ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಅಹ್ವಾನ: ಅರ್ಹರು ಕೂಡಲೇ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ :
ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಕೊಡಮಾಡಲಾಗುತ್ತಿರುವ ಸ್ವಾವಲಂಬಿ ಸಾರಥಿ ಯೋಜನೆ ಕುರಿತಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ದಿನಾಂಕ ಹಾಗೂ ಏನೆಲ್ಲಾ ದಾಖಲಾತಿ ಬೇಕು ಎಂಬುದನ್ನ ಸಂಪೂರ್ಣವಾಗಿ ತಿಳಿಸಲಾಗಿದೆ. ಕೊನೆವರೆಗೂ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.
ಸ್ವಾವಲಂಬಿ ಸಾರಥಿ ಯೋಜನೆ:
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನ ಖರೀದಿಗೆ ಬ್ಯಾಂಕ್ ಗಳಿಂದ ಪಡೆಯುವ ಸಾಲಕ್ಕೆ ಶೇ 50 ರಷ್ಟು ಗರಿಷ್ಟ ರೂ 3 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುವುದು.
ಅರ್ಹರು:
ಸೌಲಭ್ಯ ಪಡೆಬಯಸುವವರು ಹಿಂದುಳಿದ ವರ್ಗಗಳ ಪ್ರವಾಗ-1, 2ಎ, 3ಎ, ಮತ್ತು ೩ಬಿ ಗೆ ಸೇರಿದವರಾಗಿರಬೇಕು.
ವಿಶ್ವಕರ್ಮ
ಉಪ್ಪಾರ
ಅಂಬಿಗ
ಸವಿತಾ
ಮಡಿವಾಳ
ಅಲೆಮಾರಿ ಮತ್ತು
ಅರೆ ಅಲೆಮಾರಿ ಸಮುದಾಯ,
ಒಕ್ಕಲಿಗ ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ, ಮತ್ತು ಇದರ ಉಪ ಸಮುದಾಯಗಳು ಹೊರತುಪಡಿಸಿ)
ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98,000/- ಗಳು ಪಟ್ಟಣ ಪ್ರದೇಶದವರಿಗೆ 1,20,000 ಗಳ ಒಳಗಿರಬೇಕು. ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಮಿತಿಯಲ್ಲಿರಬೇಕು.
ದಾಖಲೆಗಳು:
💨 ಅರ್ಜಿದಾರ ಆಧಾರ ಕಾರ್ಡ್
💨 ಬ್ಯಾಂಕ್ ಪಾಶ್ ಬುಕ್
💨 ಮೊಬೈಲ್ ಸಂಖ್ಯೆ
💨 ಅರ್ಜಿದಾರರ ಲಘು ವಾಹನ ಚಾಲನ ಪರವಾನಗಿಯನ್ನು ಹೊಂದಿರಬೇಕು.