ 60 ರಂತೆ ಮಾರಾಟ ಮಾಡಲಾಗುತದೆ ಮಂಗಳವಾರದಿಂದಲೇ ರಿಲಾಯನ್ಸ್ ಮಾರ್ಕೆಟ್ ಗಳಲ್ಲಿ ಅಕ್ಕಿ ಸಿಗುತ್ತದೆ .
ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳಿ ರಾಷ್ಟ್ರಿಯ ಸಹಕಾರ ಗ್ರಾಹಕರ ಮಹಾಮಂಡಳಿ ಹಾಗು ಕೇಂದ್ರೀಯ ಬಂಡಾರಗಳು ಮತ್ತು ಇ ಕಾಮರ್ಸ್ ವೇದಿಕೆಗಳ ಮೂಲಕ ಅಕ್ಕಿ ಮಾರಾಟಕ್ಕೆ ಸರ್ಕಾರ ನಿರ್ಧರಿಸಲಿದೆ .ಮೊದಲ ಹಂತದಲ್ಲಿ ಚಿಲ್ಲರೆ ಮಾರಾಟಕ್ಕೆ5 ಲಕ್ಷ ಟನಗಳಷ್ಟು ಅಕ್ಕಿಯನ್ನು ಬಿಡುಗಡೆ ಮಾಡಿರುವುದಾಗಿ ನಾಫೆಡ್ ಸಂಸ್ಥೆ ಮೂಲಕ ತಿಳಿಸಿವೆ .
ಭಾರತ್ ಅಕ್ಕಿ ಕೆಜಿ ಗೆ 29 ಮಾತ್ರ !!
ಕಡಿಮೆ ಬೆಲೆಯಲ್ಲಿ 5 ಕೆಜಿ ಮತ್ತು 10 ಕೆ ಜಿ ಯು ಚೀಲದಲ್ಲಿ ಅಕ್ಕಿಯನ್ನು ಮಾರಾಟ ಮಾಡಲಾಗುತಿದ್ದು ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅಕ್ಕಿ ಖರೀದಿಸಬಹುದು ಇದರೊಂದಿಗೆ ಗೋಧಿ, ಹೆಸರುಕಾಳು, ತೊಗರಿ ಬೆಳೆಯನ್ನು ಸಹ ನಿಗದಿತ ದರ ಪಾವತಿಸಿ ಕೊಂದುಕೊಳಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ .
ಗ್ರಾಹಕರು ಸಂಚಾರಿ ವಾಹನದಲ್ಲಿ ಬಂದ 29 ರೂ ಬೆಲೆಯಲ್ಲಿ ಅಕ್ಕಿಯನ್ನು ಮುಗಿಬಿದ್ದು ಖರೀದಿಸುತ್ತಿದ್ದ ದೃಶ ಕಂಡು ಬಂತು .ಡಾಲರ್ಸ್ ಕಾಲೋನಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆಗೆ ಚಾಲನೆ ಕೊಟ್ಟು ಯಡಿಯೂರಪ್ಪ ಅವರು ಅವರು ಯೋಜನೆಗೆ ಚಾಲನೆ ಕೊಟ್ಟ ಬಳಿಕ ವಾಹನಗಳಲ್ಲಿ ತುಂಬಲಾಗಿದ್ದ ಅಕ್ಕಿ ಕೆಲವೇ ನಿಮಿಷಗಳಲ್ಲಿ ಖಾಲಿಯಾಗಿತ್ತು. ಇದೆ ಪರಿಸ್ಥಿತಿ ಇತರ ಪ್ರದೇಶಗಳಲೂ ಇದ್ದು ಪ್ರತಿಯೊಬ್ಬರು ಅಕ್ಕಿ ಖರೀದಿಸುತ್ತಿದ್ದರು ರಿಲಯನ್ಸ್ ಸ್ಮಾರ್ಟ್ ಬಜಾರ್ ನಲ್ಲೂ 29 ರೂ ಬೆ ಲೆಗೆ ಅಕ್ಕಿ ಖರೀದಿ ಭರಾಟೆ ಜೋರಾಗಿತ್ತು