Scholarship application- ಕಾರ್ಮಿಕ ಮಂಡಳಿಯಿಂದ ರೂ. 10,000ರವರೆಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ !
ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಯಿಂದ ವಿದ್ಯಾರ್ಥಿವೇತನ (Scholarship application ) ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ( Labour department) ವಿದ್ಯಾರ್ಥಿವೇತನ ( Scholarship application) ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯವನ್ನು ಪ್ರತಿ ವರ್ಷ ಮಂಡಳಿಯಿಂದ ನೀಡಲಾಗುತ್ತಿದೆ.
ಅದರಂತೆ 2023-24 ನೇ ಸಾಲಿನಲ್ಲಿ ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಧನ ಸಹಾಯವನ್ನು ( Education Assistance) ಪಡೆಯಲು ಎಲ್ಲಾ ಅರ್ಹ ಫಲಾನುಭವಿಗಳು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ ( SSP)ದ ಮೂಲಕ ಅರ್ಜಿಯನ್ನು 31-05-2024 ರೊಳಗೆ ಸಲ್ಲಿಸತಕ್ಕದ್ದು ಎಂದು ಮಂಡಳಿಯಿಂದ ಪ್ರಕಟಣೆ ಹೊರಡಿಸಲಾಗಿದೆ.
Milk Incentive-2024: ಹಾಲಿನ ಪ್ರೋತ್ಸಹ ಧನ ಅಕೌಂಟ್ ಗೆ ಜಮಾ ಆಗಿರುವುದನ್ನು ಹೇಗೆ ಚೆಕ್ ಮಾಡುವುದು ?
2023-24 ನೇ ಸಾಲಿಗಾಗಿ ಈಗಾಗಲೇ ಎಸ್ ಎಸ್ ಪಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಪುನಃ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಕಾರ್ಮಿಕ ಮಂಡಳಿಯ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
2023-24 ನೇ ಸಾಲಿನಲ್ಲಿ ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ( Labour department karnataka) ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಧನ ಸಹಾಯವನ್ನು ಎಸ್ ಎಸ್ ಪಿ ತಂತ್ರಾಂಶದ ಮೂಲಕ ನೀಡಲು ಅನುಕೂಲವಾಗುವಂತೆ ಮಂಡಳಿಯಲ್ಲಿ ನೋಂದಣಿಯಾಗಿರುವ ಎಲ್ಲಾ ಕಾರ್ಮಿಕರು https://kbocwwb.karnataka.gov.in ಲಿಂಕ್ ಅನ್ನು ಉಪಯೋಗಿಸಿಕೊಂಡು ಮಂಡಳಿಯ ತಂತ್ರಾಂಶದಲ್ಲಿ Already Existing Seva Sindhu Construction Worker / E-Karmika Construction Worker ಮತ್ತು ಉಲ್ಲೇಖ ( Reference No.) ಸಂಖ್ಯೆಯನ್ನು ನಮೂದಿಸಿ ಆಧಾರ್ ಸಂಖ್ಯೆಯನ್ನು ಲಿಂಕ್ (ಸೀಡ್ ) ಮಾಡತಕ್ಕದ್ದು.
School admission- ಉಚಿತವಾಗಿ 12 ಸಾವಿರ ಸೀಟ್ ಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ !
NPCI mapping- ಆಧಾರ್ ಲಿಂಕ್ ಮಾಡಲು ಸೂಚನೆ :
ಮಂಡಳಿಯಿಂದ ಶೈಕ್ಷಣಿಕ ಧನ ಸಹಾಯವನ್ನು ಪಡೆಯಲು ಇದು ಆತ್ಮವಶ್ಯಕವಾಗಿರುವುದರಿಂದ ಈಗಾಗಲೇ ಆಧಾರ್ ಸಂಖ್ಯೆಯನ್ನು ಲಿಂಕ್ ( Aadhar link ) ಮಾಡದೇ ಇರುವ ಎಲ್ಲಾ ಕಾರ್ಮಿಕರು ಕಡ್ಡಾಯವಾಗಿ ದಿನಾಂಕ :30-06-2024 ರೊಳಗಾಗಿ ಆಧಾರ್ ಸಂಖ್ಯೆಯನ್ನು ಲಿಂಕ್ (ಸೀಡ್ ) ಮಾಡತಕ್ಕದ್ದು.
ಇದಲ್ಲದೆ, ಎಲ್ಲಾ ನೋಂದಾಯಿತ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿ NPCI ( National Payments Corporation of India) ಮ್ಯಾಪಿಂಗ್ ಮಾಡಿಸತಕ್ಕದ್ದು.ಆಧಾರ್ ಸೀಡ್ ಹಾಗೂ NPCI ಮಾಡಿಸದೇ ಇರುವ ಕಾರ್ಮಿಕರಿಗೆ ಶೈಕ್ಷಣಿಕ ಧನ ಸಹಾಯ ನೀಡಲು ಸಾದ್ಯವಾಗುವುದಿಲ್ಲವಾದ್ದರಿಂದ ಕಡ್ಡಾಯವಾಗಿ ಸೀಡಿಂಗ್ ಮಾಡಿಸತಕ್ಕದ್ದು ಎಂದು ಸೂಚಿಸಲಾಗಿದೆ.
Agriculture university courses- ಕೃಷಿ ವಿಶ್ವವಿದ್ಯಾನಿಲಯ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸಗಳಿಗೆ ಅರ್ಜಿ ಆಹ್ವಾನ !
ಅರ್ಜಿ ಸಲ್ಲಿಸಲು ವಿಧಾನ :
ವಿದ್ಯಾರ್ಥಿಗಳು ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ SSP Portal ಅನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಒದಗಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು
ಅರ್ಜಿ ಸಲ್ಲಿಸಲು 31 ಮೇ 2024 ಕೊನೆಯ ದಿನ !
Education Assistance details- ಮಂಡಳಿಯಿಂದ ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ?
1) ಪ್ರೌಢಶಾಲೆಗಳಿಗೆ ( 8ನೇ ತರಗತಿಯಿಂದ 10ನೇ ತರಗತಿವರೆಗೆ )-ರೂ .3,000/-
2) PUC/ITI/Dip./TCH ಕೋರ್ಸ್ ಗಳಿಗೆ -ರೂ 4,000/-
3) ಪದವಿ ಕೋರ್ಸ್ಗಳಿಗೆ -ರೂ .5,000/-
4) ಸ್ನಾತಕೋತ್ತರ ಕೋರ್ಸ್ಗಳಿಗೆ -ರೂ .6,000/-
5) ಎಂಜಿನಿಯರಿಂಗ್ / ವೈದ್ಯಕೀಯ ಕೋರ್ಸ್ ಗಳು -ರೂ .10,000/- ನೀಡಲಾಗಿತ್ತದೆ ( ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 50% ಮತ್ತು SC/ST ವರ್ಗದ ಅಭ್ಯರ್ಥಿಗಳಿಗೆ 45% ಅಂಕಗಳನ್ನು ನಿಗದಿಪಡಿಸಲಾಗಿದೆ.)