ಗುಡ್ ನ್ಯೂಸ್ : ಈ ವರ್ಗದ ಮಹಿಳೆಯರಿಗೆ, ಉಚಿತ ಹೊಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ !

 ಗುಡ್ ನ್ಯೂಸ್ : ಈ ವರ್ಗದ ಮಹಿಳೆಯರಿಗೆ, ಉಚಿತ ಹೊಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ !

ಉಚಿತ ಹೊಲಿಗೆ ತರಬೇತಿ :ಸ್ವಾವಲಂಬನೆಯ ಹಾದಿಯತ್ತ ಒಂದು ಖಚಿತ ಹೆಜ್ಜೆ


 



ಮಹಿಳೆಯರೇ , ಗಮನಿಸಿ !

ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ನಿಮಗಾಗಿ ಒಂದು ಅದ್ಭುತ ಅವಕಾಶವನ್ನು ತಂದಿದೆ. 30 ದಿನಗಳ ಉಚಿತ ಹೊಲಿಗೆ ತರಬೇತಿಯ ಮೂಲಕ ಸ್ವಾವಲಂಬನೆಯ ಹಾದಿಯತ್ತ ಖಚಿತವಾಗಿ ನಡೆಯಲು ಈ ತರಬೇತಿ ನಿಮಗೆ ಸಹಾಯ ಮಾಡುತ್ತದೆ. ತರಬೇತಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಅದರ ಅವಧಿ ಎಷ್ಟು ? ತರಬೇತಿಗೆ ಅರ್ಹತೆ ಏನು ?ಸ್ವಉದ್ಯೋಗಕ್ಕೆ ಬ್ಯಾಂಕ್ ಯಾವ ರೀತಿಯ ಸಾಲಗಳನ್ನು ಒದಗಿಸುತ್ತದೆ ಮತ್ತು ಅವುಗಳ ಬಡ್ಡಿದರ ಎಷ್ಟು ?, ಎಂದು ತಿಳಿಯಲು ನಮ್ಮ ಈ ವರದಿಯನ್ನು ಸಂಪೂರ್ಣವಾಗಿ ಓದಿ .

ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತ ಹೊಲಿಗೆ ತರಬೇತಿ ಮಹಿಳೆಯರಿಗೆ ಸ್ವಾವಲಂಬನೆಯ ಹಾದಿ ತೋರಿಸುವ ಉತ್ತಮ ಅವಕಾಶ. ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಲು ಉದ್ದೇಶಿಸಿದೆ. ಈ ತರಬೇತಿಯು ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದರ ಜೊತೆಗೆ ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ.


whatss

 

ಹೋಳಿಗೆ ತರಬೇತಿಯಿಂದಾಗುವ ಪ್ರಯೋಜನೆಗಳು :

* ಉಚಿತ ತರಬೇತಿ :ಈ ತರಬೇತಿಯಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿಲ್ಲ. 

* ಅನುಭವಿ ತರಬೇತುದಾರರು : ಈ ತರಬೇತಿಯನ್ನು ನುರಿತ ಮತ್ತು ಅನುಭವಿ ತರಬೇತುದಾರರು ನೀಡುತ್ತಾರೆ.

* ಆಧುನಿಕ ಉಪಕರಣಗಳು : ತರಬೇತಿಗೆ ಅಗತ್ಯವಿರುವ ಎಲ್ಲಾ ಆಧುನಿಕ ಉಪಕರಣಗಳನ್ನು ಸಂಸ್ಥೆಯು ಒದಗಿಸುತ್ತದೆ.

* ವೃತ್ತಿಪರ ಮಾರ್ಗದರ್ಶನ : ತರಬೇತಿಯ ನಂತರ, ಉದ್ಯೋಗಾವಕಾಶಗಳನ್ನು ಪಡೆಯಲು ವೃತ್ತಿಪರ ಮಾರ್ಗದರ್ಶನ ನೀಡಲಾಗುವುದು.

* ಸ್ವಉದ್ಯೋಗಕ್ಕೆ ಪ್ರೋತ್ಸಾಹ : ಸ್ವಂತ ಉದ್ಯೋಗ ಪ್ರಾರಂಭಿಸಲು ಬಯಸುವವರಿಗೆ ಸಾಲ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡಲಾಗುವುದು.



ತರಬೇತಿಗೆ ಬೇಕಾದ ಅರ್ಹತೆಗಳು :

ಈ ಕೆಳಗಿನವರು 30 ದಿನಗಳ ಉಚಿತ ಹೊಲಿಗೆ ತರಬೇತಿಯಲ್ಲಿ ಭಾಗವಹಿಸಲು ಅರ್ಹರು

18 ರಿಂದ 45 ವರ್ಷದೊಳಗಿನವರು 

ಕನ್ನಡ ಓದು ಬರಹ ಬಲ್ಲವರು 

ಸ್ವಯಂ ಉದ್ಯೋಗ ಪ್ರಾರಂಭಿಸಲು ಆಸಕ್ತಿ ಹೊಂದಿರುವವರು 

ಗಮನಿಸಿ :

ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ತರಬೇತಿ ಉಚಿತವಾಗಿದ್ದು,ಊಟ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು 

ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಿತ ಸಂಸ್ಥೆಯನ್ನು ಸಂಪರ್ಕಿಸಬೇಕು.

ತರಬೇತಿಯ ಪ್ರಾರಂಭ ದಿನ :

                          ಹೊಲಿಗೆ ಯಂತ್ರ ತರಬೇತಿಯು ಮರ್ಚ್ 18,2024 ರಂದು ಪ್ರಾರಂಭವಾಗಿ ಏಪ್ರಿಲ್ 18,2024 ರಂದು ಕೊನೆಗೊಳ್ಳುತ್ತದೆ.ತರಬೇತಿಯು ಒಟ್ಟು 30 ದಿನಗಳವರೆಗೆ ಇರುತ್ತದೆ.

ತರಬೇತಿ ನೀಡುವ ಸ್ಥಳದ ವಿವರಗಳು 

            ಕೆನರಾ  ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ, ಇಂಡಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ -581343

ಅರ್ಜಿ ಸಲ್ಲಿಸುವುದು ಹೇಗೆ :

                ಕೆನರಾ ಬ್ಯಾಂಕ್, ಗ್ರಾಮೀಣ ಸ್ವಯ ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಕೇಂದ್ರದ ಈ 944 986 0007, 953 828 1989 9916 783 825,8880 444612 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಅಗತ್ಯ ವಿವರಗಳನ್ನು ಒದಗಿಸಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಾಲಾತಿಗಳು :

* ಬೇಕಾದ ದಾಖಲೆಗಳು

* ಆಧಾರ್ ಕಾರ್ಡ್ ಪ್ರತಿ,

* ಬ್ಯಾಂಕ್ ಪಾಸ್ ಬುಕ್,

* ರೇಷನ್ ಕಾರ್ಡ್,

* ಫೋಟೋ 

* ತರಬೇತಿ ಆರಂಭವಾಗುವ ದಿನ ಈ ದಾಖಲೆಗಳನ್ನು ತೆಗೆದುಕೊಂಡು ನೇರವಾಗಿ ತರಬೇತಿಯಲ್ಲಿ ಭಾಗವಹಿಸಬಹುದು.


 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು